ಎಸ್‌ಐಐಎಂಎ ಎಂದರೇನು ಗೊತ್ತಾ? ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಎಂದರ್ಥ. ಹೌದು, ಇದೀಗ ಎಂಟನೇ ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭಕ್ಕೆ ಕತಾರ್ ದೇಶ ಸಿದ್ಧವಾಗಿದೆ. ಕತಾರ್ ದೇಶದ ರಾಜಧಾನಿ ದೋಹಾದಲ್ಲಿ ಈ ಕಾರ್ಯಕ್ರಮ ನಡೆಯುತ್ತುದೆ. ನಾಳೆ ಮತ್ತು ನಾಡಿದ್ದು ಈ ಸಮಾರಂಭವು ಅತ್ಯಂತ ವರ್ಣರಂಜಿತವಾಗಿಯೇ ನಡೆಯಲಿದೆ. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಹಲವು ಚಿತ್ರಗಳು ಪ್ರಶಸ್ತಿಯ ಕೊನೆಯ ಹಂತದಲ್ಲಿ ಸ್ಪರ್ಧೇ ನಡೆಸುತ್ತಿವೆ.

ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಆಯ್ಕೆ ಆದ ಸಿನಿಮಾಗಳು ಯಾವುವು ಗೊತ್ತೇ? ಅವು ಟಗರು, ಕೆಜಿಎಫ್ ಚಾಪ್ಟರ್ , ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು, ರ್ಯಾಂಬೋ ೨, ಅಯೋಗ್ಯ ಚಿತ್ರಗಳನ್ನು ನಾಮಕರಣ ಮಾಡಲಾಗಿದೆ. ಅಲ್ಲದೇ ಅತ್ಯುತ್ತಮ ಪ್ರಶಸ್ತಿಗೆ ನಟ ಶಿವರಾಜ್ ಕುಮಾರ್, ಅನಂತನಾಗ, ಸತೀಶ್ ನೀನಾಸಂ, ಯಶ್ ಹಾಗೂ ಶರಣ್ ನಡುವೆ ಸ್ಪರ್ಧೆ ಇದೆ.

ಇನ್ನು ಈ ಸಮಾರಂಭದ ಮತ್ತೊಂದು ವಿಶೇಷ ಏನು ಗೊತ್ತಾ? ಈ ಸಮಾರಂಭದಲ್ಲಿ ದಕ್ಷೀಣ ಭಾರತದ ನಾಲ್ಜು ಭಾಷೆಗಳಲಲ್ಲಿ ಚಿತ್ರರಂಗದಲ್ಲಿ ಇದ್ದುಕೊಂಡಿ ಸಾಧನೆ ಮಾಡಿದದವರಿಗೆ ಒಂದು ಪ್ರಶಸ್ತಿಯನ್ನು ನೀಡಲಾಗುವುದು. ಈ ಬಾರಿ ದಕ್ಷಿಣ ಭಾರತದ ಚಿತ್ರರಂಗದ 'ಪ್ಯಾಂಟಲೂನ್ಸ್‌ ಸೈಮಾ ಸ್ಟೈಲ್‌ ಐಕಾನ್‌' ವಿಶೇಷ ಪ್ರಶಸ್ತಿ ಎಲ್ಲರ ಗಮನ ಸೆಳೆದಿದೆ . ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪ್ರಶಸ್ತಿಗೆ ಕನ್ನಡದ ಯಶ್‌, ತಮಿಳಿನ ವಿಜಯ್‌, ಧನುಷ್‌ ಮತ್ತು ಮಲಯಾಳಂನ ಟೊವಿನೊ ಥಾಮಸ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಕೊನೆಗೆ ಪ್ರಶಸ್ತಿ ಯಾರ ಮುಡಿಲಿಗೇರುತ್ತದೆ ಎನ್ನುವುದು ಮುಖ್ಯ.

ಇನ್ನು ನಟಿಯಲ್ಲಿ ಈ ಪ್ರಶಸ್ತಿಗೆ ಕಾಜೊಲ್‌ ಅಗರವಾಲ್‌, ಸಮಂತಾ ಪ್ರಭು, ಶ್ರುತಿಹಾಸನ್‌ ಮತ್ತು ತಮನ್ನಾ ಸೇರಿದಂತೆ ಹಲವರು ಕಣದಲ್ಲಿದ್ದಾರೆ. ಆದರೆ ಇದು ಬಹುಶಃ ಸಮಂತಾ ಅವರಿಗೆ ದಕ್ಕುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಭಾರತದ ಖ್ಯಾತನಾಮ ನಟ, ನಟಿ ಮತ್ತು ತಂತ್ರಜ್ಞರು ಅಷ್ಟೇ ಅಲ್ಲದೇ ಕಲಾವಿದರು ಈ ಅದ್ದೂರಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.


Find out more: