ವಿಷ್ಣುವರ್ಧನ್ ಅವರ ಸಿನಿ ಜೀವನದಲ್ಲಿ ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ಚಿತ್ರವೆಂದರೆ ಅದು ನಿಷ್ಕರ್ಷ. ಹೌದು ಇದು ವಿಷ್ಣು ಜೀವನದಲ್ಲಿನ ವಿಭಿನ್ನ ಚಿತ್ರಗಳಲ್ಲಿ ಒಂದು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇದು ಸುನೀಲ್ ಕುಮಾರ್ ದೇಸಾಯಿ ಹಾಗೂ ವಿಷ್ಣುವರ್ಧನ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಚಿತ್ರ. ಅಷ್ಟಕ್ಕೂ ಈ ಚಿತ್ರ ತೆರೆ ಕಂಡಿದ್ದು ಯಾವಾಗ ಗೊತ್ತಾ? ಅದು 1993ರಲ್ಲಿ ಅಂದರೆ ನಿಮಗೆ ಆಶ್ಚರ್ಯ ಆಗಬಹುದು.
ಹೌದು. ಇದು ನಿಜ. ಚಿತ್ರ ತೆರೆ ಕಂಡು 25 ವರ್ಷಗಳಾಯ್ತು. ಆದರೂ ಈ ಚಿತ್ರ ಸಿನಿ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಇದರಲ್ಲಿ ಕೇವಲ ವಿಷ್ಣುವರ್ಧನ್ ಅಲ್ಲದೇ ಅನಂತ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರಕರ್, ರಮೇಶ್ ಭಟ್, ಪ್ರಕಾಶ್ ರಾಜ್, ಮೊದಲಾದವರು ಇದ್ದರು. ನಟ ಬಿ.ಸಿ.ಪಾಟೀಲ್ ಅವರು ತಮ್ಮ ಸೃಷ್ಠಿ ಫಿಲಂಸ್ ಮೂಲಕ ನಿಷ್ಕರ್ಷವನ್ನು ನಿರ್ಮಾಣ ಮಾಡಿದ್ದರು.
1993ರಲ್ಲಿ ಬಿಡುಗಡೆ ಆಗಿದ್ದ ಈ ಚಿತ್ರ ಆವಾಗಲೇ ಶತದಿನೋತ್ಸವ ಆಚರಿಸಿತ್ತು. ಈ ಸಿನಿಮಾ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಆದರೆ ಇದೀಗ ವಿಷ್ಯ ಏನಪ್ಪ ಅಂದರೆ, ನಿಷ್ಕರ್ಷ ಚಿತ್ರದ ಬಗ್ಗೆ ಹೊಸದೊಂದು ಮಾಹಿತಿ ಇದೀಗ ಹೊರ ಬಿದ್ದಿದೆ. ಹಾಗಾದರೆ ಆ ಮಾಹಿತಿಯಾದರೂ ಏನು ಅನ್ನೋ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ ನೋಡಿ.
ಹಾಲಿವುಡ್‌ನ ಚಿತ್ರ 'ಡೈ ಹಾರ್ಡ್’ ಅನ್ನೋ ಚಿತ್ರದ ಪ್ರೇರಣೆಯಿಂದ ಈ ಚಿತ್ರ ನಿರ್ಮಾಣ ಆಗಿತ್ತು. ಇದೀಗ ನಿಷ್ಕರ್ಷವನ್ನು ಮತ್ತೆ ತೆರೆ ಮೇಲೆ ನೋಡಲಿದ್ದೀರಿ. ಹೌದು. ಮುಂಬರುವ ತಿಂಗಳು ಅಂದರೆ ಸೆಪ್ಟೆಂಬರ್ 18ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಹೀಗಾಗಿ ವಿಷ್ಣು ದಾದಾ ಹುಟ್ಟು ಹಬ್ಬದ ಕೊಡುಗಡೆ ಆಗಿ ಈ ಸಂದರ್ಭದಲ್ಲಿ “ನಿಷ್ಕರ್ಷ’ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದ ನಟ ಕಂ ನಿರ್ಮಾಪಕ ಬಿ.ಸಿ ಪಾಟೀಲ್ ಅವರೇ ಈ ಚಿತ್ರವನ್ನು ಮತ್ತೂಮ್ಮೆ ತೆರೆಗೆ ತರುತ್ತಿದ್ದಾರೆ.
ನಿಷ್ಕರ್ಷ ಚಿತ್ರದ ವಿತರಣೆಯ ಹೊಣೆಯನ್ನು ಜಯಣ್ಣ ಹೆಗೆಲೇರಿದೆ. ಈ ಚಿತ್ರವನ್ನು ಸುಮಾರು ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.