ಹೆಸರು ನೋಡಿದ್ರೆ, ಗೊತ್ತಾಗುತ್ತೆ ಇದು ಹೆಣ್ಮಕ್ಕಳ ಕುರಿತು ಮಾಡಿದ ಸಿನಿಮಾ ಎಂದು. ಹೌದು ಇಂತಹ ಕಥೆಯ ಸಿನಿಮಾ ಕನ್ನಡದಲ್ಲಿ ಈಗಾಗಲೇ ಬಂದಿವೆ. ಹೆಣ್ಮಕ್ಕಳ ಕಡೆಯಿಂದ ಈ ಸಿನಿಮಾದಲ್ಲಿ ಕಥೆ ಹೇಳಿಸಲಾಗಿದೆ.ಹೌದು, ಈ ವಾರ ತೆರೆಗೆ ಬಂದಿರುವ ಪುಣ್ಯಾತ್‌ಗಿತ್ತೀರು ಚಿತ್ರ ಹೆಣ್ಮಕ್ಕಳ ಗಮನವನ್ನು ಸೆಳೆದಿದೆ. ಇದು ನಾಲ್ಕು ಹುಡುಗಿಯರ ಸುತ್ತಲೂ ನಡೆಯುವ ಕಥೆ. 


ಹಾಗಾದರೆ ಈ ಚಿತ್ರಕತೆಯಲ್ಲಿ ಏನಿದೆ? ಏನಿಲ್ಲ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಈ ಸಿನಿಮಾದಲ್ಲಿ ನಾಲ್ಕು ಹುಡುಗಿಯರು ಇದ್ದಾರೆ. ಇವರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಬಂದಿರುತ್ತಾರೆ. ಆದರೆ, ಕೊನೆಗೆ ಎಲರೂ ಒಂದು ಕಡೆ ಸೇರುತ್ತಾರೆ. ಇನ್ನೊಂದು ವಿಶೇಷ ಏನೆಂದರೆ ಇಚರಿಗೆ ದಿಕ್ಕು-ದೆಸೆಯಿಲ್ಲದ ನಾಲ್ಕು ಹುಡುಗರು ಕೂಡ ಸ್ನೇಹಿತರಾಗುತ್ತಾರೆ.


ಆದರೆ ಈ ಹುಡುಗರು ಅನಿವಾರ್ಯ ಕಾರಣಗಳಿಂದ ದಾರಿ ತಪ್ಪಿರುತ್ತಾರೆ, ಹೌದು ಮಹಾನಗರದಲ್ಲಿ ಜೀವನ ನಡೆಸೋದು ಕಷ್ಟ ಎಂದುಕೊಂಡು ಇನ್ನೊಬ್ಬರಿಗೆ ಟೋಪಿ ಹಾಕುವ ಕಾಯಕವನ್ನು ಆಯ್ದುಕೊಂಡಿರುತ್ತಾರೆ. ಹೌದು ಬದುಕಿನ ಅನಿವಾರ್ಯತೆಗೆಈ ಹುಡುಗರು ಪ್ರತಿನಿತ್ಯ ಹತ್ತಾರು ಜನಕ್ಕೆ ಟೋಪಿ ಹಾಕುವುದು ಈ ಚಿತ್ರದಲ್ಲಿದೆ. ಆದರೆ ಕೊನೆಗೆ ಏನಾಗುತ್ತದೆ? ಅವರಿಗೆ ತಾವು ಮಾಡುವುದು ತಪ್ಪು ಎಂದು ಗೊತ್ತಾಗುತ್ತಾ? ಜ್ಞಾನೋದಯ ಆದ ಮೇಲೆ ಅವರು ಮಾಡುವುದು ಏನು ಅನ್ನೋದು ಗೊತ್ತಾಗಬೇಕಾದರೆ ಸಿನಿಮಾ ನೋಡಬೇಕು.


ಈ ಚಿತ್ರದಲ್ಲಿ  ಒಂದಷ್ಟು ನಿರೀಕ್ಷಿತ ತಿರುವುಗಳು ಹಾಗೂ ಟ್ವಿಸ್ಟ್‌ಗಳು ಇವೆ. ಆದರೆ ಕೊನೆಗೆ ಕ್ಲೈಮ್ಯಾಕ್ಸ್ ಮಾತ್ರ ಸುಖಾಂತ್ಯವಾಗಿದೆ ಅನ್ನೋದು ಸಮಾಧಾನ.  ಈ ಚಿತ್ರದಲ್ಲಿ ಹೊಸತನ ನಿರೀಕ್ಷೆ ಮಾಡುವಂತಿಲ್ಲ. ಯಾಕೆಂದರೆ, ಈಗಾಗಲೇ ಕೇಳಿರುವ ನೋಡಿರುವ ಅನೇಕ ಅಂಶಗಳನ್ನೆ ಒಂದೆಡೆ ಸೇರಿಸಿ ಸಿನಿಮಾ ಮಾಡಿದ್ದಾರೆ. ಹೀಗಾಗಿ ನಿರೂಪಣೆ ಮತ್ತು ಕಥೆಯು ಸೃಜನಶೀಲವಾಗಿಲ್ಲ ಎನ್ನಬಬಹುದು. ಇನ್ನೇನನನ್ನಾದರೂ ಹೊಸತನಕ್ಕೆ ಕೈ ಹಾಕಿದ್ದರೆ ಹೆಚ್ಚಿನ ಪ್ರೇಕ್ಷರನ್ನು ಈ ಸಿನಿಮಾ ಸೆಳೆಯಬಹುದಿತ್ತು. 


ಪುಣ್ಯಾತ್‌ಗಿತ್ತೀಯರಾಗಿ ಅಭಿನಯಿಸಿದವರು ಯಾರು ಗೊತ್ತಾ? ಆರ್ಟಿಸ್ಟ್‌ ಆರತಿ -ಮಮತಾ ರಾವುತ್‌, ಬಾಯಿ ಬಡುಕಿ- ಐಶ್ವರ್ಯಾ, ಮೀಟ್ರಾ ಮಂಜುಳ- ದಿವ್ಯಶ್ರೀ, ಸುಳ್ಳಿ ಸುಜಾತ- ಸಂಭ್ರಮ. ಹೀಗೆ ಈ ನಾಲ್ವರು ಹುಡುಗಿಯರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೇಕೇ ಹೊಡೆಯುತ್ತ, ಧಮ್ಕಿ ಹಾಕುತ್ತ ಇವರು ತಮ್ಮ ಕೈಯಲ್ಲಿ ಬಾಟಲ್ ಹಿಡಿದು ಡ್ಯಾನ್ಸ್ ಮಾಡುತ್ತಾರೆ. ಎಲ್ಲರದ್ದೂ ಬೋಲ್ಡ್ ಆಕ್ಟಿಂಗ್. 


Find out more: