ಅಭಿನಯ ಚಕ್ರವರ್ತಿ ಎಂದೇ ಹೆಸರಾಗಿರುವವರು ಬೇರೆ ಯಾರೂ ಅಲ್ಲ ಅದು ಕಿಚ್ಚ ಸುದೀಪ್. ಹೌದು ಇದೀಗ ಕಿಚ್ಚ ಸುದೀಪ್ ಅವರ ಅಭಿನಯದ ಬಹುನಿರೀಕ್ಷೆಯ ಚಿತ್ರ 'ಪೈಲ್ವಾನ್' ಇಂದು ದೇಶಾದ್ಯಂತತೆರೆ ಕಂಡಿದೆ, ಅದೂ 3000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಂದರೆ  ನಿಮಗೆ ಆಶ್ಚರ್ಯ ಆಗಬಹುದು. ಇನ್ನು ಈ ಚಿತ್ರ ನಮ್ಮ ಕರ್ನಾಟಕದಲ್ಲಿ ಬೆಳಗಿನ ಜಾವದಲ್ಲೇ ಪ್ರದರ್ಶನ ಕಂಡಿದೆ.


ಹೌದು ಬೆಂಗಳೂರಿನ ಸಿದ್ಧೇಶ್ವರ ಚಿತ್ರಮಂದಿರದಲ್ಲಿ ಇಂದು ಬೆಳಗಿನ ಜಾವ ಅಂದರೆ 5.30 ಕ್ಕೆ ಮೊದಲ ಶೋ ಆರಂಭವಾಗಿದೆ. ಸುದೀಪ್ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಮುಗಿ ಬಿದ್ದಿದ್ರು. ಇನ್ನು ಮೆಜೆಸ್ಟಿಕ್ ಸಂತೋಷ್ ಚಿತ್ರಮಂದಿರದಲ್ಲಿಯೂ ಇದೇ ಮೊದಲ ಬಾರಿಗೆ 7.30 ಕ್ಕೆ ಮೊದಲ ಪ್ರದರ್ಶನ ಕಂಡಿದೆ. ಹೀಗಾಗಿ ನಟ ಕಿಚ್ಚ ಸುದೀಪ್ ಅವರ ಕಟ್ಟಾ ಅಭಿಮಾನಿಗಳೊಂದಿಗೆ ಮೊದಲ ದಿನ ಮೊದಲ ಶೋ ವೀಕ್ಷಣೆ ಮಾಡಿ ಸಂತಸ ಪಟ್ಟಿದ್ದಾರೆ.


ಪೈಲ್ವಾನ ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಪೈಲ್ವಾನ್ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಹೌದು ಈ ಚಿತ್ರವನ್ನು ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿರುವ ದೊಡ್ಡ ತಾರಾಗಣ ಎಂದರೆ ಅದು ಸುದೀಪ್, ಸುನಿಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್  ಮುಂತಾದವರು.ಹೀಗೆ ಒಂದು ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ನಿರೀಕ್ಷೆಯಂತೆ ಈ ಚಿತ್ರ ಭರ್ಜರಿ ಒಪನಿಂಗ್ ಪಡೆದುಕೊಂಡಿದೆ. 


ಇನ್ನು ಸುದೀಪ್ ಅವರು ಈ ಚಿತ್ರದಲ್ಲಿ ಫಿಟ್ನೆಸ್ ಬಗ್ಗೆ ದೊಡ್ಡ ಮಟ್ಟದಲ್ಲಿ ಕಾಳಜಿ ವಹಿಸಿದ್ದಾರೆ. ಎಸ್.ಕೃಷ್ಣ ನಿರ್ದೇಶನದ "ಪೈಲ್ವಾನ್"ನಲ್ಲಿ ಅವರು ಅಭಿನಯಿಸಿದ ರೀತಿ ತೆರೆ ಮೇಲಿನ ಕುಸ್ತಿಪಟುವಾದ ಬಗೆಯನ್ನು ನೋಡಿದರೆ ನಿಮಗೆ ನಿಜಕ್ಕೂ ನಂಬೋಕೆ ಆಗಲ್ಲವೇನೋ. ಹೌದು ಸುದೀಪ್ ಅವರು ಶರ್ಟ್ ಇಲ್ಲದೆಯೂ ತಮ್ಮ ದೇಹದಾರ್ಡ್ಯವನ್ನು ಪ್ರದರ್ಶಿಸುವ ಧೈರ್ಯ ತೋರಿದ್ದಾರೆ. 


 ಅಷ್ಟಕ್ಕೂ ಈ ಚಿತ್ರದಿಂದ ಸುದೀಪ್ ತುಂಬ ಕಲಿತಿದ್ದಾರಂತೆ. ಹೌದು ಈ ಚಿತ್ರ ಫಿಟ್ನೆಸ್ ಕುರಿತ ಅವರ ಗ್ರಹಿಕೆಯನ್ನು ಬದಲಿಸಿದೆ ಎನ್ನಲಾಗುತ್ತಿದೆ. ಅಲ್ಲದೇ ಇದರಿಂದಲೇ ಹಿಂದಿ ಚಿತ್ರ ದಬಾಂಗ್ 3 ಗಾಗಿ ಶರ್ಟ್ ಇಲ್ಲದೆ ಅಭಿನಯಿಸಲು ಇದು ಸುದೀಪ್ ಅವರಿಗೆ ವಿಶ್ವಾಸ ತಂದುಕೊಟ್ಟಿದೆ. 


Find out more: