ಸಾಹೋ ಬಿಡುಗಡೆ ಆದ ಮೇಲೆ ಚಿತ್ರದ ಬಗ್ಗೆ ನೆಗೆಟಿವ್ ಕಮೆಂಟ್ಗಳು ಹರಿದಾಡಿದವು. ಈ ಚಿತ್ರ ಪ್ರೆಂಚ್ ಚಿತ್ರದ ಕಥೆಯನ್ನು ಕದ್ದು ಮಾಡಲಾಗಿದೆ. ಚಿತ್ರ ಸರಿಯಾಗಿ ಎಲ್ಲರಿಗೂ ಅರ್ಥವೇ ಆಗಲಿಲ್ಲ ಎಂದೆಲ್ಲ ಹೇಳಲಾಯಿತು. ಹೀಗಾಗಿ ಇದೀಗ ಸಾಹೋ ಚಿತ್ರದ ನೆಗೆಟಿವ್ ಕಮೆಂಟ್ ಬೆನ್ನಲ್ಲೆ ರಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಬಿಗ್ ಬಜೆಟ್ ಚಿತ್ರಗಳಿಗೆ ನೋ ಎಂದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದಕ್ಕೆ ಮತ್ತಷ್ಟು ಪುಷ್ಟೀ ನೀಡುವ ಬೆಳವಣಿಗೆ ನಡೆಯುತ್ತಿದೆ. ಹೌದು, ಇದೀಗ ಪ್ರಭಾಸ್ ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರವೇ ತಮ್ಮನ್ನು ಸೀಮಿತವಾಗಿರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಹೌದು ದಕ್ಕೆ ಮುಖ್ಯ ಕಾರಣ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಭಾಸ್ ಅಭಿನಯಿಸಿದ್ದು ಕೇವಲ 3 ಚಿತ್ರಗಳಲ್ಲಿ ಅಂದರೆ ನೀವು ನಂಬಲೇಬೇಕು. ಅದರಲ್ಲೆರಡು ಸಿನಿಮಾ 'ಬಾಹುಬಲಿ'. ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ವೀರ ಪರಾಕ್ರಮ ಮೆರೆದರೆ, ಇನ್ನು 'ಸಾಹೋ' ಮೂಲಕ ಆಯಕ್ಷನ್ ಕಮಾಲ್ ಮಾಡಿದ್ದರು ಪ್ರಭಾಸ್.
ಅಷ್ಟಕ್ಕೂ ಈ ಮುರು ಚಿತ್ರಗಳೂ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಸಾಕಷ್ಟು ಸಮಯ ತೆಗೆದುಕೊಂಡಿತು. ಹೀಗಾಗಿ ಪ್ರಭಾಸ್ ಅವರು ತಮ್ಮ ಅಮೂಲ್ಯವಾದಂತ 4 ವರ್ಷಗಳನ್ನು ಮೀಸಲಿಟ್ಟಿದ್ದರು. ಇದರಿಂದಾಗಿ ತಮ್ಮ ಯಶಸ್ಸಿನ ಹಿಂದಿರುವ ರೋಮ್ಯಾಂಟಿಕ್ ಚಿತ್ರಗಳಿಂದ ಪ್ರಭಾಸ್ ದೂರವೇ ಉಳಿದಿದ್ದರು. ಇದೀಗ ಮತ್ತೆ ಟ್ರ್ಯಾಕ್ಗೆ ಮರಳುವ ಸೂಚನೆ ನೀಡಿರುವ 'ಡಾರ್ಲಿಂಗ್' ನಟ ತೆಲುಗು ನಿರ್ದೇಶಕ ರಾಧಾ ಕೃಷ್ಣ ಆಯಕ್ಷನ್ ಕಟ್ ಹೇಳಲಿರುವ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಹೌದು ಇದು ಪಕ್ಕಾ ರೋಮ್ಯಾಂಟಿಕ್ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ಫೈನಲ್ ಆಗಬೇಕಿದೆ ಎನ್ನಲಾಗುತ್ತಿದೆ. ಆದರೆ ಟಾಲಿವುಡ್ ಮೂಲಗಳ ಪ್ರಕಾರ ಈ ಪ್ರೇಮ್ ಕಹಾನಿಗೆ 'ಜಾನ್' ಎಂದು ಟೈಟಲ್ ಫಿಕ್ಸ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾಕೆಂದರೆ ಇದೇ ಚಿತ್ರದ ಎಳೆ ಎನ್ನಲಾಗುತ್ತಿದೆ. ಈ ಚಿತ್ರದ ಮೊದಲ ಹಂತದ ಶೂಟಿಂಗ್ ಯುರೋಪ್ನಲ್ಲಿ ಆರಂಭವಾಗಲಿದ್ದು, ಪ್ರಭಾಸ್ ಅವರ ಡಾರ್ಲಿಂಗ್ ಆಗಿ ನಟಿ ಪೂಜಾ ಹೆಗ್ಡೆ ಕಾಣಿಸಲಿದ್ದಾರೆ. ಪೂಜಾ ಹೆಗ್ಡೆಗೂ ಇದೊಂದು ಉತ್ತಮ ಅವಕಾಶ ಒದಗಿ ಬಂದಿದೆ ಎನ್ನಬಹುದು.
'ಸಾಹೋ' ಚಿತ್ರ ಬಾಕ್ಸಾಫೀಸ್ ನಲ್ಲಿ ಸಖತ್ ಕಲೆಕ್ಷನ್ ಏನೋ ಮಾಡಿದೆ. ಆದರೆ ಕಥೆಯ ವಿಚಾರದಲ್ಲಿ ಎಡವಿದೆ. ಹೀಗಾಗಿ ಮತ್ತೊಮ್ಮೆ ಡಾರ್ಲಿಂಗ್ ಫ್ಯಾನ್ಸ್ನ ಮನತಣಿಸುವ ಚಿತ್ರದೊಂದಿಗೆ ಮರಳಲು ಪ್ರಭಾಸ್ ನಿರ್ಧರಿಸಿದ್ದಾರೆ. ಇದೀಗ ರೋಮ್ಯಾಂಟಿಕ್ ಕಹಾನಿಯೊಂದಿಗೆ ಮರಳಿರುವ ಪ್ರಭಾಸ್ ಅವರ ಸಿನಿಮಾ ಕೇಔಲ ಮುರು ಭಾಷೆಯಲ್ಲಿ ಬರಲಿದೆ ಎನ್ನಲಾಗಿತ್ತಿದೆ