ಬಾಲಿವುಡ್ ನ ಖ್ಯಾತ ನಟ ರಣವೀರ್​ ಸಿಂಗ್​ ಹಾಗೂ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಕಳೆದ ವರ್ಷ ನವೆಂಬರ್​ 18 ರಂದು ವೈವಾಹಿಕ ಜೀವನ ಪ್ರಾರಂಭಿಸಿದ್ದರು. ಮಾಧ್ಯಮದವರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಈ ಜೋಡಿ ಇಟಲಿಯಲ್ಲಿ ವಿವಾಹವಾಗಿತ್ತು. ಇಟಲಿಯಲ್ಲಿ ಮದುವೆ ಮುಗಿಸಿಕೊಂಡು ಬಂದ ದೀಪಿಕಾ- ರಣವೀರ್​ ಸಿಂಗ್​  ಬೆಂಗಳೂರಿನ ಲೀಲಾ ಪ್ಯಾಲೇಸ್​ನಲ್ಲಿ ರಿಸೆಪ್ಷನ್​ ಏರ್ಪಡಿಸಿದ್ದರು. ಅದರ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದೆಲ್ಲ ನಡೆದ ನಂತರ ರಣವೀರ್​ ಸಿಂಗ್​ ಗೆಳೆಯರಿಗೋಸ್ಕರ ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಈ ದಂಪತಿ ಶೀಘ್ರದಲ್ಲೇ ಒಂದು ವರ್ಷದ ಸಂಭ್ರಮಾಚರಣೆ ಹಮ್ಮಿಕೊಳ್ಳಲಲಿದ್ದಾರೆ.  ಅಚ್ಚರಿ ವಿಚಾರ ಎಂದರೆ ದೀಪಿಕಾಗೆ ತಾವು ಮಾದುವೆ ಆಗಿದ್ದೇನೆ ಎನ್ನುವ ವಿಚಾರವೇ ಮರೆತು ಹೋಗಿದೆಯಂತೆ! ಇದನ್ನು ಕೇಳಿದ ಬಹುತೇಕರು ಆಶ್ಚರ್ಯ ಚಿಕಿತರಾಗಿದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮನೋಬಲದ ಬಗ್ಗೆ ಮಾತನಾಡುತ್ತಿದ್ದರು. ನಾನೋರ್ವ ಮಗಳು, ಸಹೋದರಿ, ನಟಿ ಎಂದು ಮತ್ತಿನ್ನೇನನ್ನೋ ಯೋಚನೆ ಮಾಡಲು ಹೊರಟು ದೀಪಿಕಾ ಪಡುಕೋಣೆ. ಈ ವೇಳೆ ಕಾರ್ಯಕ್ರಮ ನಿರ್ವಾಹಕಿ ನೀವು ಹೆಂಡತಿ ಕೂಡ ಹೌದು ಎಂದು ನೆನಪಿಸಿದರು.


ಹೌದಲ್ಲ, ನಾನು ಈ ವಿಚಾರವನ್ನು ಮರೆತೇ ಬಿಟ್ಟಿದ್ದೆ ಎಂದು ದೀಪಿಕಾ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಸದ್ಯ ದೀಪಿಕಾ ಹೇಳಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ. ದೀಪಿಕಾ ಈ ಕಾರ್ಯಕ್ರಮಕ್ಕೆ ಸಹೋದರಿ ಅನಿಷಾ ಪಡುಕೋಣೆ ಜೊತೆ ಆಗಮಿಸಿದ್ದರು. ಈ ಮೊದಲು ದೀಪಿಕಾ ಪಡುಕೋಣೆ ಖಿನ್ನತೆಗೆ ಒಳಗಾದ ವಿಚಾರವನ್ನು 2015ರಲ್ಲಿ ಹಂಚಿಕೊಂಡಿದ್ದರು. ದೀಪಿಕಾ ಚಪಾಕ್​ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಆ್ಯಸಿಡ್ ದಾಳಿ ಸಂತ್ರಸ್ತೆ ಮೇಘನಾ ಗುಲ್ಜರ್​ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗಿದೆ.


ದೀಪಿಕಾ ಪಡುಕೋಣೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ತನ್ನದೇಯಾದಾ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದೇ ರೀತಿಯಲ್ಲಿ ರಣವೀರ್ ಸಹ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಆದ್ದರಿಂದ ಅವರ ಈ ಟ್ವೀಟ್ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 


Find out more: