ಸಿನೇಮಾ ನಟ ನಟಿಯರು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ರಜನಿಕಾಂತ್, ಅಮಿತಾಬ್ ಬಚ್ಚನ್, ಯಶ್, ದರ್ಶನ್, ಶಿವರಾಜ್ ಕುಮಾರ್, ಅಮೀರ್ ಖಾನ್, ನಯನತಾರಾ, ಅನುಷ್ಕಾ ಶೆಟ್ಟಿ, ವಿಶಾಲ್, ಪ್ರಭಾಸ್ ಸೇರಿದಂತೆ ಸೌಂತ್ ಇಂಡಿಯಾದ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಬಹು ಬೇಡಿಕೆಯ ನಟ ನಟಿಯಿವರು. ಇವರಷ್ಟೇ ಅಲ್ಲ ಇವರ ಜೊತೆಗೆ ಇನ್ನು ಅನೇಕರಿದ್ದಾರೆ.
ಇವರ ಜೊತೆಗೆ ಪೋಷಕ ಪಾತ್ರದವರನ್ನು ಸೇರಿದಂತೆ ಕೇವಲ ಸಿನಿಮಾಗಳಲ್ಲದೆ ಜಾಹೀರಾತು ಹಾಗೂ ಕಮರ್ಷಿಯಲ್ ಕ್ಯಾಂಪೇನ್ಗಳಿಂದ ಸಹ ಹಣ ಸಂಪಾದಿಸುತ್ತಾರೆ. ಅದು ಎಷ್ಟು ಗೊತ್ತಾ. ಒಂದೊಂದು ಜಾಹೀರಾತಿಗೂ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಸೋಪು, ಶ್ಯಾಂಪು, ಕ್ರೀಮ್, ಬಟ್ಟೆಗಳು, ಶೂಗಳು, ಇನ್ನಿತರೆ ಉತ್ಪನ್ನಗಳು ಸೇರಿದಂತೆ ನಾನಾ ರೀತಿಯ ವಸ್ತುಗಳನ್ನು ಪ್ರಚಾರ ಮಾಡಲು ಒಬ್ಬೊಬ್ಬರು ಒಂದು ರೀತಿಯ ಸಂಭಾವನೆ ಪಡೆಯುತ್ತಾರೆ.
ಕೆಲವೊಂದು ಕಂಪೆನಿಗೆ ರಾಯಭಾರಿಯಾಗುವ ನಟ-ನಟಿಯರು ಕೋಟಿ ಕೋಟಿ ಹಣ ಪಡೆಯುತ್ತಾರೆ. ಈ ರೇಸ್ನಲ್ಲಿ ಅಮೀರ್, ಶಾರುಖ್, ಸಲ್ಮಾನ್ ಸೇರಿದಂತೆ ಅನೇಕ ಸ್ಟಾರ್ ನಟರು ಇದ್ದಾರೆ. ಇವರೊಂದಿಗೆ ಕ್ರೀಡಾ ಲೋಕದ ಸೆಲೆಬ್ರಿಟಿ ಕ್ರೀಡಾಪಟುಗಳು ಸಹ ಹಲವಾರು ಜಾಹೀರಾತುಗಳಲ್ಲಿ ಕಾಣಸಿಗುತ್ತಾರೆ. ಇದರಲ್ಲಿ ಇತ್ತೀಚೆಗೆ ವಿಶ್ವದಾಖಲೆ ಬರೆದ ಪಿ. ವಿ ಸಿಂಧೂ, ವಿರಾಟ್ ಕೊಹ್ಲಿ, ಸಚಿನ್, ರೋಹಿತ್, ಧೋನಿ ಮುಂದಿದ್ದಾರೆ. ಕೋಟಿಗಟ್ಟಲೆ ಹಣ ಪಡೆಯುತ್ತಾರೆ.
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಒಂದು ಜಾಹೀರಾತಿಗೆ 11 ಕೋಟಿ ಪಡೆದರೆ, ಕಿಂಗ್ ಖಾನ್ ಶಾರುಖ್ 9 ಕೋಟಿ ತೆಗೆದುಕೊಳ್ಳುತ್ತಾರಂತೆ. ಈ ರೇಸ್ನಲ್ಲಿ ಅಮಿತಾಭ್ ಮೂರನೇ ಸ್ಥಾನದಲ್ಲಿದ್ದು, ಅವರ ಸಂಭಾವನೆ 8 ಕೋಟಿಯಿದೆ. ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ಅಕ್ಷಯ್ ಹಾಗೂ ಸಲ್ಮಾನ್ ಖಾನ್ ಒಂದು ಆ್ಯಡ್ಗೆ ತಲಾ 7 ಲಕ್ಷ ಪಡೆಯುತ್ತಾರಂತೆ. ವಿಕ್ಕಿ ಕೌಶಲ್ 3, ಟೈಗರ್ ಶ್ರಾಫ್ 2.5 ಹಾಗೂ ರಾಜ್ಕುಮಾರ್ ರಾವ್ 1.5 ಕೋಟಿ ಪಡೆಯುತ್ತಾರಂತೆ. ಇನ್ನುಳಿದವರು ಸಹ ಲಕ್ಷ ಕೋಟಿ ಗಳಲ್ಲಿ ಹಣ ಪಡೆಯುತ್ತಾರೆ.