ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿ ಹುಡುಗ ಎಂದರೆ ಅದು ದ್ರುವ ಸರ್ಜಾ. ತೆರೆ ಕಂಡಿರುವುದು ಕೇವಲ ಮೂರ್ನಾಲ್ಕು ಚಿತ್ರಗಳಾದರೂ ಸಹ ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಚಿತ್ರಗಳು. ಒಂದೊಂದು ಸಿನಿಮಾ ಪ್ರೇಕ್ಷಕರ ಮನ ಗೆದ್ದಿವೆ. ಪ್ರಸ್ತುತ ದ್ರುವ ಸರ್ಜಾ ಅವರು ಪೊಗರು  ಚಿತ್ರದಲ್ಲಿ ನಟಿಸುತ್ತಿರುವ ವಿಷಯ ನಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. ಆದರೆ ಶೂಟಿಂಗ್ ಮುಗಿಸಿಕೊಂಡು ಹಿಂತಿರುಗುವಾಗ ಅವರ ಕಾರ್ ಅಪಘಾತಕ್ಕೀಡಾಗಿದೆ.
 
ನಟ ಧ್ರುವ ಸರ್ಜಾ ಪ್ರಯಾಣಿಸುತ್ತಿದ್ದ ಕಾರು ಬಳ್ಳಾರಿ ಹೊರವಲಯದಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್  ಅವರು  ಪ್ರಾಣಾ‍ಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ನಂದಕಿಶೋರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪೊಗರು' ಚಿತ್ರದ ಶೂಟಿಂಗ್‌ ಗಣಿನಾಡು  ಬಳ್ಳಾರಿಯಲ್ಲಿ ನಡೆಯುತ್ತಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಮುಂಜಾನೆ 4 ಗಂಟೆಗೆ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದ ವೇಳೆ ಮಾರ್ಗಮಧ್ಯೆ ಲಾರಿಯೊಂದು ದ್ರುವ ಸರ್ಜಾ ಅವರ ಕಾರಿಗೆ ರಭಸವಾಗಿ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ.


ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಧ್ರುವ ಸರ್ಜಾ ಅವರೊಟ್ಟಿಗೆ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. 'ಪೊಗರು' ಚಿತ್ರವು ರೊಮ್ಯಾಂಟಿಕ್ ಯಾಕ್ಷನ್ ಹಾಗೂ ಪ್ರೀತಿ ಹೇಳುವ ಸಿನಿಮಾ ಆಗಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ಮಾಸ್ಟರ್ ಫೀಸ್ ಖ್ಯಾತಿಯ ಶಾನ್ವಿ ಶ್ರೀವಾತ್ಸವ ಪೊಗರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪೊಗರು ಚಿತ್ರವು  ಸ್ಯಾಂಡಲ್ ವುಡ್ ಸೇರಿದಂತೆ  ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಒಟ್ಟು ಪಂಚ ಭಾಷೆಯಲ್ಲಿ  ಈ ಸಿನಿಮಾ ನಿರ್ಮಾಣವಾಗುತ್ತಿದೆ. ಬಿ.ಕೆ. ಗಂಗಾಧರ್ ಚಿತ್ರ ನಿರ್ಮಿಸಿದ್ದಾರೆ. 


ಕನ್ನಡದ ಪೊಗರು ಚಿತ್ರದ ಕೆಲವು ಪೋಸ್ಟರ್ ಗಳು ಯೂಟ್ಯೂಬ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿದ. ಕಾರಣವೆಂದರೆ ದ್ರುವ ಸರ್ಜಾ ಅವರ ಅಭಿಮಾನಿ ಬಳಗ. ಜೊತೆಗೆ ಇದೊಂದು ರೊಮ್ಯಾಂಟಿಕ್ ಹಾಗೂ ಲವ್ ಸ್ಟೋರಿ ಚಿತ್ರ. ಮುಖ್ಯವಾಗಿ ಖಡಕ್ ಡೈಲಾಗ್ ಗಳನ್ನು ಒಳಗೊಂಡಿದೆ ಯಂತೆ.


Find out more: