ದೊಡ್ಡ ದೊಡ್ಡ ಕ್ಯಾಮರಾಗಳ ಮೂಲಕ ಶೂಟಿಂಗ್ ಮಾಡಿ ಚಿತ್ರ ಅಂದವಾಗಿ ಮೂಡುವ ಹಾಗೆ ಮಾಡಿರುವುದು ನಾವೆಲ್ಲರೂ ನೋಡಿದ್ದೇವೆ ಆದರೆ ಐ ಪೋನ್ ನಲ್ಲಿಯೇ ಮೂಡಿಬಂದ ಚಿತ್ರವೊಂದಿದೆ. ಸ್ಯಾಂಡಲ್ ವುಡ್ ನಲ್ಲಿ ಐಫೋನ್ನಲ್ಲಿ ಚಿತ್ರಿಸಿದಂತಹ ಮೊದಲ ಸಿನಿಮಾದ ಟೈಟಲ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಅಭಿಷೇಕ್ ಜೈನ್ ನಿರ್ದೇಶನದಲ್ಲಿ ಇಂಥದೊಂದು ಸಾಹಸ ಮಾಡಿದ್ದು ಅವರ ವಿಭಿನ್ನ ಸಿನಿಮಾಗೆ ಡಿಂಗ್ ಎಂಬ ಶೀರ್ಷಿಕೆ ನೀಡಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕರು ಇನ್ನು ಮುಂದೆ ಮೊಬೈಲ್ ಫೋನ್ ಗಳಲ್ಲಿ ಚಿತ್ರಿಸಿದಂತಹ ಸಿನಿಮಾಗಳೇ ಜಾಸ್ತಿ ಆಗುತ್ತದೆ ಎಂದು ತಿಳಿಸಿದ್ದಾರೆ. ಮೊಬೈಲ್ ಫೋನ್ ನಿಂದ ಚಿತ್ರೀಕರಿಸಿದ ಸಿನಿಮಾ ಅಲ್ಲ ಸಿನಿಮಾಗೆ ಬಳಸುವ ಲೆನ್ಸುಗಳನ್ನು ಐಫೋನ್ ಅಳವಡಿಸಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ ಆದರೆ ಇದು ನಿಜಕ್ಕೂ ಅತ್ಯಂತ ಸವಾಲಿನ ಕೆಲಸ ಎಂದಿದ್ದಾರೆ. ಕ್ರೀಡೆಯಲ್ಲಿ ಇಡುವಷ್ಟು ಮೊಬೈಲ್ ಫೋನ್ ಹಾಗಿತ್ತು ಎಂದು ಅವರು ಚಿತ್ರೀಕರಣದ ಸವಾಲುಗಳನ್ನು ವಿವರಿಸಿದರು.


ಕಾರ್ಯಕ್ರಮಕ್ಕೆ ಬಂದಿದ್ದ ಚಿತ್ರಸಾಹಿತಿ ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಹೊಸತು ಎಂಬುದೆಲ್ಲ ಕನ್ನಡದಲ್ಲಿ ಮೊದಲು ಆಗಲಿ ಎಂದರು. ಸಿನಿಮಾದಲ್ಲಿ ಅರವ್ ಗೌಡ ಹಾಗೂ ಅನುಷಾ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲ ಡಿಂಗ ಎಂಬುದು ಹೆಸರು ಇದರಲ್ಲಿ ನಾನೊಬ್ಬ ಕ್ಯಾನ್ಸರ್ ರೋಗಿ ನಾನು ಸಾಯುತ್ತೇನೆ ಎಂದು ಡಾಕ್ಟರ್ ಹೇಳಿರುತ್ತಾರೆ. ಹೀಗಾಗಿ ಸಿಂಗನನ್ನು ನನ್ನಷ್ಟೇ ಪ್ರೀತಿಸುವ ಒಬ್ಬರಿಗೆ ತಲುಪಿಸುವುದೇ ಇಡೀ ಚಿತ್ರದ ಕಥಾವಸ್ತು ಎಂದು ಪರಿಚಯಿಸಿದರು.

ಸಿಗರೇಟ್ ಸೇದುತ್ತಾಳೆ ಡೈರೆಕ್ಟರ್ ನನಗೆ ವರ್ಕ್ ಶಾಕ್ ಮಾಡಿ ಸಿಗರೇಟ್ ಸೇದುವುದು ಹೇಳಿಕೊಟ್ಟರು, ಪಾತ್ರಕ್ಕೆ ಎರಡು ಶೇಡ್ ಇರುತ್ತದೆ ಒಂದರಲ್ಲಿ ಪ್ರೀತಿಗೆ ಬಿದ್ದ ಇವತ್ತಿಗೆ ಇನ್ನೊಂದರಲ್ಲಿ ಮಧ್ಯವಯಸ್ಕ ಮಹಿಳೆ ಎಂದರು. ನಾಯಕಿಯ ಅನುಷಾ ಇವರು ಐಫೋನ್ನಲ್ಲಿ ಸಿನಿಮಾ ಮಾಡುತ್ತೇವೆ ಎಂದಾಗ ಒಂಥರಾ ಎನಿಸಿತು ಆದರೆ ಎಲ್ಲದರಲ್ಲೂ ಹೊಸತನ್ನು ಹುಡುಕುವ ನಾನು ಇದಕ್ಕೆ ಒಪ್ಪಿದೆ ಈಗ ಒಳ್ಳೆಯ ಪ್ರಾಜೆಕ್ಟ್ ಮಾಡಿದೆ ಖುಷಿ ಇದೆ ಭಾವಕತೆ ಇರುವ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


Find out more: