ಸಿನಿಮಾ ವಿಮರ್ಶೆ: ಎಲ್ಲಿದೆ ಇಲ್ಲಿ ತನಕ ಚಿತ್ರದ ಅಸಲೀ ಸ್ಟೋರಿ
  
ಒಂದು ಸುಳ್ಳನ್ನು ಸತ್ಯವಾಗಿಸಲು ಮತ್ತೇ ಸಾವಿರ ಸುಳ್ಳುಗಳನಾಡಬೇಕಾಗುತ್ತದೆ. ಚಿತ್ರದಲ್ಲೀ ನಟ ಸೃಜನ್ ಲೋಕೇಶ್ ಹೇಳುವ ಒಂದು ಸುಳ್ಳು, ಸಾವಿರಾರು ಸುಳ್ಳುಗಳನ್ನ ಹುಟ್ಟುಹಾಕುತ್ತೆ. ಆ ಅದರಿಂದ ಪ್ರೀತಿ ಪಡೆಯುವ ರೋಚಕ ಹೋರಾಟವೇ  'ಎಲ್ಲಿದ್ದೆ ಇಲ್ಲಿ ತನಕ' ಚಿತ್ರ. ಮುಂದೆ ಓದಿ.


ಚಿತ್ರ: ಎಲ್ಲಿದ್ದೆ ಇಲ್ಲಿ ತನಕ
ನಿರ್ದೇಶಕ: ತೇಜಸ್ವಿ
ಕಲಾವಿದರು: ಸೃಜನ್ ಲೋಕೇಶ್, ಹರಿಪ್ರಿಯಾ, ಯಶಸ್ ಸೂರ್ಯ ಮತ್ತು ಇತರರು
ಬಿಡುಗಡೆ: ಅಕ್ಟೋಬರ್ 11, 2019
ರೇಟಿಂಗ್: *


ಆಗರ್ಭ ಶ್ರೀಮಂತನ ಮಗ ಸೂರ್ಯ (ಸೃಜನ್ ಲೋಕೇಶ್). ಚಾಲೆಂಜ್ ಅಂದ್ರೆ ಸವಾಲ್ ಆಗಿ ಸ್ವೀಕರಿಸುವ ಯುವಕ. ಸ್ವತಂತ್ರವಾಗಿ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಯಿಂದ ಮಲೇಷಿಯಾದಿಂದ ಭಾರತಕ್ಕೆ ಬರ್ತಾನೆ. ಮೊದಲ ನೋಟದಲ್ಲೇ ನಂದಿನಿ (ಹರಿಪ್ರಿಯಾ) ಮೇಲೆ ಲವ್ವಾಗುತ್ತೆ. ಸ್ನೇಹಿತನನ್ನ ಮುಂದಿಟ್ಟುಕೊಂಡು ಒಂದು ಸುಳ್ಳು ಹೇಳಿ ಆಕೆಯ ಸ್ನೇಹ ಸಂಪಾದನೆ ಮಾಡಿಕೊಳ್ಳುವ ಸೂರ್ಯ, ಆ ಪ್ರೀತಿಯನ್ನ ಉಳಿಸಿಕೊಳ್ಳಲು ಸುಳ್ಳಿನ ಸರಮಾಲೆಯನ್ನೇ ಸುಳ್ಳಿನಿಂದ ಕಟ್ಟಿದ ಪ್ರೀತಿಯ ಕೋಟೆಯನ್ನ ಉಳಿಸಿಕೊಳ್ಳುತ್ತಾನಾ ಎಂಬುದು ಕಥೆ. ಸರಳ ಕತೆಯನ್ನ ಭರಪೂರ ಮನರಂಜನೆಯಿಂದ ನೀಡಿದ್ದಾರೆ. ಸೃಜನ್ ಅದ್ಭುತ ಮಾತುಗಾರ ಎಂಬುದು ತಿಳಿದೇ ಇದೆ  ಪ್ರೇಕ್ಷಕರನ್ನ ನಕ್ಕು ನಗಿಸಬೇಕು ಎಂಬ ಉದ್ದೇಶದಿಂದ ಹಾಸ್ಯಾಸ್ಪದ ಸಂಭಾಷಣೆ, ಅದಕ್ಕೆ ತಕ್ಕ ನಟನೆ, ಕಲಾವಿದರ ಜುಗಲ್ ಬಂದಿ, ಆಸಕ್ತಿಕರ ಚಿತ್ರಕಥೆ ಮೂಲಕ ಸಿನಿಮಾ ಮಾಡಲಾಗಿದೆ. ಸೃಜನ್ ಅವರ ಕಾಮಿಡಿ ಟೈಮಿಂಗ್ಸ್, ಪಂಚಿಂಗ್ ಡೈಲಾಗ್, ಜೊತೆಗೆ ಅಚ್ಚರಿ ಎಂಬಂತೆ ಡ್ಯಾನ್ಸ್ ಹಾಗೂ ಫೈಟ್ ಕೂಡ ಸಾಥ್ ಕೊಟ್ಟಿದೆ.


ಸೃಜನ್ ಲೋಕೇಶ್ ಅವರ ಎಲ್ಲಿದ್ದೆ ಇಲ್ಲಿ ತನಕ ಮನೆಯಲ್ಲಿ ಕಲಾವಿದರು ದಂಡೆ ಇದೆ. ಹರಿಪ್ರಿಯಾ ನಾಯಕಿಯಾಗಿ ಉತ್ತಮ ಸಾಥ್ ನೀಡಿದ್ದಾರೆ. ಸೃಜನಾ ತಾಯಿ ಪಾತ್ರದಲ್ಲಿ ತಾರಾ ಲವಲವಿಕೆಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಮಂತ ತಂದೆಯಾಗಿ ಅವಿನಾಶ್ ಗಮನಾರ್ಹ ನಟನೆ. ತರಂಗ ವಿಶ್ವ, ತಬಲಾ ನಾಣಿ, ಮಂಡ್ಯ ರಮೇಶ್, ಕ್ಲೈಮ್ಯಾಕ್ಸ್ ನಲ್ಲಿ ಬರುವ ಸಾಧುಕೋಕಿಲಾ ನಗಿಸುವಲ್ಲಿ ಸಫಲರಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಧಿಕಾ ರಾವ್ ಗಮನ ಸೆಳೆಯುತ್ತಾರೆ.


Find out more: