ತಮ್ಮ ಇಷ್ಟದ ನಟನನ್ನು ನೋಡಲು ಅಭಿಮಾನಿಗಳು ಏನೇನೆಲ್ಲಾ ಮಾಡ್ತಾರೆ. ಚಿತ್ರ ವಿಚಿತ್ರವಾಗಿ ಲವ್ ಲೆಟರ್ಸ್ ಬರೀತಾರೆ. ಟ್ವೀಟ್ ಮಾಡ್ತಾರೆ, ಇನ್ನು ಸಾಕಷ್ಟು ಮಾಡ್ತಾರೆ. ಆದರೆ ಆಂಧ್ರದ ಈ ಯುವತಿ ತಮ್ಮ ನೆಚ್ಚಿನ ನಟನನ್ನು ನೋಡಲು ಮರವೇರಿ ಕುಳಿತಿದ್ದಾಳೆ. ವಿಜಯವಾಡದ ರೆವೆನ್ಯೂ ಕಾಲೋನಿ ಯಲ್ಲಿರುವ ಅಗ್ರಿಗೋಲ್ಡ್ ಕಾರ್ಯಾಲಯದ ಆವರಣದಲ್ಲಿ ಯುವತಿ ಮರವೇರಿದ್ದಾಳೆ. ನಟ ಮಹೇಶ್ ಬಾಬು ಅವರನ್ನು ನೋಡಲೇಬೇಕು. ಅವರನ್ನು ಇಲ್ಲಿಗೆ ಕರೆಸಿ ಎಂದು ಹಠ ಹಿಡಿದು ಮರವೇರಿ ಕುಳಿತ್ತಿದ್ದಾರೆ.
ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುರನ್ನ ಭೇಟಿಯಾಗಲು ಯುವತಿ ಯೊಬ್ಬರು ಮಾಡಿದ ಕೆಲಸ ಈಗ ಸದ್ದು ಮಾಡುತ್ತಿದೆ. ವಿಜಯವಾಡದ ರೆವೆನ್ಯೂ ಕಾಲೋನಿಯಲ್ಲಿರುವ ಅಗ್ರಿಗೋಲ್ಡ್ ಕಾರ್ಯಾಲಯದ ಆವರಣದಲ್ಲಿ ಯುವತಿಯೊಬ್ಬರು ಮಾಡಿದ ಕೆಲಸ ಸಂಚಲ ಸೃಷ್ಟಿಸಿತ್ತು. ನಟ ಮಹೇಶ್ ಬಾಬು ಅವರನ್ನು ನೋಡಲೇಬೇಕು. ಅವರನ್ನು ಇಲ್ಲಿಗೆ ಕರೆಸಿ ಎಂದು ಹಠ ಹಿಡಿದು ಮರವೇರಿ ಕುಳಿತ್ತಿದ್ದಾರೆ. ಅಷ್ಟೇ ಅಲ್ಲ ಮೋದಿಯವರೊಂದಿಗೆ ಮಾತನಾಡ ಬೇಕು, ಜಗನ್ ತನ್ನ ಮನವಿ ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಆ ಯುವತಿ. ಈಕೆ ಏತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅರಿದ ಜನರು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದರು.
ಕೆಲವರು ಅವರ ವಿಡಿಯೋ ಮಾಡಲು ಹೋದಾಗ ಮರದ ಕೊಂಬೆಗಳಲ್ಲಿದ್ದ ಕಡ್ಡಿಗಳನ್ನು ಕಿತ್ತು ಹೊಡೆಯಲಾರಂಭಿಸಿದ್ದಾರೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಏಣಿಯ ಸಹಾಯದಿಂದ ಮರವೇರಿ ಆ ಯುವತಿಯನ್ನು ಕಾಪಾಡಿದ್ದಾರೆ. ಪೊಲೀಸರ ವಿಚಾರಣೆ ಯಿಂದ ಆ ಯುವತಿ ಕೊಲ್ಕತ್ತಾದವರು ಎಂದು ಗೊತ್ತಾಗಿದೆ. ಅನಿತಾ ಎಂಬ ಹೆಸರಿನ ಯುವತಿಗೆ ವಿಜಯವಾಡದಲ್ಲಿ ಕೆಲವರು ಮೋಸ ಮಾಡಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಆಕೆಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹೇಶ್ ಬಾಬು ರವರಿಗೆ ಈ ವಿಷಯ ಸಾಮಾಜಿಕ ಜಾಲತಾಣ ಗಳಿಂದ ತಿಳಿದಿರ ಬಹುದು. ಆದರೆ ಈ ಯುವತಿ ಯನ್ನು ನೋಡಲು ಬರುತ್ತಾರಾ ಇಲ್ಲವಾ ಎಂಬುದಷ್ಟೇ ಸದ್ಯಕ್ಕೆ ಅಭಿಮಾನಿಗಳಿಗೆ ಈಗಿರುವ ಕುತೂಹಲ.