ಇನ್ಫೋಸಿಸ್ ಕಂಪ್ಯೂಟರ್ ಸಾಫ್ಟ್ ವೇರ್ ಕಂಪನಿಯು ಇಂದು ಎಷ್ಟೇಲ್ಲಾ ಹೆಸರು ಮಾಡಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಇದೀಗ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿಯ ಲವ್ ಸ್ಟೋರಿ ಚಿತ್ರವಾಗಿ ಸೆಟ್ಟೇರುತ್ತಿದೆ. ಈ ಜೋಡಿಯ ಪ್ರೇಮ ಪುರಾಣ, ಗೆಲುವಿನ ಹಾದಿ, ಸರಳತೆ ನೋಡಿದ ಜನರು ಇವರು ನಿಜವಾದ ಆದರ್ಶ ದಂಪತಿ ಎಂದು ಮಾತನಾಡಿಕೊಂಡಿದ್ದರು. ಈ ಅಪರೂಪದ ಜೋಡಿಯ ಸ್ಫೂರ್ತಿದಾಯಕ ಕಥೆ ಇದೀಗ ಸಿನಿಮಾವಾಗಿ ಮೂಡಲು ಶುರುವಾಗಿದೆ.
ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ ಜೀವನವನ್ನಾಧರಿಸಿ, ಬಾಲಿವುಡ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ. ಇದಕ್ಕೆ ಸುಧಾಮೂರ್ತಿ ಅವರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಸಿನಿಮಾಗೆ ಅಶ್ವಿನಿ ತಿವಾರಿ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೂರ್ತಿ ದಂಪತಿಯ ಸಾಧನೆಯ ಕಥೆ ಸಾಮಾನ್ಯ ಅನ್ನಿಸಿದರು, ಅವರ ಲವ್ ಸ್ಟೋರಿ ಸಿಕ್ಕಾಪಟ್ಟೆ ಕೂತಹಲಕಾರಿ ಆಗಿದೆ. ಈ ಚಿತ್ರಕ್ಕೆ ‘ಮೂರ್ತಿ’ ಎಂದು ಹೆಸರಿಡಲು ಚರ್ಚೆಗಳು ನಡೆಯುತ್ತಿವೆ. ನಿಲ್ ಬತೇ ಸನಾತ, ಅಮ್ಮ ಕಾನುಕ, ಬರೇಲಿ ಕಿ ಬರ್ಫಿ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ, ಸದ್ಯ ಪಂಗಾ ಅನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ಮೂರ್ತಿ ಚಿತ್ರಕ್ಕೆ ಶ್ರೇಯಸ್ ಜೈನ್ ಮತ್ತು ಪಿಯೂಶ್ ಗುಪ್ತಾ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ನಾರಾಯಣ ಮೂರ್ತಿ ಅವರ ಹಿನ್ನಲೆ, ಅವರು ಸುಧಾಮೂರ್ತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಸಂಕಷ್ಟಗಳನ್ನು ಎದುರಿಸಿ, ಇನ್ಫೋಸಿಸ್ ಸಂಸ್ಥೆಯನ್ನು ಉಳಿಸಿ, ಬೆಳೆಸಿದ್ದು ಹೇಗೆ ಅನ್ನೋದನ್ನು ಈ ಸಿನೆಮಾದಲ್ಲಿ ತೆರೆಗೆ ತರಲಾಗುತ್ತದೆ. ಅನ್ನುಕೊಂಡಿದ್ದೇ ಆದರೆ ಮುಂದಿನ ವರ್ಷ ಮೂರ್ತಿ ಚಿತ್ರ ಸೆಟ್ಟೇರಲಿದೆ.
ಈಗಾಗಲೇ ಅಶ್ವಿನಿ ತಿವಾರಿ, ‘ಮೂರ್ತಿ’ ಸಿನಿಮಾ ಮಾಡುವುದಾಗಿ ಘೋಷಿಸಿದ್ದು, ಸುಧಾಮೂರ್ತಿ ಅವರ ಪಾತ್ರದಲ್ಲಿ ಆಲಿಯಾ ಭಟ್ ನಟಿಸಬೇಕು ಅನ್ನುವ ಇರಾದೆ ವ್ಯಕ್ತಪಡಿಸಿದ್ದಾರೆ. ಇನ್ನು ನಾರಾಯಣ ಮೂರ್ತಿ ಅವರ ಪಾತ್ರಕ್ಕೆ ಅಕ್ಷಯ್ ಕುಮಾರ್, ರಣ್ಬೀರ್ ಕಪೂರ್, ಸುಶಾಂತ್ ಸಿಂಗ್ ಹೆಸರುಗಳು ಈಗ ಕೇಳಿ ಬರುತ್ತಿದೆ. ಶೀಘ್ರದಲ್ಲೇ ಕಲಾವಿದರ ಆಯ್ಕೆ ನಡೆಯಲಿದ್ದು, ಯಾರು ಯಾವ ಪಾತ್ರ ಮಾಡುತ್ತಾರೆ ಎನ್ನುವುದು ಕನ್ಫರ್ಮ್ ಆಗಲಿದೆ.