ರಾಷ್ಟ್ರದಲ್ಲಿ ಕಳೆದೆ ಎರಡು ತಿಂಗಳುಗಳಿಂದ ಆರ್ಥಿಕ ಕುಸಿತ ಉಂಟಾಗಿದ್ದು, ಉದ್ಯೋಗಗಳಿಲ್ಲದೇ ಯುವಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರು ಸಹ ಇನ್ನು ಆರ್ಥಿಕ ವಲಯ ಚೇತರಿಕೆ ಕಾಣುತ್ತಿಲ್ಲ. ಆದ್ದರಿಂದಲೇ ಏನೋ ಈ ನಟಿ ಹರಿದಿರುವ ಫ್ಯಾಂಟ್ ಧರಿಸಿ ಓಡಾಡುತ್ತಿದ್ದಾರೆ. ಆ ನಟಿ ಯಾರು ಗೊತ್ತಾ. ನಾವು ಹೇಳ್ತೀವಿ ನೋಡಿ. 


ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿಖಾನ್ ಬಾಲಿವುಡ್​ನ ಬಿಂದಾಸ್ ಹುಡುಗಿ ಅಂತಾನೇ ಫೇಮಸ್​. ಯಾವಾಗಲೂ ಏನಾದರೊಂದು ವಿಷ್ಯದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿದ್ದ ಸಾರಾ, ಈ ವೇಳೆ ತಾನು ಹಾಕಿದ್ದ ತುಂಡುಡುಗೆ ಟ್ರೋಲ್​ ಹೈಕಳ ಬಾಯಿಗೆ ಆಹಾರವಾಗಿತ್ತು. ಇದೀಗ ಮತ್ತೊಮ್ಮೆ ಇಂತಹುದೇ ವಿಚಾರದಲ್ಲಿ ಟ್ರೋಲ್​ ಆಗಿದ್ದಾರೆ.  ಈ ಬಾರಿ ತುಂಡು ತುಂಡಾಗಿರೋ ಜೀನ್ಸ್​ ಪ್ಯಾಂಟ್ ತೊಡೋ ಮೂಲಕ ಸಾರಾ ಮತ್ತೆ ಸುದ್ದಿಯಾಗಿದ್ದಾರೆ. ಮುಂಬೈನ ಫೈವ್​ ಸ್ಟಾರ್​ ಹೋಟೆಲ್​ವೊಂದಕ್ಕೆ ತೆರಳಿದ್ದ ಸಾರಾ, ತಾನು ಔಟ್​ಸೈಡ್​ ಫುಲ್​ ಕಟ್​ ಆಗಿರೋ ಜೀನ್ಸ್​ ಪ್ಯಾಂಟ್​ ಧರಿಸಿ ಫೋಟೋಗೆ ಪೋಸ್​ ಕೊಟ್ಟಿದ್ದರು.


ಈ ಫೋಟೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಫುಲ್​​ ಟ್ರೋಲ್​​ ಆಗ್ತಿದೆ. ಸಾರಾಳ ಹರಿದೋಗಿರೋ ಜೀನ್ಸ್​​ ಪ್ಯಾಂಟ್​ಗೆ ನೆಟ್ಟಿಗರು ಕಾಳೆದಿದ್ದು, ಈ ಮಹಿಳೆಗೆ ಪೈಜಾಮಾ ಕೊಡಿಸುತ್ತೇನೆ ಎಂದಿದ್ದಾರೆ. ಡ್ರೆಸ್ ಕುಡಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಿದ್ದಾರೆ.  ಇಷ್ಟೇ ಅಲ್ಲದೇ ಇನ್ನು ಕೆಲವರು ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದ್ದರಿಂದಲೇ ಸಾರಾ ಅಲಿಖಾನ್​ ಈ ರೀತಿಯ ಬಟ್ಟೆ ಧರಿಸಿರಬಹುದು ಎಂದು ಕಾಲೆಳೆದಿದ್ದಾರೆ.ಅಂದ್ಹಾಗೆ, ಇಂತಹ ಟ್ರೋಲ್​ಗಳೆಲ್ಲಾ ಸೆಲೆಬ್ರಿಟಿಗಳಿಗೆ ಹೊಸತೇನಲ್ಲ. ಹಾಗಂತ ಟ್ರೋಲ್​​ಗಳಿಗೆ ಅವರು ತಲೆಕೆಡಿಸೋದೂ ಇಲ್ಲ. ಸಾರಾ ಅಲಿಖಾನ್ ಈಗಾಗಲೇ ಬಾಲಿವುಡ್ ರೇಸ್​​ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಕೇದಾರನಾಥ್ ಹಾಗೂ ಸಿಂಬಾ ಚಿತ್ರದಲ್ಲಿ ನಟಿಸಿದ್ದಾರೆ. ಸಿಂಬಾ ಚಿತ್ರ ಬ್ಲಾಕ್ ಬಸ್ಟರ್ ಹಿಟ್​ ಆಗಿತ್ತು.


Find out more: