ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ರ ದಬಾಂಗ್ 3 ಚಿತ್ರದಲ್ಲಿ ಕನ್ನಡಿಗ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯಿಸುವ ಈ ಚಿತ್ರದ  ಟೀಸರ್ ಇದೀಗ ರಿಲೀಸ್ ಆಗಿದ್ದು ಭರ್ಜರಿ ರೆಸ್ಫಾನ್ಸ್ ಪಡೆದುಕೊಂಡಿದೆ. ಈ ದಬಾಂಗ್ 3 ಚಿತ್ರದ ಕನ್ನಡ ವರ್ಷನ್ ಇದೀಗ ರಿಲೀಸ್ ಆಗಿದೆ. 


ಸೂಪರ್ ಹಿಟ್ ಡೈಲಾಗ್ಸ್ , ಕಿಕ್​ ಕೊಡೋ ಕಾಮಿಡಿ. ಭುಜ ಕುಣಿಸೋ ಸಾಂಗ್ಸ್. ಜಬರ್​ದಸ್ತ್​​ ಆ್ಯಕ್ಷನ್​​. ಸಲ್ಲು ಸ್ಟೈಲ್​ ರೊಮ್ಯಾನ್ಸ್​​. ಫೈನಲಿ ಮಾಫಿಯಾ ಡಾನ್ ಬಲ್ಲಿ ಸಿಂಗ್​ ಅವತಾರದಲ್ಲಿ ಕಿಚ್ಚನ ಖದರ್ರು. ವಾಹ್​​, ದಬಾಂಗ್​ 3 ಆ್ಯಕ್ಷನ್​ ಪ್ಯಾಕ್ಡ್​ ಟ್ರೈಲರ್​ ಏಕ್​ದಮ್​ ಎಂಟ್ರಟ್ರೈನ್​ಮೆಂಟ್​ ಪ್ಯಾಕೇಜ್. 3 ನಿಮಿಷದ ಟ್ರೈಲರ್​ ದಬಾಂಗ್​-3 ಸಿನಿಮಾದ ಕಂಪ್ಲೀಟ್​ ಚಿತ್ರಣವನ್ನ ಬಿಡಿಸಿಟ್ಟಿದೆ. ಪ್ರಭುದೇವಾ ಆ್ಯಕ್ಷನ್​ ಕಟ್​ನಲ್ಲಿ ಸಲ್ಮಾನ್​ ಖಾನ್​ ನಟಿಸ್ತಿರೋ ದಬಾಂಗ್​ ಸರಣಿಯ ಮೂರನೇ ಸಿನಿಮಾ ದಬಾಂಗ್​-3.


ಈ ಬಾರಿ ಕಿಚ್ಚನ ಎಂಟ್ರಿಯಿಂದ ದಬಾಂಗ್ 3 ಅಖಾಡ ನಿಜಕ್ಕೂ ಕಳೆಕಟ್ಟಿದೆ. ಭರ್ಜರಿ ಆ್ಯಕ್ಷನ್​ ಧಮಾಕ ಜೊತೆಯ ಎಲ್ಲಾ ಪಾತ್ರಗಳನ್ನ ಪರಿಚಯಿಸಿ, ಎಂಟ್ರಟ್ರೈನಿಂಗ್​ ಟ್ರೈಲರ್​ ಕಟ್​ ಮಾಡಿದೆ ಚಿತ್ರತಂಡ. ಒನ್ಸ್​ ಅಗೇನ್​ ಚುಲ್​ಬುಲ್​ ಪಾಂಡೆ ಅವತಾರದಲ್ಲಿ ಸಲ್ಮಾನ್​ ಖಾನ್​ ಕಮಾಲ್​ ಮಾಡೋ ಸುಳಿವು ಕೊಟ್ಟಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.


ದಬಾಂಗ್​-3 ಸಿನಿಮಾ ಕನ್ನಡಕ್ಕೂ ಡಬ್​ ಆಗಿ ರಿಲೀಸ್​ ಆಗ್ತಿದ್ದು, ಕನ್ನಡ ಟ್ರೈಲರ್​ಗೂ ಭರ್ಜರಿ ರೆಸ್ಪಾನ್ಸ್​ ಸಿಕ್ತಿದೆ. ​ ಚಿತ್ರದಲ್ಲಿ ಮಾಫಿಯಾ ಡಾನ್ ಅವತಾರದಲ್ಲಿ ಕಿಚ್ಚ ಸುದೀಪ್​​ ಧೂಳೆಬ್ಬಿಸಿದ್ದಾರೆ. ಇದು ದಬಾಂಗ್​ ಪ್ರೀಕ್ವೆಲ್​ ಸಿನಿಮಾ. ಯಂಗ್​​ ಚುಲ್​ಬುಲ್​ ಪಾಂಡೆಯ ಕಥೆಯನ್ನ ಚಿತ್ರದಲ್ಲಿ ಹೇಳಲಾಗ್ತಿದ್ದು, ಆತನಿಗೆ ಎದುರಾಳಿಯಾಗಿ ಸುದೀಪ್​ ಮಿಂಚಿದ್ದಾರೆ. ಬಲ್ಲಿ ಸಿಂಗ್​ ಆಗಿ ಸುದೀಪ್​ ಲುಕ್ಕು, ಆ್ಯಟಿಟ್ಯೂಡ್​​​, ಕಣ್ಣಲ್ಲೇ ಕೊಲ್ಲೋ ಪರಿ ಸಿಂಪ್ಲಿ ಸೂಪರ್ಬ್. ಇವರಿಬ್ಬರ ಏಟು- ಎದಿರೇಟು, ಕ್ಲೈಮ್ಯಾಕ್ಸ್​ನಲ್ಲಿ ಬೇರ್​ ಬಾಡಿ ಫೈಟು ಪ್ರೇಕ್ಷಕರಿಗೆ ಸಖತ್​ ಮಜಾ ಕೊಡಲಿದೆ. ಚಿತ್ರವು ಡಿಸೆಂಬರ್ 20 ಕ್ಕೆ ತೆರೆಕಾಣಲಿದೆ.


Find out more: