ಫ್ಯಾನ್ಸ್, ಫ್ಯಾನ್ಸ್ ಇಂದನೆ ಚಿತ್ರನಟ ಎನ್ನುವುದು ಸ್ವತಹ ಅಣ್ಣಾವ್ರು ಹೇಳಿದ್ರು. ಆದರೆ ಕಾಲಿವುಡ್ ನ ಖ್ಯಾತ ನಟ ವಿಜಯ್ ಅಭಿಮಾನಿಗಳು ಥಿಯೇಟರ್ ನಲ್ಲಿ ಚಿತ್ರ ಪ್ರದರ್ಶನ ಮಾಡಲ್ಲ ಎಂದಿದ್ದಕ್ಕೆ ಈಗಾ ಮಾಡೋದು. ನಿಜಕ್ಕೂ ಇದನ್ನು ಕೇಳಿದ್ರೆ ನಿಮಗೂ ಕೂಡ ಶಾಕ್ ಆಗುತ್ತೆ. ಅಂತಹದ್ದೇನು ನಡೀತು ಅಂತ ನಾವ್ ಹೇಳ್ತೀವಿ ನೋಡಿ. ಇಳೆಯ ದಳಪತಿ ವಿಜಯ್ ಅವರ ಅಭಿಮಾನಿಗಳು ಮಾತ್ರ ಇದೆಲ್ಲದಕ್ಕಿಂತ ಭಿನ್ನ. ಚಿತ್ರಮಂದಿರದಲ್ಲಿ ಸಿನಿಮಾ ಹಾಕಲ್ಲ ಎಂದಿದ್ದಕ್ಕೆ ಬೆಂಕಿಯನ್ನೇ ಹಚ್ಚಿದ್ದಾರೆ.
ಇಂಥದ್ದೊಂದು ದುರಂತ ನಡೆದಿರುವುದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ. ಅಷ್ಟಕ್ಕೂ ಆಗಿದ್ದೇನೆಂದರೆ, ಶುಕ್ರವಾರ ವಿಜಯ್ ಅಭಿನಯದ 'ಬಿಗಿಲ್' ತೆರೆಕಂಡಿದೆ. ದೇಶದ ಹಲವೆಡೆ ವಿಶೇಷ ಶೋಗಳು ಏರ್ಪಡಿಸಲಾಗಿತ್ತು. ಅಂತೆಯೇ ಕೃಷ್ಣಗಿರಿ ಜಿಲ್ಲೆಯ ಚಿತ್ರಮಂದಿರವೊಂದರಲ್ಲಿ ಗುರುವಾರ ಮಧ್ಯರಾತ್ರಿಯೇ ವಿಶೇಷ ಪ್ರದರ್ಶನ ಹಾಕಲಾಗಿತ್ತು. ಸಿನಿಮಾ ಶುರುವಾಗುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅದು ಯಾವ ಮಟ್ಟಿಗೆಂದರೆ, ಚಿತ್ರಮಂದಿರದ ಒಳಗೆಯೇ ಫ್ಯಾನ್ಸ್ ಪಟಾಕಿ ಹಚ್ಚುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಸಹಜವಾಗಿಯೇ ಚಿತ್ರಮಂದಿರದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ.
ಯಾವಾಗ ಸಿನಿಮಾ ಪ್ರದರ್ಶನ ನಿಂತು ಹೋಯಿತೋ, ಅಭಿಮಾನಿಗಳ ಕೋಪ ಹೆಚ್ಚಾಗಿದೆ. ನೂರಕ್ಕೂ ಅಧಿಕ ಜನರ ಗುಂಪು ಘೋಷಣೆ ಕೂಗುತ್ತ, ದಾಂಧಲೆ ಮಾಡಿದ್ದಾರೆ. ಚಿತ್ರಮಂದಿರದ ಹೊರಗೆ ಇದ್ದ ಅಂಗಡಿಮುಂಗಟ್ಟುಗಳಿಗೆ ಬೆಂಕಿ ಇಟ್ಟಿದ್ದಾರೆ. ವಾಹನಗಳಿಗೆ ಹಾನಿ ಮಾಡಿದ್ದಲ್ಲದೆ, ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಒಡೆದು ಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಈಗಾಗಲೇ 35ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಜತೆಗೆ ಕೃಷ್ಣಗಿರಿ ಜಿಲ್ಲೆಯ ಯಾವ್ಯಾವ ಚಿತ್ರಮಂದಿರಗಳಲ್ಲಿ 'ಬಿಗಿಲ್' ಪ್ರದರ್ಶನವಾಗುತ್ತಿದೆಯೋ, ಅಲ್ಲೆಲ್ಲ ಬಿಗಿಬಂದೋಬಸ್ತ್ ನೀಡಲಾಗಿದೆಯಂತೆ.
ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಬಂಡವಾಳದಲ್ಲಿ ನಿರ್ಮಾಣವಾಗಿರುವ 'ಬಿಗಿಲ್' ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಜಾಕಿಶ್ರಾಫ್, ವಿವೇಕ್, ಕದೀರ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಅಂದಹಾಗೆ, ವಿಜಯ್‌ಗೆ ಅಟ್ಲೀಕುಮಾರ್ ನಿರ್ದೇಶಿಸಿರುವ ಮೂರನೇ ಸಿನಿಮಾ ಇದಾಗಿದೆ. ಚಿತ್ರ ಭರ್ಜರಿಯಾಗಿ ಮೂಡಿಬಂದಿದೆ.