ತನ್ನ ಬ್ಲೆಡ್ ಅಲ್ಲೇ ನಟನೆಯನ್ನು ಕರಗತ ಮಾಡಿಕೊಂಡು ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಸಂಯುಕ್ತಾ ಗೆ ಪ್ರಾಣಿ ಅಂದ್ರೆ ಪಂಚಪ್ರಾಣವಂತೆ. ಹೌದು, ನಾಯಿ ಮೊಲವನ್ನು ತುಂಬಾನೇ ಇಷ್ಟಪಡ್ತಾರಂತೆ.  ನಟನಾ ಕಲೆ ಇವರಿಗೆ ರಕ್ತ ಗತವಾಗಿಯೇ ಬಂದಿದೆ. ಯಾಕಂದ್ರೆ ಇವರ ಪೂರ್ತಿ ಕುಟುಂಬವೇ ರಂಗಭೂಮಿ ಕಲಾವಿದರು. ತಾಯಿ ಸುಧಾ ಬೆಳವಾಡಿ ಮತ್ತುಅಂಕಲ್ ಪ್ರಕಾಶ್ ಬೆಳವಾಡಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡವರು.

ಇವರ ಅಜ್ಜಿ ನಿರ್ದೇಶನ ಮಾಡಿದ 'ಉಂಡಾಡಿ ಗುಂಡ' ನಾಟಕದಲ್ಲಿ 6 ವರ್ಷದ ಬಾಲಾ ಕಲಾವಿದೆಯಾಗಿ ಮೊದಲು ಬಾರಿಗೆ ವೇದಿಕೆ ಹತ್ತಿದ್ದರು. ಸುದ್ದಿ ಪತ್ರಿಕೆಯಲ್ಲಿ ಇವರ ಪೋಟೋ ಬರಬೇಕೆಂದು ಆಸೆಯಿತ್ತಂತೆ. ರಂಗಭೂಮಿ ಕಲಾವಿದೆಯಾಗಿದ್ದರೂ ಪೇಪರ್‌ನಲ್ಲಿ ಫೋಟೋ ಬರಬೇಕೆಂಬ ಕಾರಣಕ್ಕೆ ಸಿನೆಮಾ ಪ್ರವೇಶ ಮಾಡಿದರು. ಮೊದಲೇ ರಂಗಭೂಮಿ ಕಲಾವಿದೆಯಾಗಿದ್ದರಿಂದ ನಟನೆಇವರಿಗೆ ಸಲೀಸಾಗಿತ್ತು. ಆಗ ದೊರೆತ ಸಿನೆಮಾವೇ ಲೈಫು ಇಷ್ಟೇನೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆ ಸಿನೆಮಾಗಳಲ್ಲೂ ನಟಿಸಿದ್ದಾರೆ.


ಸಂಯುಕ್ತಾ ಯಾವಾಗಲೂ  ಸಿನೆಮಾಕ್ಕಿಂತಲೂ ಪ್ರಾಣಿಗಳನ್ನೂ ಹೆಚ್ಚಾಗಿ ಇಷ್ಟ ಪಡುತ್ಷಾರಂತೆ. ತನ್ನ ಪ್ರೀತಿ ಪಾತ್ರವಾದ ಶ್ವಾನಗುಂಡನ ಹೆಸರಿನಲ್ಲಿ ಟ್ರಸ್ಟಿವೊಂದನ್ನು ಸ್ಥಾಪಿಸಿ ಆ ಮೂಲಕ ಬೀದಿನಾಯಿಗಳ ಪಾಲನೆ, ಪೋಷಣೆಯನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ  'ನಾನು ಮತ್ತು ಗುಂಡ' ಎಂಬ ಸಿನಿಮಾವು ತೆರೆ ಕಾಣಲಿದ್ದು, ಇದು ಪ್ರಾಣಿ ಪ್ರೇಮಿಗಳ ಕುರಿತಾದ ಸಿನೆಮವಾಗಿದೆ.


ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತಿವೆ. ಆದರೆ ಸಂಯುಕ್ತಾ ಹೊರನಾಡು ಕನ್ನಡ ಶಾಲೆಯ ಉಳಿವಿಕೆಗಾಗಿ ಶ್ರಮಿಸುತ್ತಿದ್ದಾರೆ. ಹಳ್ಳಿಗಳಿಗೆ ಹೋಗಿ ಅಲ್ಲಿನ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಕನ್ನಡ ಶಾಲೆಗಳ ಪರ ನಿಂತಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಮೃತಹಳ್ಳಿ ಸಾರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಮೂಲಕ ಸೇವ್‌ ಗಾರ್ವರ‌್ಮೆಂಟ್‌ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಅನಿಲ್ ಶೆಟ್ಟಿ ಇವರಿಗೆ ಸಾಥ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕನಕಪುರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳುವ ಆಲೋಚನೆ ಕೂಡ ಮಾಡಿದ್ದಾರಂತೆ. ಕೇವಲ ಹಣ ಮಾತ್ರವಲ್ಲದೇ ಸಮಾಜಸೇವೆಯ ಇವರ ಕಾರ್ಯವನ್ನು ಮೆಚ್ಚಲೇ ಬೇಕು.




Find out more: