ಈ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಪದ್ಮಾವತಿ ಹವಾ ಬಲು ಜೋರಿತ್ತು. ಊರಿಗೊಬ್ಳೆ ಪದ್ಮಾವತಿ ಅಂತರಂಗ ಯಾಕಾಡುತಿ ಎಂದೆಲ್ಲಾ ಹಾಡು ಹಾಡುತ್ತಾ ಭರ್ಜರಿಯಾಗಿ ಸ್ಟಪ್ ಹಾಕ್ತಿದ್ಲು. ಆದ್ರೆ ಸಿನ್ ಪ್ರಪಂಚದ ಜೊತೆಗೆ ಜನ ಸೇವೆಯೇ ಜನಾರ್ದನನ ಸೇವೆ ಎಂದು ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಳು. ಅದಾದ ನಂತರ ಪಾಕಿಸ್ತಾನದವರು ನಮ್ಮವರೆ ಎಂಬ ಹೇಳಿಕೆ ಮೂಲಕ ತನ್ನ ಶಕ್ತಿ ಸಾಮರ್ಥ್ಯ ತೋರಿಸಲೋಗಿ ಟ್ರೋಲ್ ಗೆ ಗುರಿಯಾಗಿದ್ದರು. ಅರೇ ಇಷ್ಟೇಲ್ಲಾ ಮಾಡಿದ ಆ ಪದ್ಮಾವತಿ ಯಾರು ಅಂತ ಆಶ್ಚಕ್ಯವಾಯ್ತಾ. ನಾವ್ ಹೇಳ್ತೀವಿ ಮುಂದೆ ಓದಿ.
ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾಗಿದ್ದ ಸ್ಯಾಂಡಲ್ವುಡ್ ಪದ್ಮಾವತಿ ಇದೀಗ ರಮ್ಯಾ ಮತ್ತೆ ಮರಳಿದ್ದಾರೆ. ಏಕೆಂದರೆ ರಮ್ಯಾ ನಟನೆಯ 'ದಿಲ್ ಕಾ ರಾಜ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 2014ರಲ್ಲಿ ಸೆಟ್ಟೇರಿದ್ದ 'ದಿಲ್ ಕಾ ರಾಜ ನಾನಾ' ಕಾರಣಗಳಿಂದ ಪೂರ್ತಿಯಾಗಿರಲಿಲ್ಲ. ಇದೀಗ 5ವರ್ಷಗಳ ಬಳಿಕ ರಾಜನೊಂದಿಗೆ ರಾಣಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದು, ತಮ್ಮ ಮುದ್ದು ಮುಖದೊಂದಿಗೆ ರಮ್ಯಾ ತೆರೆ ಮೇಲೆ ಬರಲಿದ್ದಾರೆ.
ಚಿತ್ರರಂಗದಿಂದ ರಾಜಕೀಯ ಪ್ರವೇಶಿಸಿದ್ದ ಸ್ಯಾಂಡಲ್ವುಡ್ ಕ್ವೀನ್ ಆ ಬಳಿಕ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಆಗೊಮ್ಮೆ ಈಗೊಮ್ಮೆ ರಮ್ಯಾ ಮತ್ತೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದವು. ಇದೀಗ ಮೋಹಕ ನಟಿ ಹಳೆಯ ಚಿತ್ರದೊಂದಿಗೆ ರಿಎಂಟ್ರಿ ಕೊಡಲಿರುವುದು ಪಕ್ಕಾ ಆಗಿದೆ. ಚಿತ್ರವು ಲವ್ ಕಮ್ ಆ್ಯಕ್ಷನ್ ಡ್ರಾಮಾ ಕಥೆ ಹೊಂದಿರುವ 'ದಿಲ್ ಕಾ ರಾಜ' ಈ ಹಿಂದೆಯೇ ಹಲವು ಕಾರಣಗಳಿಂದ ಎಲ್ಲರ ಗಮನ ಸೆಳೆದಿತ್ತು. ಆದರೆ ನಂತರದ ದಿನಗಳಲ್ಲಿ ಯಾವುದೇ ಅಪ್ಡೇಟ್ಗಳಿರಲಿಲ್ಲ. ಈಗ ಏಕಾಏಕಿ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಈಚಿತ್ರವನ್ನು ಸೋಮನಾಥ್ ಪಾಟೀಲ್ ನಿರ್ದೇಶಿಸಿದ್ದು, ಎಸ್.ಎಸ್.ವಿ ಪ್ರೊಡಕ್ಷನ್ ನಿರ್ಮಿಸಿದೆ. ಇನ್ನು 'ದಿಲ್ ಕಾ ರಾಜ' ಚಿತ್ರದ ಮೂಲಕ ತಮ್ಮ ದಿಲ್ ಕಾ ರಾಣಿಯನ್ನು ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ನೋಡಲು ರಮ್ಯಾ ಅಭಿಮಾನಿಗಳಂತು ತುದಿಗಾಲಲ್ಲಿ ನಿಂತಿದ್ದಾರೆ.