ಟಾಲಿವುಡ್ ನಲ್ಲಿ ರೌಡಿ ಹೀರೋ ಎಂದೇ ಕರೆಯಿಸಿಕೊಳ್ಳುವ ವಿಜಯ್ ದೇವರಕೊಂಡ ಅವರ ಸಿನಿಮಾ ನೋಡಲು ಅಭಿಮಾನಿಗಳು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಾರೆ.  ಅಭಿಮಾನಿಗಳಲ್ಲಿ ಕೇವಲ ಹುಡುಗರು ಮಾತ್ರವಲ್ಲದೇ, ಹುಡುಗಿಯರು ಸಹ ಹೆಚ್ಚಾಗಿದ್ದು, ಅವರಿ ಗಾಗಿಯೂ ಸಹ ವಿಜಯ್ ಚಿತ್ರದಲ್ಲಿ ಸ್ಪೆಷಲ್ ಡೈಲಾಗ್ ಗಳನ್ನು ಬರೆಯಲಾಗಿರುತ್ತದೆ. ಡಿಫರೆಂಟ್ ಡ್ರೆಸ್ ಗಳನ್ನು ಸಹ ಡಿಸೈನ್ ಮಾಡಲಾಗಿರುತ್ತದೆ.

ಅರ್ಜುನ ರೆಡ್ಡಿ ಚಿತ್ರದ ಮೂಲಕ ಸಿನಿ ಪ್ರಿಯರಿಗೆ ತಾನು ಯಾರೆಂದು ತೋರಿಸುವ ಮೂಲಕ ಅವರದೇ ಆದ ಬ್ರಾಂಡ್ ಅನ್ನು ಸೃಷ್ಠಿಸಿಕೊಂಡರು. ವಿಜಯ್​ ದೇವರಕೊಂಡ ಸದ್ಯ 'ವರ್ಲ್ಡ್​ ಫೇಮಸ್​ ಲವರ್​' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಿರುವಾಗಲೇ ಅವರು ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅದರ ಹೊಸ ಹಾಡು ಈಗ ಬಿಡುಗಡೆ ಆಗಿದೆ.


ನಿಜ, ವಿಜಯ್​ ದೇವರಕೊಂಡ ನಿರ್ಮಿಸುತ್ತಿರುವ 'ಮೀಕು ಮಾತ್ರಮೇ ಚೆಪುತಾ' ಸಿನಿಮಾದ ನುವ್ವೇ ಹೀರೋ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ವಿಜಯ್​ ಲುಕ್​ ಹಾಗೂ ಸ್ಟೈಲ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ. ಇನ್ನೂ ಈ ಸ್ಟೈಲ್​ ಟ್ರೆಂಡ್ ಆಗುತ್ತಿದೆ. ಈ ಹಾಡು ಬಿಡುಗಡೆಯಾಗಿ 24 ಗಂಟೆ ಕಳೆಯುವಷ್ಟರಲ್ಲೇ 4 ಲಕ್ಷಕ್ಕೂ  ಹೆಚ್ಚು ವೀಕ್ಷಣೆ ಸಿಕ್ಕಿದೆ. ಶಮೀರ್​ ಸುಲ್ತಾನ್​ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ 'ಪೆಳ್ಳಿ ಚೂಪುಲು' ನಿರ್ದೇಶಕ ತರುಣ್​ ಭಾಸ್ಕರ್​ ಹಾಗೂ ವಾಣಿ ಭೋಜನ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.


ವಿಜಯ್ ದೇವರಕೊಂಡ ಪ್ರಸ್ತುತ ವರ್ಲ್ಡ್ ಫೇಮಸ್ ಲವರ್ ಚಿತ್ರದಲ್ಲಿ ನಟಿಸುತ್ತಿದ್ದೂ, ಈ ಚಿತ್ರವು ಲವ್+ ಕಾಮಿಡಿ ರೋಮ್ಯಾಂಟಿಕ್, ಫೈಂಟಿಗ್ಸ್, ಡೈಲಾಗ್ ಗಳಿಂದ ಕೂಡಿರಲಿದೆಯಂತೆ. ಆದ್ದರಿಂದ ವಿಜಯ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಈಗಿನಿಂದಲೇ ಕಾಯುತ್ತಿದ್ದಾರೆ. ಪೋಸ್ಟರ್ ಮೂಲಕ ಈಗಾಗಲೇ ಭಾರೀ ಸದ್ದು ಸಹ ಮಾಡಿತ್ತು. ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದು ಈ ಹಿಂದೆ ಭಾರೀ ಹಿಟ್ ಪಡೆದ ಚಿತ್ರವಾಗಿತ್ತು. ಅದಾದ ನಂತರ ನೋಟಾ ಮತ್ತು ಟ್ಯಾಕ್ಸಿವಾಲ  ಚಿತ್ರದಲ್ಲಿ ವಿಜಯ್ ನಟಿಸಿದ್ದರು. ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ಕಾಣದಿದ್ದರೂ ಸಹ ತನ್ನ ಖದರ್ ಮಾತ್ರ ಕಳೆದುಕೊಂಡಿರಲಿಲ್ಲ.

Find out more: