ಧುರ್ಯೋಧನನೀಗ ಒಡೆಯನ ಅವತಾರ ಎತ್ತಿದ್ದಾನೆ. ಒಡೆಯ ಅವತಾರದ ಟೀಸರ್ ಒಂದು ರಾಜ್ಯೋತ್ಸವದ ಪ್ರಯುಕ್ತ ಕನ್ನಡದ ಕಂಪನ್ನು ಕನ್ನಡಿಗರ ಜೊತೆಗೆ ರಾಷ್ಟ್ರಕ್ಕೆ ಸುವಾಸನೆಯಿತ್ತಿದೆ. ಅಷ್ಟಕ್ಕೂ ಒಡೆಯ ಯಾರು, ಧುರ್ಯೋಧನನೀಗ ಒಡೆಯನಾಗಿದ್ದು ಹೇಗೆ ಎಂದು ನಾವ್ ಹೇಳ್ತೀವಿ.ಮುಂದೆ ಓದಿ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದಲ್ಲಿ ದುರ್ಯೋಧನ ನಾಗಿ ಅಭಿನಯಿಸಿದ್ದು ಸಾಕ್ಷಾತ್ ಕೌರವೇಂದ್ರನನ್ನೇ ನೋಡಿದಂತ ಅನುಭವವಾಗಿತ್ತು.

ಇದೀಗ ದರ್ಶನ್ ಅಭಿನಯದ ಒಡೆಯ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.  ಅಧಿಕಾರವೂ ನಂದೇ, ಆಜ್ಞೆನೂ ನಂದೇ ಎಂದ ‘ಒಡೆಯ’, 100ನಿಮಿಷದಲ್ಲಿ 1,00,000 ಲೈಕ್ಸ್ ಪಡೆಯುವ ಮೂಲಕ ಸ್ಯಾಂಡಲ್ ವುಡ್ ನ ತನ್ನ ಹವಾ ಏನೆಂಬುದನ್ನು ಸಾಬೀತು ಮಾಡಿದ್ದಾರೆ.   ಯಜಮಾನ ಹಾಗೂ ಕುರುಕ್ಷೇತ್ರ ಚಿತ್ರಗಳ ನಂತ್ರ ಚಾಲೆಂಜಿಂಗ್ ಸ್ಟಾರ್ ಹ್ಯಾಟ್ರಿಕ್ ಹಿಟ್ ಹೊಡೆಯೋಕ್ಕೆ ಸಜ್ಜಾಗಿರೋ ಈ ವರ್ಷದ ಮೂರನೇ ಸಿನಿಮಾ. ಅಷ್ಟೇ ಅಲ್ಲ, ಡಿ ಬಾಸ್ ಸ್ಟೈಲು ಮ್ಯಾನರಿಸಂಗೆ ಹೇಳಿ ಮಾಡಿಸಿದಂತಹ ಫ್ಯಾಮಿಲಿ ಕಮ್ ಮಾಸ್ ಎಂಟ್ರಟೈನರ್ ಇದಾಗಿದ್ದು, ಈ ವರ್ಷದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾಗಳ ಲಿಸ್ಟ್​ನಲ್ಲಿ ಅಗ್ರ ಶ್ರೇಯಾಂಕ ಅಲಂಕರಿಸಿದ ಸಿನಿಮಾ ಅನಿಸಿದೆ.


ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ತಯಾರಾದ ಒಡೆಯ ಚಿತ್ರಕ್ಕೆ ಎಂ.ಡಿ. ಶ್ರೀಧರ್ ಆ್ಯಕ್ಷನ್ ಕಟ್ ಹೇಳಿದ್ದು, ಎನ್ ಸಂದೇಶ್ ನಿರ್ಮಿಸಿದ್ದಾರೆ. 43 ಸೆಕೆಂಡ್ ಇರೋ ಒಡೆಯ ಟೀಸರ್​ನಲ್ಲಿ ಚಿತ್ರ ಹೇಗಿರಲಿದೆ. ಅದ್ರಲ್ಲಿ ದಚ್ಚು ಗತ್ತು, ಗಾಂಭೀರ್ಯದ ತೀವ್ರತೆ ಸೇರಿದಂತೆ ಕಾತುರದಿಂದ ಕಾಯ್ತಿದ್ದ ಡಿ ಅಭಿಮಾನಿ ವೃಂದಕ್ಕೆ ಒಡೆಯನ ಒಂದು ಮುಖ ಪರಿಚಯಿಸಿದೆ ಚಿತ್ರತಂಡ.

ಧಿಕಾರದ ಆಸೆಯಿಂದ ಬಂದವನಲ್ಲ ಅನ್ನೋ ಒಡೆಯ, ಅಧಿಕಾರವೇ ಆಸೆಪಟ್ಟು ನನ್ನನ್ನ ಇಲ್ಲಿಗೆ ಕರೆಸಿಕೊಂಡಿದೆ ಅನ್ನೋ ಒಂದು ಡೈಲಾಗ್ ಡಿ ಬಾಸ್ ಅಭಿಮಾನಿಗಳಿಗೆ ಬೇಜಾನ್ ಕಿಕ್ ಕೊಟ್ಟಿದೆ. ಅದ್ರ ಜೊತೆಗೆ ಇನ್ಮುಂದೆ ಅಧಿಕಾರವೂ ನಂದೇ, ಆಜ್ಞೆನೂ ನಂದೇ ಅನ್ನೋ ಒಡೆಯ, ನನ್ನ ಫೇಸ್ ಮಾಡೋಕ್ಕೆ ಗುಂಡಿಗೆಯಲ್ಲಿ ಧಮ್ ಇರಬೇಕು ಅನ್ನೋ ಡೈಲಾಗ್ಸ್​ಗೆ ಶಿಳ್ಳೆ- ಚಪ್ಪಾಳೆಗಳ ಸುರಿಮಳೆಯೇ ಆಗ್ತಿದೆ. ಡೈಲಾಗ್ಸ್​ಗೆ ತಕ್ಕನಾಗಿ ಅರ್ಜುನ್ ಜನ್ಯ ಬ್ಯಾಗ್ರೌಂಡ್ ಮ್ಯೂಸಿಕ್, ಕೆಕೆ ಸಿನಿಮಾಟೋಗ್ರಫಿ ಕೂಡ ಬೇಜಾನ್ ಥ್ರಿಲ್ ಕೊಡ್ತಿದೆ.


Find out more: