ನೋಡಲು ತುಂಬಾ ಸೈಲೆಂಟ್ ಆಗಿದ್ದರು ಸಹ ತುಂಬಾನೇ ಟ್ಯಾಲೆಂಟು.  ಸರಳ ವ್ಯಕ್ತಿಯಾಗಿರುವ ಧರ್ಮಣ್ಣ ಸ್ಯಾಂಡಲ್ ವುಡ್ ನ ವಿಭಿನ್ನ ವ್ಯಕ್ತಿ. 'ರಾಮಾ ರಾಮಾ ರೇ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ಧರ್ಮಣ್ಣ  ಕಡೂರು. ಮೊದಲ ಚಿತ್ರವೇ ಅವರಿಗೆ ದೊಡ್ಡ ಗೆಲುವು ನೀಡಿತು. ಆನಂತರ 'ಗೋಲ್ಡನ್‌ ಸ್ಟಾರ್' ಗಣೇಶ್ ನಟನೆಯ 'ಮುಗುಳು ನಗೆ' ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನಸೆಳೆದರು ಧರ್ಮಣ್ಣ. ಪ್ರಸ್ತುತ ಅವರ ಬಳಿ ಹಲವಾರು ಚಿತ್ರಗಳಿವೆ. ಅದರಲ್ಲಿ ಒಂದು ಸಿನಿಮಾ ಮಾತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಲಿದೆಯಂತೆ ಯಾವುದು ಆ ಸಿನಿಮಾ. ಮುಂದೆ ಓದಿ. 


'ಜಯಮ್ಮನ ಮಗ' ಸಿನಿಮಾ ನಿರ್ದೇಶಕ ವಿಕಾಸ್‌ ನಾಯಕರಾಗಿ ನಟಿಸಿರುವ 'ಕಾಣದಂತೆ ಮಾಯ ವಾದನು' ಸಿನಿಮಾದಲ್ಲಿ ನಟ ಧರ್ಮಣ್ಣ ಕಡೂರು ಸಹ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ನನ್ನ ಸಿನಿಮಾ ಬದುಕಿಗೆ ಒಂದು ತಿರುವು ನೀಡುತ್ತದೆ ಎಂದು ಧರ್ಮಣ್ಣ ತಿಳಿಸಿದ್ದಾರೆ. 'ನಾನು ಸಾಕಷ್ಟು ಸಿನಿಮಾಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ 'ಕಾಣದಂತೆ ಮಾಯ ವಾದನು' ಸಿನಿಮಾದ ಪಾತ್ರವನ್ನು ನಾನು ಮರೆಯಲು ಸಾಧ್ಯವಿಲ್ಲ. ನನ್ನಂತಹ ಕಲಾವಿದನಿಗೆ ಈ ಪಾತ್ರ ಸಿಕ್ಕಿದ್ದು ನಿಜಕ್ಕೂ ಒಂದು ಪುಣ್ಯ ಎನ್ನಬಹುದು. ಅದರ ಬಗ್ಗೆ ಹೆಚ್ಚಿಗೆ ಹೇಳಲು ಆಗುವುದಿಲ್ಲ. ಏಕೆಂದರೆ ಅದೇ ಸಿನಿಮಾದ ಸಸ್ಪೆನ್ಸ್‌ ' ಅಂತಾರೆ ಧರ್ಮಣ್ಣ ನವರು. 


 'ಕಾಣದಂತೆ ಮಾಯ ವಾದನು' ಸಿನಿಮಾದಲ್ಲಿ ಬ್ರೇಕ್  ನಂತರ ಧರ್ಮಣ್ಣ ಅವರೇ ಹೀರೋ ಎನ್ನಬಹುದು. ಈ ಸಿನಿಮಾ ಬಿಡುಗಡೆಯಾದ ಮೇಲೆ ಅವರ ರೇಂಜ್‌ ಬದಲಾಗುತ್ತದೆ' ಎಂದು ವಿಶ್ವಾಸದಿಂದ ಹೇಳುತ್ತಾರೆ ಹೀರೋ ವಿಕಾಸ್‌. ಸದ್ಯ 'ಇನ್‌ಸ್ಪೆಕ್ಟರ್‌ ವಿಕ್ರಂ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಧರ್ಮಣ್ಣ ನಟಿಸುತ್ತಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್‌ನಿಂದ ಅವರೀಗ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದಾರೆ. ಎಲ್ಲರಂತೆ ಸರಳವಾಗಿ ಕಂಡರು ಸಹ ಅವರಲ್ಲೇನೋ  ವಿಶೇಷತೆ ಇದೆ. ಅದರಿಂದಲೇ ಅವರು ನಿರೀಕ್ಷಿಸದ ಮಟ್ಟದಲ್ಲಿ ಬೆಳೆಯುತ್ತಿದ್ದಂತೆ.


Find out more: