ಇತ್ತೀಚೆಗಷ್ಟೇ ಡಾಕ್ಟರೇಟ್ ಪದವಿ ಪಡೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಹೊಚ್ಚಹೊಸ ಚಿತ್ರ ಇದೇ ವಾರ ತೆರೆಗಪ್ಪಳಿಸಲಿದೆ. ಈ ಚಿತ್ರದಲ್ಲಿ ಹೀರೋಯಿನ್ ನೇ ಇಲ್ಲ. ಹೌದು ಆಶ್ಚವಾದರೂ ಸಹ ನಂಬಲೇಬೇಕಾದ ವಿಷಯವಿದು. ಈಗಲೇ ಸಿನಿಮಾದ ಕಥೆ ಹೇಳಿದರೆ ಚಿತ್ರಮಂದಿರಕ್ಕೆ ಯಾರೂ ಬರುವುದಿಲ್ಲ. ಆದರೆ ಒಂದು ದಿನ ಮೊಬೈಲ್‌ ಆಫ್‌ ಆಗಿ ಅದು ಮರುದಿನ ಆನ್‌ ಆಗುತ್ತದೆ. ಈ ಮಧ್ಯೆ ನಡೆಯುವ ಕಥೆಯೇ ಆ ದೃಶ್ಯ ಸಿನಿಮಾ. 


ನಾನು ಪ್ರತಿ ಸಿನಿಮಾ ಒಪ್ಪಿಕೊಂಡಾಗಲೂ ಹೊಸಬನಂತೆಯೇ ಶೂಟಿಂಗ್‌ ಸೆಟ್‌ಗೆ ಹೋಗುತ್ತೇನೆ. ಹಾಗಾಗಿ ಅವರಾರು ನನಗೆ ಹೊಸಬರಂತೆ ಕಂಡಿಲ್ಲ. ನಿರ್ದೇಶನ ಮಾಡುವ ಪ್ರತಿ ನಿರ್ದೇಶಕರು ನನಗೆ ಹೊಸಬರೆ. ನಾನು ಹೊಸದನ್ನು ಕಲಿಯುತ್ತಾ, ಸಿನಿಮಾದಲ್ಲಿ ನಟಿಸುತ್ತೇನೆ.ಇತ್ತೀಚೆಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳು ಹೆಚ್ಚಾಗಿವೆ? ಹೌದು, ಜನ ಅಂತಹ ಸಿನಿಮಾಗಳನ್ನು ಇಷ್ಟಪಡುತ್ತಿದ್ದಾರೆ. ದೃಶ್ಯ ಸಿನಿಮಾ ಕೂಡಾ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಚಿತ್ರವಾಗಿತ್ತು. ಅದು ಜನರಿಗೂ ಇಷ್ಟವಾಯಿತು. ಈ ಸಿನಿಮಾದಲ್ಲಿ ಹಾಡುಗಳು ಕಡಿಮೆ ಇದೆ. ಆದರೆ ರೀ ರೆಕಾರ್ಡಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದಿದ್ದಾರೆ. 


ಆ ದೃಶ್ಯ ಹೇಗೆ ಇಮೇಜ್ ಕೊಡತ್ತೋ ಹಾಗೆ ಆ ದೃಶ್ಯ ಇಮೇಜ್ ಕೊಡತ್ತೆ. ೮ ಅಂದರೆ ನನಗೆ ತಂದೆ ನೆನಪಾಗುತ್ತದೆ. ಈ ಚಿತ್ರದ ಮೇಲೆ ನನ್ನ ತಂದೆ ಆಶೀರ್ವಾದ ಇರತ್ತೆ. ನಾನು ಡಬ್ಬಿಂಗ್‌ ಮಾಡುವಾಗಷ್ಟೇ ಈ ಸಿನಿಮಾ ನೋಡಿದ್ದೇನೆ. ಒಂದು ಫ್ಲೋನಲ್ಲಿ ನೋಡಿಲ್ಲ. ನನಗೆ ಯಾರೂ ಸಿನಿಮಾ ತೋರಿಸುವುದಿಲ್ಲ. ಏನಾದರೂ ಹೇಳಿದರೆ ಕಷ್ಟ ಎಂದು ಹೆದರುತ್ತಾರೆ ಎಂದು ಸಹ ಹೇಳಿದ್ದಾರೆ.  ನಾನು ಸಿನಿಮಾದಲ್ಲಿಎಲ್ಲ ರೀತಿಯ ಕಾಸ್ಟ್ಯೂಮ್‌ ಹಾಕಿದ್ದೇನೆ. ಈಗ ಗೌರವ ಡಾಕ್ಟರೇಟ್‌ ನೀಡಿರುವುದರಿಂದ ಅದನ್ನು ಸದ್ಯದಲ್ಲೇ ಹಾಕುತ್ತಿದ್ದೇನೆ. ಡಾಕ್ಟರೇಟ್‌ ಗೌರವ ಸ್ವೀಕರಿಸಿದ ಮೇಲೆ ಆ ಬಗ್ಗೆ ಹೇಳುತ್ತೇನೆ.ಆ ದೃಶ್ಯದಲ್ಲಿಪೊಲೀಸ್‌ ಅಧಿಕಾರಿಯ ರೋಲ್‌ ಆಗಿದ್ದರಿಂದ ಕರ್ಲಿಹೇರ್‌ ಬೇಡ ಅಂದರು. ಹಾಗಾಗಿ ಈ ಚಿತ್ರದಿಂದ ನನ್ನ ಲುಕ್‌ ಬದಲಾಗಿದೆ ಎಂದು ತಿಳಿಸಿದ್ದಾರೆ. ರವಿಮಾಮನ ಚಿತ್ರಕ್ಕಾಗಿ ಅಭಿಮಾನಿಗಳು ಈಗಾಗಲೇ ಕಾಯುತ್ತಿದ್ದಾರೆ.




Find out more: