ಶಾರುಖ್, ಬಾಲಿವುಡ್ ಬಾಕ್ಸ್ ಆಫೀಸ್ ನ ಸುಲ್ತಾನ್. ಈ ಸುಲ್ತಾನ್ ಪಟ್ಟ ಅಲಂಕರಿಸಲು ಶಾರುಕ್ ಪಟ್ಟ ಶ್ರಮ  ಅಷ್ಟಿಷ್ಟಲ್ಲ.  ಚೆನ್ನೈ ಎಕ್ಸ್ ಪ್ರೆಸ್ ನಂತೆಯೇ ಇವರು ಬಾಲಿವುಡ್ ಎಕ್ಸ್ ಪ್ರೆಸ್. ಲಕ್ಷಾಂತರ ಜನಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಇವರು ಇತ್ತೀಚೆಗಷ್ಟೇ ತಮ್ಮ  ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.  ಇತ್ತೀಚಿಗಷ್ಟೆ ನಡೆದ ಒಂದು ಸಂದರ್ಶನದಲ್ಲಿ ತುಂಬಾ ಭಾವನಾತ್ಮಕವಾಗಿ ಇತ್ತು. ನೆಟ್ ಫಿಕ್ಸ್ ನಡೆಸಿದ ಈ ಸಂದರ್ಶನದಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೆ ಶಾರೂಖ್ ಖಾನ್ ಮಾತನಾಡಿದರು.ಸಣ್ಣ ವಯಸ್ಸಿನಲ್ಲಿಯೇ ತಂದೆ, ತಾಯಿಯನ್ನು ಶಾರೂಖ್ ಖಾನ್ ಕಳೆದುಕೊಂಡರು.


ಸಾವಿನ ಬಗ್ಗೆ ನಂತರ ಜೀವನದ ಜೊತೆಗಿನ ಹೋರಾಟದಲ್ಲಿ ಗೆದ್ದು, ದೊಡ್ಡ ನಟನಾಗಿ ಬೆಳೆದರು.ಇತ್ತೀಚಿಗಿನ ಸಂದರ್ಶನದಲ್ಲಿ ಶಾರೂಖ್ ಹೇಳಿದ ಒಂದು ಘಟನೆ ಹೃದಯಸ್ಪರ್ಶಿಯಾಗಿತ್ತು. ಸಂದರ್ಶನದ ಪ್ರಮುಖ ಅಂಶವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಂದೆಯನ್ನು ತಮ್ಮ ಸಕ್ಸಸ್ ಫುಲ್ ಫೆಲ್ಯೂರ್ ಎಂದು ಶಾರೂಖ್ ಖಾನ್ ಹೇಳುತ್ತಾರೆ. ಕಾರಣ ಅವರ ತಂದೆ ಜೀವನದಲ್ಲಿ ಏನನ್ನು ಮಾಡಲಿಲ್ಲವಂತೆ. ಸತ್ಯವಾಗಿ ಇದ್ದದ್ದೇ ಅವರ ಯಶಸ್ಸಿಗೆ ಅಡ್ಡ ಆಯಿತಂತೆ. ಕೆಲಸ ಇಲ್ಲದೆ ಮಕ್ಕಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರಂತೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು, ಮಾತ್ರ ತಂದೆಯ ಬಗ್ಗೆ ಶಾರೂಖ್ ಗೆ ಖುಷಿ ನೀಡುವ ವಿಷಯ.


ಶಾರೂಖ್ ಆಗ 15ವರ್ಷದ ಹುಡುಗ. ಮನೆಗೆ ಬರುವ ತಂದೆ ತನಗೆ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ. ಶಾರೂಖ್ ಹಾಗೂ ಅವರ ತಾಯಿ ಇಬ್ಬರಿಗೂ ಆ ಕಾಲದಲ್ಲಿ ಕ್ಯಾನ್ಸರ್ ಖಾಯಿಲೆ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಅದು ವಾಸಿಯಾಗಿಬಿಡುವ ಖಾಯಿಲೆ ಎಂದು ಭಾವಿಸಿದ್ದರು.ಆದರೆ, ಕ್ಯಾನ್ಸರ್ ಆದ ಮೂರು ತಿಂಗಳಿಗೆ ತಂದೆ ತೀರಿಹೋದರು. ನಂತರ ಕೆಲವೇ ವರ್ಷಗಳಲ್ಲಿ ತಾಯಿ ಕೂಡ ಕೊನೆಯುಸಿರೆಳೆದರು.ಯಾರಿಗೆ ಭೂಮಿಯ ಮೇಲೆ ಕೆಲಸ ಮುಗಿಯುತ್ತದೆ, ಯಾರು ಜೀವನದಲ್ಲಿ ತೃಪ್ತಿಯಾಗಿ ಇರುತ್ತದೆ ಅವರಿಗೆ ಮಾತ್ರ ಸಾವು ಬರುತ್ತದೆ ಎಂದುಕೊಂಡಿದ್ದರುತಾಯಿ ನೆಮ್ಮದಿಯಾಗಿ ಇದ್ದರೆ, ಆಕೆಯೂ ಸಾಯುತ್ತಾಳೆಂದು ತೊಂದರೆ ನೀಡಲು ಶುರು ಮಾಡಿದರು. ಇದೀಗ ಎಲ್ಲೆಡೆ ಈ ಸಕ್ಸಸ್ ಫುಲ್ ಫೇಲ್ಯೂರ್ ನ ಬಗ್ಗೆ ಚರ್ಚೆಯಾಗುತ್ತಿದೆ.


Find out more: