ಬಾಲಿವುಡ್ ನಲ್ಲಿ ಮಾಸ್ ಲೀಡರ್ ಎಂದೇ ಕರೆಯಲ್ಪಡುವ ಅಜಯ್ ದೇವಗನ್ ಅವರ ಪುತ್ರ ಯುಗ್ ಅವರು ದರ್ಗಾ ಗೆ ಭೇಟಿಕೊಟಿದ್ದರು. ಅಭಿಮಾನಿಗಳೇ ದೇವರು ಎಂದು ಹೇಳುವ ನಟರಿಗೆ, ಇಲ್ಲಿ ನಡೆದಿದ್ದು ತಿಳಿಯಲೇಬೇಕು.ದರ್ಗಾದಲ್ಲಿ ಏನಾಯ್ತು,  ನೀವೆ ಓದಿ. 


ಸೋಮವಾರ ದರ್ಗಾಗೆ ಭೇಟಿ ನೀಡಿದ್ದು ಆ ವೇಳೆ ಅಭಿಮಾನಿಗಳು ವರ್ತಿಸಿದ ರೀತಿಗೆ ಗರಂ ಆಗಿದ್ದಾರೆ. ಬಾಲಿವುಡ್‌ ಮಾಸ್‌ ಮ್ಯಾನ್‌ ಹಾಗೂ ಫ್ಯಾಮಿಲಿ ಮ್ಯಾನ್‌ ಎಂದು ಖ್ಯಾತಿ ಪಡೆದಿರುವ ಅಜಯ್ ದೇವಗನ್‌ ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಾರೆ.

ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ.  ಅಜಯ್ ದೇವಗನ್‌ ಮುದ್ದು ಮಗ ಯುಗ್‌ ಜೊತೆ ಆಜ್ಮೀರ್ ಷರೀಫ್ ದರ್ಗಾಗೆ ಭೇಟಿ ನೀಡಿದ್ದಾರೆ. ಸ್ಟಾರ್ ನಟನನ್ನು ಕಂಡು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಇದರಿಂದ ಯುಗ್ ಗೆ ಸ್ವಲ್ಪ ಕಿರಿಕಿರಿಯಾಗಿದ್ದು ಅಜಯ್ ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಈ ಹಿಂದೆ ಅಜಯ್‌ ಪುತ್ರಿ ಧರಿಸಿದ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲಿ ಟ್ರೋಲ್‌ ಅಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅಜಯ್‌ 'ಟೋಟಲ್‌ ಧಮಾಲ್‌' ಚಿತ್ರ ಪ್ರಚಾರ ದಲ್ಲಿ ಮಾಧ್ಯಮಗಳ ಮುಂದೆ ರಿಯಾಕ್ಟ್‌ ಮಾಡಿದ್ದರು. 'ನನ್ನನ್ನು ನೀವು ಜಡ್ಜ್‌ ಮಾಡ ಬಹುದು ಆದರೆ ನನ್ನ ಮಕ್ಕಳನ್ನಲ್ಲ. ಕಾಜೋಲ್‌ ಹಾಗೂ ನಾನು ಸಿನಿಮಾದವರಾಗಿರುವುದರಿಂದ ನಮ್ಮ ಜೀವನದಲ್ಲಿ ಇದೆಲ್ಲಾ ಮಾಮೂಲಿ. ಅದರೆ ಮಕ್ಕಳ ಉಡುಗೆ ನಡಿಗೆ ಬಗ್ಗೆ ಮಾತನಾಡಿದರೆ ಯಾರಿಗೆ ತಾನೆ ಕೋಪ ಬರುವುದಿಲ್ಲ' ಎಂದು ಗರಂ ಆಗಿ ಉತ್ತರಿಸಿದ್ದರು. 


ಇದೀಗ ದರ್ಗಾ ಭೇಟಿ ವೇಳೆ ಅಭಿಮಾನಿ ಗಳು ಸೆಲ್ಪಿ ಮತ್ತು ಶೇಕ್ ಹ್ಯಾಂಡ್ ಗಾಗಿ ಈ ರೀತಿ ಮಾಡಿರುವುದರಿಂದ ಅಜಯ್ ಅವರು ತಮ್ಮ ಅಭಿಮಾನಿಗಳ ಮೇಲೆಯೇ ಗರಂ ಆಗಿದ್ದಾರೆ. ಅದನ್ನು ಅವರ ಮುಖಭಾವ ಮತ್ತು ಮಾತಿನಿಂದಲೇ ಅಭಿಮಾನಿಗಳು ಅರ್ಥೈಸಿಕೊಂಡಿದ್ದಾರೆ.


Find out more: