ನಮಗೆಲ್ಲಾ ಮೊಬೈಲ್ ಪೋನ್ ಗಳು ಎಷ್ಟು ಇಂಪಾರ್ಟೆಂಟ್ ಅಲ್ವಾ, ಇನ್ನು ಹೇಳಬೇಕೆಂದರೆ ಅದು ನಮ್ಮ ಮೊದಲನೇ ಹೆಂಡತಿಯೂ ಸಹ ಹೌದು. ಆದ್ರೆ 24 ಗಂಟೆ ಮೊಬೈಲ್ ಮಿಸ್ ಆದಾಗ ಏನ್ ಮಾಡೋದು, ಅಲ್ಲಿ ಏನ್ ನಡೆಯುತ್ತೇ ಅನ್ನೋದೆ ಈ ಚಿತ್ರ. ಯಾವುದು ಆ ಚಿತ್ರ ಅಂತ ಯೋಚಿಸುತ್ತಿದ್ದೀರ, ನಾವ್ ಹೇಳ್ತೀವಿ ಕೇಳಿ. ಇನ್ನು ವಿಶೇಷತೆ ಎಂದರೆ ಚಿತ್ರದಲ್ಲಿ ನಟಿಯೇ ಇಲ್ಲವಂತೆ
ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ. ಹೌದು, ಇದೇ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ. ಆ ದೃಶ್ಯ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಕೊಲೆಯೊಂದರ ಸುತ್ತ ನಡೆಯುವ ಕಥೆ ಇದರಲ್ಲಿದೆ. ಶಿವಗಣೇಶ್ ಅವರ ನಿರ್ದೇಶನದ ನಾಲ್ಕನೇ ಚಿತ್ರವಿದು. ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರ ಹೊಂದಿದ ಈ ಚಿತ್ರದ ಮೂಲಕ ಪ್ರೇಕ್ಷಕ ಏನನ್ನು ನಿರೀಕ್ಷಿಸಿ ಬರುತ್ತಾರೋ ಅದೆಲ್ಲ ಸಿಗುತ್ತದೆ ಎನ್ನುವ ನಿರ್ಮಾಪಕ ಕೆ.ಮಂಜು 150 ರಿಂದ 160 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ರವಿಮಾಮನ ಆ ದೃಶ್ಯ ಚಿತ್ರವನ್ನು 300 ಥಿಯೇಟರ್ ಗಳಲ್ಲಿ ಹಾಕುವಂತೆ ಬೇಡಿಕೆ ಬರುತ್ತಿದೆ. ಆದರೆ ಕೆ.ಮಂಜು ಮಾತ್ರ 110 ಸಿಂಗಲ್ ಸ್ಕ್ರೀನ್ ಹಾಗೂ 50 ಮಲ್ಟಿಫ್ಲೆಕ್ಸ್‍ಗಳಲ್ಲಿ ಮಾತ್ರವೇ ರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನನಗೆ ಎರಡು ಗೆಟಪ್ ಇದೆ. ಮೊಬೈಲ್ ಫೋನ್ ಏನೆಲ್ಲ ಘಟನೆ ಗಳಿಗೆ ಕಾರಣಲವಾಗುತ್ತದೆ ಎಂದು ಈ ಚಿತ್ರದಲ್ಲಿ ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆಂದು ರವಿಮಾಮ ತಿಳಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಎರಡೇ ಹಾಡುಗಳಿದ್ದು ಗೌತಮ್ ಶ್ರೀವತ್ಸ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ವಿನೋದ್ ಭಾರತಿ ಅವರ ಛಾಯಾ ಗ್ರಹಣ ಈ ಚಿತ್ರಕ್ಕಿದೆ.ಈ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ನಿರೀಕ್ಷೆಯಂತೆ ಚಿತ್ರ ಬೆಳ್ಳಿ ಪರದೆ ಮೇಲೆ ದೃಶ್ಯಗಳ ಸರಮಾಲೆ ಯನ್ನು ಹರಡಲಿದೆ ಯಂತೆ.