ಬೆಂಗಳೂರು: ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ. ಇದರಲ್ಲಿ ಎರಡು ಮಾತಿಲ್ಲ. ಕಳೆದ ಕೆಲ ತಿಂಗಳುಗಳಿಂದ ಅನುಶ್ರೀಯ ಮದುವೆ ಎಂಬುದು ಗಾಸಿಪ್ ಆದರೂ ಸಹ ಅಲ್ಲೇನೋ ಇತ್ತು ಏನೋ ನಡೆದಿದೆ ಎಂಬುದು ಪ್ರೇಕ್ಷಕರ ಮಾತಾಗಿತ್ತು. ಗಾಸಿಪ್ ಸಿಕ್ಕಾಪಟ್ಟೆ ಹರಿದಾಡಿದ್ದವು. ಇದೀಗ ಇದರ ಬಗ್ಗೆ ಅನುಶ್ರೀ ಮಾತನಾಡಿದ್ದು, ಏನಂದ್ರು ಅಂತ ನೋಡಿ. 


ಇತ್ತೀಚೆಗೆ ಅನುಶ್ರೀ ಪ್ರತಿಕೆಯೊಂದಕ್ಕೆ ಮದುವೆ ಬಗ್ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ಶೀಘ್ರದಲ್ಲೇ ಮದುವೆ ಆಗುತ್ತಿದ್ದಿರಾ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಪ್ರಶ್ನಿಸಿದಾಗ ಅವರು ಈ ವಿಷಯವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಈ ಸುದ್ದಿಯಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅನು, ಈಗಾಗಲೇ ಅನೇಕರು ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಾಕ್ಷಣ ಮದುವೆ ಮಾಡುವ ಕಾತುರ ಈ ಜನಕ್ಕೆ ಏಕೆ ಬರುತ್ತೆ ಎಂದು ನನಗೆ ಗೊತ್ತಿಲ್ಲ. ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನನ್ನ ವಿವಾಹವನ್ನು ಗುಟ್ಟಾಗಿಡುವ ಅವಶ್ಯಕತೆ ಇಲ್ಲ. ನಾನೇದಾರೂ ಮದುವೆಯಾದರೆ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಮದುವೆ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದಿದ್ದಾರೆ. 


ಎಲ್ಲರೂ ಒಂದಲ್ಲಾ ಒಂದು ದಿನ ಮದುವೆಯಾಗಿಯೇ ಆಗುತ್ತಾರೆ. ಆದರೆ ನನ್ನ ಮದುವೆ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಅಲ್ಲದೆ ನನ್ನ ಮನೆಯವರು ಕೂಡ ಮದುವೆಯಾಗು ಎಂದು ಒತ್ತಾಯಿಸುತ್ತಿಲ್ಲ. ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಏಕೆ ಇದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು. ನಾನು ಈಗಲೇ ಮದುವೆಯಾಗುತ್ತಿಲ್ಲ. ನನಗೆ ಇಷ್ಟವಾಗುವ ಹುಡುಗ ಕೂಡ ಸಿಕ್ಕಿಲ್ಲ. ಹುಡುಗನ ಆಯ್ಕೆಯಿಂದ ಮದುವೆತನಕ ಎಲ್ಲಾ ವಿಚಾರವನ್ನು ಬಹಿರಂಗಪಡಿಸುತ್ತೇನೆ. ಯಾವುದನ್ನು ಗುಟ್ಟಾಗಿ ಮಾಡುವುದಿಲ್ಲ. ಹೀಗಾಗಿ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತಮ್ಮ ಮದುವೆ ವಂದತಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಮದುವೆಯಾದಾಗ ನಿಮಗೆ ಫಸ್ಟ್ ತಿಳಿಸುವೆ ಎಂದಿದ್ದಾರೆ.


Find out more: