ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ ಅಜಯ್ ರಾವ್. ಪ್ರೀತಿಯ ಕಹಾನಿ ಚಿತ್ರಗಳನ್ನು ಸಾಲು ಸಾಲಾಗಿ ನೀಡಿದ್ದರು. ಕೃಷ್ಣ ನಾಗಿ ಲೀಲಾಳ ಜೊತೆಗೆ ಮಿಂಚಿದ್ದರು. ತಾಯಿಗೆ ತಕ್ಕ ಮಗನಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಕೆಲಸದ ಆಳಾಗಿದ್ದಾರೆ. ಹೌದು, ಏನಿದು ಸ್ಟೋರಿ ನೀವೆ ನೋಡಿ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.
ಸ್ಯಾಂಡಲ್ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ತಮ್ಮ ಮಗಳು ಬಾಸ್ ಆಗಿ ಆದೇಶ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗೆ ಅಷ್ಟೇ ಇವರು ಆಳಾಗಿ ಮುದ್ದಾಗಿ ಕೆಲಸ ಮಾಡುತ್ತಿದ್ದಾರೆ. ಅಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಗಳು ಬಾಸ್ ಆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗಳು ಚೆರಿಷ್ಮಾ, ಅಜಯ್ ಅವರ ಕಚೇರಿಯಲ್ಲಿ ಬಾಸ್ ಕುರ್ಚಿಯ ಮೇಲೆ ಕುಳಿತು ತಮ್ಮ ತಂದೆಗೆ ಆದೇಶ ನೀಡುವಂತೆ ಪೋಸ್ ನೀಡಿದ್ದಾರೆ.
ಈ ಫೋಟೋಗೆ ಅಜಯ್, “ನನ್ನ ಕಚೇರಿಯಲ್ಲಿ ಬಾಸ್ ನನಗೆ ಕೆಲವು ಗಂಭೀರವಾದ ಸೂಚನೆಗಳನ್ನು ನೀಡುತ್ತಿದ್ದಾರೆ. ನಾನು ಅದಕ್ಕೆ ‘ಸರಿ ಬಾಸ್’ ಎಂದು ಉತ್ತರಿಸಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು, ಪುಟಾಣಿ ಬಾಸ್, ಕ್ಯೂಟ್, ಸೂಪರ್ ಬಾಸ್ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಜಯ್ ತಮ್ಮ ಮಗಳ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಚೆರಿಷ್ಮಾಳಿಗೆ ಕೃಷ್ಣನ ಉಡುಪು ಧರಿಸಿ ಫೋಟೋಶೂಟ್ ಮಾಡಿಸಿದ್ದರು. ನಂತರ ಬಸವಣ್ಣಿ, ಭಾರತಾಂಬೆ ಉಡುಪು ಧರಸಿ ಫೋಟೋ ಕ್ಲಿಕ್ಕಿಸಿದ್ದರು. ಇದೀಗ ಚೆರಿಷ್ಮಾ ತನ್ನ ತಂದೆಗೆ ಬಾಸ್ ಆಗಿದ್ದಾರೆ. ಅಜಯ್ ಅವರು ಡಿ. 2ರಂದು ತಮ್ಮ ಮಗುವಿಗೆ ಚೆರಿಷ್ಮಾ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.