ಥರ್ಡ್ ಕ್ಲಾಸ್. ಹೆಸರು ಕೇಳಿದ ಕೂಡಲೇ ವಾಮಿಟ್ ಹಾರುವ ಹಾಗುಗುತ್ತದೆ ಕೆಲವರಿಗೆ. ಆದರೆ ಪ್ರಸ್ತುತ ಇದೀಗ ಸ್ಯಾಂಡಲ್ ವುಡ್ ನಲ್ಲಿ ಥರ್ಡ್ ಕ್ಲಾಸ್ ಬಂಪರ್ ಹಿಟ್ ಆಗಿದೆ. ಹೆಸಲು  ವಿಚಿತ್ರವಿದ್ದರು ಕಥೆಯಲ್ಲಿನ ಪ್ಲಸ್ ಪಾಯಿಂಟ್ ಇದಕ್ಕೆ ಕಾರಣ. ಹೌದು, ಏನಿದು ಥರ್ಡ್ ಕ್ಲಾಸ್ ನ ಕಥೆ ಅಂತ ಇಲ್ಲಿದೆ ನೋಡಿ ಮಾಹಿತಿ.
 
ಥರ್ಡ್ ಕ್ಲಾಸ್ ಬಗ್ಗೆ ಮಾತನಾಡಿದ ಚಿತ್ರತಂಡ, “ನಮ್ಮ ಸಮಾಜ ಬಡ, ಮಧ್ಯಮ ಮತ್ತು ಶ್ರೀಮಂತ ವರ್ಗವನ್ನು ಹೇಗೆ ನೋಡುತ್ತದೆ. ಈ ಮೂರು ವರ್ಗಗಳ ಸ್ಥಿತಿ-ಗತಿಗಳೇನು, ಎಂಬುದನ್ನು “ಥರ್ಡ್‌ ಕ್ಲಾಸ್‌’ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ’ ಎಂದು ಟೈಟಲ್‌ ಬಗ್ಗೆ ಸಮರ್ಥನೆ ನೀಡುತ್ತದೆ. ಇನ್ನು “ಥರ್ಡ್‌ ಕ್ಲಾಸ್‌’ ಚಿತ್ರಕ್ಕೆ ನವ ನಟ ಜಗದೀಶ್‌ ಕಥೆ ಬರೆದು, ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ.
 
ನಾಯಕಿಯಾಗಿ ರೂಪಿಕಾ ಹೋಂ ಮಿನಿಸ್ಟರ್‌ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎರಡನೇ ನಾಯಕಿಯಾಗಿ ದಿವ್ಯಾರಾವ್‌, ಹೋಂ ಮಿನಿಸ್ಟರ್‌ ಪಾತ್ರದಲ್ಲಿ ಅವಿನಾಶ್‌, ನಾಯಕಿಯ ತಾಯಿಯಾಗಿ ಸಂಗೀತಾ, ಸಂಗೀತ ಶಿಕ್ಷಕನಾಗಿ ರಮೇಶ್‌ ಭಟ್‌, ವಾಹನ ರಿಪೇರಿ ಮಾಡುವ ಮುಸ್ಲಿಂ ಹುಡುಗನಾಗಿ ಪವನ್‌, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ನಟ ನಿಪ್ಪು, ವಿಧಾನ ಪರಿಷತ್‌ ಸದಸ್ಯ ಶರವಣ ಕೂಡ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. 
 
ಪ್ರಸ್ತುತ ಅಶೋಕ್‌ ದೇವ್‌ “ಥರ್ಡ್‌ ಕ್ಲಾಸ್‌’ ಚಿತ್ರವನ್ನು ನಿರ್ದೇಶಿಸಿದ್ದು, ಇತ್ತೀಚೆಗೆ “ಥರ್ಡ್‌ ಕ್ಲಾಸ್‌’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯ ಹಾಡುಗಳಿಗೆ, ಡಾ. ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌, ಚೇತನ್‌ ಸಾಹಿತ್ಯ ರಚಿಸಿದ್ದಾರೆ. ಅನುರಾಧ ಭಟ್‌, ಚಿತ್ರಾ, ಜೆಸ್ಸಿ ಗಿಫ್ಟ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಶ್ಯಾಮ್‌ ರಾಜ್‌ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನ ಕಾರ್ಯವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಡಿಸೆಂಬರ್‌ ವೇಳೆಗೆ “ಥರ್ಡ್‌ ಕ್ಲಾಸ್‌’ ಚಿತ್ರ ತೆರೆಗೆ ಬರಲಿದೆ.

Find out more: