ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಖ್ಯಾತಿಯ ರಾಮಾಚಾರಿ ಯಶ್ ಭಾರೀ ಯಶಸ್ಸು ಪಡೆದಿದ್ದರು. ಇದೀಗ ಇದೇ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ ಈ ನಟ. ಇವರ ಕೈಯಲ್ಲಿದೀಗ ಸಾಲು ಸಾಲು ಚಿತ್ರಗಳಿವೆ. ಹೌದು ಆ ಉದಯೋನ್ಮುಖ ಪ್ರತಿಭೆ ಯಾರು ಅಂತ ಗೊತ್ತಾ! 
 
ಇದೀಗ ಬಾಲಕ ರಾಮಚಾರಿಯಾಗಿ ನಟಿಸಿದ್ದು ಬೆಂಗಳೂರು ಹುಡುಗ ಹೇಮಂತ್ ಶ್ರೀನಿವಾಸ್. ನಟನಾರಂಗಕ್ಕೆ ಅಚಾನಕ್ ಎಂಟ್ರಿಕೊಟ್ಟ ಅವರಿಗೆ ಈಗ ಇದೇ ಕ್ಷೇತ್ರಲ್ಲಿ ಮುಂದುವರೆಯಬೇಕೆಂಬುವುದು ಹೆಬ್ಬಯಕೆ! ಹೇಮಂತ್ ತಂದೆ ಶ್ರೀನಿವಾಸ್ ಎಂ. ಸರಕಾರಿ ನೌಕರ, ಮಗ ನಟನಾಗಿ ಗುರುತಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ಅವರದ್ದೇ. ತಾಯಿ ಮಮತಾರಿಂದಲೂ ಮಗನ ಆಸಕ್ತಿಗಳ ಕಡೆಗೆ ಸಂಪೂರ್ಣ ಪ್ರೋತ್ಸಾಹ. ಆರಂಭದಲ್ಲಿ ಸಿನಿಮಾ ಕುರಿತಾಗ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ, ಇಂದು ಅದದೇ ರಂಗದಲ್ಲಿ ಉತ್ತಮ ನಟನಾಗಿ, ನಿರ್ದೇಶಕನಾಗಿ ಗುರುತಿಕೊಳ್ಳಬೇಕೆಂಬುವುದು ಹೇಮಂತ್ ಕನಸು. ಕನಸನ್ನು ನನಸು ಮಾಡಿಕೊಳ್ಳಬೇಕೆಂಬುದೇ ಇವರ ಮಹದಾಸೆಯೂ ಹೌದು. 
 
ಕನ್ನಡದಲ್ಲಿ ಮೂಡಿ ಬರುತ್ತಿದ್ದ ಮಹಾಭಾರತ ಧಾರವಾಹಿಯ ಅರ್ಜುನನ ಮಗನಾಗಿ ಮೊದಲ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಾಗ ಹೇಮಂತ್ ಇನ್ನೂ ಹೈಸ್ಕೂಲ್ ವಿದ್ಯಾರ್ಥಿ. ಆ ನಂತರದಲ್ಲಿ ತಮಿಳು ಭಾಷೆಯಲ್ಲಿ ಪ್ರಸಾರವಾದ ಮಹಾಭಾರತ ಧಾರವಾಹಿಯಲ್ಲಿ ಹುಡುಗ ಭೀಮನಾಗಿ ಅಭಿನುಸಿದ್ದರು. ರವಿಗರಣಿ ಅವರ ಪ್ರಿಯದರ್ಶಿನಿಯಲ್ಲಿ ನಾಯಕಿಯ ತಮ್ಮನ ಪಾತ್ರ ಮಾಡಿದ್ದರು. 'ಪ್ರೀತಿ ಗೀತಿ ಇತ್ಯಾದಿ', 'ಮಿಸ್ಟರ್ ಆ್ಯಂಡ್  ಮಿಸೆಸ್ ರಾಮಾಚಾರಿ', 'ಗೋಲಿ ಸೋಡ' ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೀತಂ ಗುಬ್ಬಿ ಅವರ ನಿರ್ದೇಶನದ '99' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರ್ವಹಿಸಿದ 'ರಾಮಚಂದ್ರ' ಪಾತ್ರದ ಆರಂಭ ಭಾಗವನ್ನು ಹೇಮಂತ್ ಅಭಿನಯಿಸಿದ್ದಾರೆ. ಇದು ಆಗಲೇ ಭಾರೀ ಖ್ಯಾತಿ ಪಡೆದಿತ್ತು. 
 
ಕ್ರಿಯಾತ್ಮಕ ನಿರ್ದೇಶಕನಾಗುವ ಕನಸು ಹೊತ್ತ ಹೇಮಂತ್‌ಗೆ ಈ ವಿಚಾರದಲ್ಲಿ ಬನ್ಸಾಲಿ, ರಾಜಮೌಳಿ ಹಾಗೂ ಸಂತೋಷ್ ಆನಂದರಾಮ್ ಮಾದರಿಯಂತೆ. ಚಿತ್ರ 'ನವೋದಯ ಡೇಸ್'ನಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಕೊಂಡಿರುವ ಹೇಮಂತ್ ಈ ವರ್ಷ ಬಿ. ಕಾಂ ಪದವಿಮುಗಿಸಿದ್ದಾರೆ. ಪ್ರಸ್ತುತ ಚಿರಂಜೀವಿ ಸರ್ಜಾ ಅಭಿನಯದ 'ಕ್ಷತ್ರಿಯ' ಚಿತ್ರದಲ್ಲಿ ಅಭಿನುಸುತ್ತಿದ್ದಾರೆ. ಮಿಂಚುತ್ತಿರುವ ಹೇಮಂತ್ ದೊಡ್ಡಮಟ್ಟಕ್ಕೆ ಬೆಳೆಯಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.

Find out more: