ಸದಾ ಕಾಲ ಡಿಫರೆಂಟ್ ಆಗಿಯೇ ಸುದ್ದಿಯಾಗುವ ದಿ ಬೆಸ್ಟ್ ಡೈರೆಕ್ಟರ್ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಒಂದೇ ಒಂದು ಟ್ವೀಟ್ ಮೂಲಕ ಭಾರೀ ಸದ್ದು ಮಾಡಿದ್ದಾರೆ. ಅದು ಹೈದರಾಬಾದ್ ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಎನ್ ಕೌಂಟರ್ ಕೇಸು. 
 
ಹೈದರಾಬಾದ್‌ನ ಪಶುವೈದ್ಯೆಯೊಬ್ಬರನ್ನು ಆತ್ಯಾಚಾರ ಮಾಡಿ, ಸುಟ್ಟುಹಾಕಿ 10 ದಿನ ಕಳೆಯುವುದರೊಷ್ಟಿಗೆ, ಆ ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿ ಸುಟ್ಟು ಹಾಕಿದ್ದರು. ರಾಷ್ಟ್ರಾದ್ಯಂತ ಭಾರೀ ವೈರಲ್ ಆಗಿದ್ದ ವಿಚಾರವಿದು.  ಟಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವುಡ್‌ ಸೆಲೆಬ್ರಿಟಿಗಳು ಈ ವಿಚಾರವಾಗಿ ತಮ್ಮ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಉಪೇಂದ್ರ ಅವರು ಮಾಡಿದ್ದ ಟ್ವೀಟ್ ಮಾತ್ರ ಸಾಕಷ್ಟು ವೈರಲ್ ಆಗಿದ್ದು, ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 
 
ಉಪೇಂದ್ರ ಅವರು ಈ ಪೋಸ್ಟ್‌ಗೆ ಫೇಸ್‌ಬುಕ್‌ವೊಂದರಲ್ಲಿಯೇ 2400 ಕಾಮೆಂಟ್ ಬಂದಿವೆ, 252 ಶೇರ್ ಆಗಿವೆ, ಅಷ್ಟೇ ಅಲ್ಲದೆ ಇದನ್ನು 3000 ಜನರು ಲೈಕ್ ಮಾಡಿದ್ದಾರೆ. ಬಹಳಷ್ಟು ಜನರು ಈ ಪೋಸ್ಟ್‌ನಿಂದ ಗರಂ ಆಗಿದ್ದಾರೆ. ಇಷ್ಟು ದಿನ ಉಪೇಂದ್ರ ಅವರು ರೋಲ್ ಮಾಡೆಲ್ ಆಗಿದ್ದರು, ಆದರೆ ಅವರ ಈ ಯೋಚನೆ ನೋಡಿದ್ಮೇಲೆ ಬೇಸರ ಆಗುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಿದೆ, ಅದಕ್ಕೆ ಖುಷಿಪಡೋದನ್ನುಬಿಟ್ಟು ಅದರಲ್ಲಿ ತಪ್ಪು ಹುಡುಕುತ್ತಿದ್ದಾರೆ ಎಂದು ಇನ್ನೂ ಕೆಲವರು ಗರಂ ಆಗಿದ್ದಾರೆ.
 
"ಕೆಲ ಜನ ಗಳಿಗೆ ಅರ್ಥ ಆಗದೆ ನೂರೊಂದು ಕೆಟ್ಟ ಆಲೋಚನೆಗಳನ್ನು ಹೊಂದಿರುತ್ತಾರೆ.! ಅವರ ಮನಸ್ಥಿತಿಯು ಕೂಡ ಕೆಟ್ಟದನ್ನ ಯೋಚನೆ ಮಾಡುತ್ತಿರುತ್ತದೆ. ಒಂದು ಸಲ ಪ್ರಾಮಾಣಿಕವಾಗಿ ತಾಳ್ಮೆಯಿಂದ ಆಲೋಚನೆ ಮಾಡಿ, ಉಪೇಂದ್ರ ಅವರು ಕೇಳಿರುವ ಪ್ರಶ್ನೆ ಏನು ಅಂತ ಅರ್ಥ ಆಗುತ್ತದೆ. ಎನ್‌ಕೌಂಟರ್ ಕೇವಲ 4 ಜನರಿಗೆ ಸೀಮಿತವಾಗದೆ ಕೃತ್ಯ ಎಸಗುವ ಪ್ರತಿಯೊಬ್ಬರಗೂ ಇದೇ ಶಿಕ್ಷೆ ಕೊಡಲಿ ಎನ್ನುವುದು ಉಪೇಂದ್ರ ಅವರ ಅಭಿಪ್ರಾಯ. ಅವರ ಆಲೋಚನೆಯನ್ನ ಅರ್ಥ ಮಾಡಿಕೊಳ್ಳಿ" ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಉಪೇಂದ್ರ ಟ್ವೀಟ್ ಚಿಂತನೆಗೆ ದಾರಿ ಮಾಡಿರುವುದು ನಿಜ.

Find out more: