ಸ್ಯಾಂಡಲ್ ವುಡ್ ನ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರು ಸುಖವಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಅನ್ನ ಎಂದು ಇಲ್ಲದಿದ್ದರೆ ನಾವ್ಯಾರು ಇಲ್ಲ ಎಂದು ಮಾತನಾಡಿದ್ದಾರೆ. ಹೌದು, ಡಿಸೆಂಬರ್ 23 ರೈತರ ದಿನಾಚರಣೆ, ಆದ್ದರಿಂದ ದರ್ಶನ್ ರೈತರ ಬಗ್ಗೆ ಮಾತನಾಡಿದ್ದಾರೆ. 
 
ಡಿಸೆಂಬರ್ 23 ರೈತರ ದಿನ. ದೇಶಕ್ಕೆ ಅನ್ನ ನೀಡುವ ಇವರನ್ನು ಗೌರವಿಸುವ ದಿನ. ಭಾರತದ ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರ ಜನ್ಮ ದಿನವನ್ನು ರಾಷ್ಟ್ರ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅತಿವೃಷ್ಟಿ-ಅನಾವೃಷ್ಟಿ, ಬೆಳೆಗಳ ಬೆಲೆ ಏರಿಕೆ-ಇಳಿಕೆ, ನೈಸರ್ಗಿಕ ವಿಕೋಪ, ದಲ್ಲಾಳಿಗಳ ವಂಚನೆ, ಮೋಸದ ಮಧ್ಯೆಯೂ ತಾನು ಕಷ್ಟಪಟ್ಟು, ಎಲ್ಲರಿಗೂ ಅನ್ನ ನೀಡುತ್ತಿರುವ ರೈತರನ್ನು ಗುರುತಿಸುವುದು ನಮ್ಮೆಲ್ಲರ ಜವಾಬ್ದಾರಿ ಕೂಡ. ಇದರ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ರೈತರ ಮನ ಗೆದ್ದಿದ್ದಾರೆ. 
 
ದರ್ಶನ್ ಕೂಡ ಓರ್ವ ರೈತದರ್ಶನ್ ಸ್ವತಃ ರೈತ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಅವರು ಹಸು ಹಾಲು ಕರೆಯುವುದು ಎಲ್ಲರಿಗೂ ಗೊತ್ತಿದೆ, ಜೊತೆಗೆ ಪ್ರಾಣಿ ಪ್ರಿಯ. ಹಲವಾರು ಜಾತಿಯ ಕುದುರೆ, ಹಸು, ಎಮ್ಮೆ ಮುಂತಾದ ಪ್ರಾಣಿಗಳನ್ನು ಅವರು ಸಾಕುತ್ತಿದ್ದಾರೆ. ರೈತರಿಗೆ ಸಂಬಂಧಪಟ್ಟ ಕುರಿತಂತೆ ಅವರ ಸಿನಿಮಾದಲ್ಲಿ ಹಲವು ಡೈಲಾಗ್‌ಗಳು ಇವೆ. ಈ ಹಿಂದೆ ತೆರೆಕಂಡ 'ಯಜಮಾನ' ಸಿನಿಮಾದಲ್ಲಿ ಮಧ್ಯವರ್ತಿಗಳನ್ನು ದೂರವಿಟ್ಟು, ರೈತರು ಬೆಳೆದ ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು ಎಂಬ ಸಂದೇಶವಿದ್ದು, ಆ ಸಿನಿಮಾ ಭಾರೀ ಹಿಟ್ ಆಗಿತ್ತು. 
 
ಸ್ವಪರಿಶ್ರಮದಲ್ಲಿ ಬಂಗಾರದ ಬೆಳೆ ಬೆಳೆಯುವ ರೈತರು
ಬಡತನದ ಬೇಗೆಯಲ್ಲಿ ಬೇಯುತ್ತ, ಸದಾ ಆತ್ಮಹತ್ಯೆಗೆ ಸಿದ್ಧನಾಗಿರುವ, ಯಾವಾಗಲೂ ಪ್ರತಿಭಟನೆಗೆ ಮುಂದಾಗುವ ಅಶಾಂತ ವ್ಯಕ್ತಿಯ ಕಲ್ಪನೆ ಕೆಲವರಿಗೆ ಮೂಡಬಹುದು. ಆದರೆ, ಎಲ್ಲ ಅನಾನುಕೂಲಗಳು, ನಾನಾ ಸಮಸ್ಯೆಗಳು, ನಿಸರ್ಗದ ಅಸಹಕಾರದ ನಡುವೆಯೂ ಒಂದಿಷ್ಟು ರೈತರು ಸ್ಫೂರ್ತಿದಾಯಕ ಬದುಕನ್ನು ಸಾಗಿಸುತ್ತಿದ್ದಾರೆ. ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಹೊಸ ಆವಿಷ್ಕಾರ, ಹೊಸ ಪದ್ಧತಿಗಳು, ಹೊಸ ತಂತ್ರಗಳಿಗೆ, ಹೊಸ ಜ್ಞಾನಕ್ಕೆ ತಮ್ಮನ್ನು ತಾವು ತೆರೆದುಕೊಂಡು ಸ್ವಪರಿಶ್ರಮದಲ್ಲಿ ಬಂಗಾರದ ಬೆಳೆ ಬೆಳೆದವರಿದ್ದಾರೆ. ಅಂತಹ ರೈತರಿಗೆ ನಮ್ಮದೊಂದು ಸಲಾಮ್.

Find out more: