ಸ್ಯಾಂಡಲ್ ವುಡ್ ನಲ್ಲಿ ಇಷ್ಟು ದಿನ ಕಿಸ್ ಕೊಡುತ್ತಾ ಭಾರೀ ಸದ್ದು ಮಾಡಿದ್ದ ನಟಿ ಶ್ರೀಲಿಲಾ  ಇದೀಗ ಇದ್ದಕ್ಕಿದ್ದಂತೆ ಲೆಟ್ಸ್ ಬ್ರೇಕ್ ಅಪ್ ಎನ್ನುತ್ತಿದ್ದಾರೆ. ಹೌದು, ಆಸ್ಚರ್ಯವಾದರೂ ನಂಬಲೇಬೇಕಾದ ವಿಷಯವಿದು. ಲೆಟ್ಸ್ ಬ್ರೇಕ್ ಅಪ್ ಇದೀಗ ಕನ್ಫರ್ಮ್ ಆಗಿದೆ. ಹಾಗಿದ್ರೆ ಯಾರದು, ಏನಿದು ಸ್ಟೋರಿ ಎನ್ನುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. 
 
ನಟಿ ಶ್ರೀಲಿಲಾ ಇಷ್ಟು ದಿನ ಸ್ಯಾಂಡಲ್ ವುಡ್ ನಲ್ಲಿ ಕಿಸ್ ಚಿತ್ರದ ನಟಿ ಯಾಗಿ ಸುದ್ದಿಯಾಗಿದ್ದರು. ಇದೀಗ ಲೆಟ್ಸ್ ಬ್ರೇಕಪ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು. ಪ್ರಸ್ತುತ ಸಿನಿಮಾದ ಬಗ್ಗೆ ಭರಾಟೆ ಬೆಡಗಿ ಶ್ರೀಲೀಲಾ ಸ್ಪಷ್ಟೀಕರಣ ನೀಡಿದ್ದಾರೆ. ಈ ಸಿನಿಮಾದಲ್ಲಿ ತಾನು ಅಭಿನಯಿಸುತ್ತಿಲ್ಲ, ಆದರೂ ಸುದ್ದಿ ಹೇಗೆ ಹಬ್ಬಿತೋ ಏನೋ ಗೊತ್ತಾಗಿಲ್ಲ ಎಂದಿದ್ದಾರೆ. 
 
ನಿರ್ದೇಶಕ ಸ್ವರೂಪ್‌ ಅವರ ಹೊಸ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂದು ಚಿತ್ರನಟಿ ಶ್ರೀಲೀಲಾ ತಿಳಿಸಿದ್ದಾರೆ. 'ಸ್ವರೂಪ್‌ ಅವರ 'ಲೆಟ್ಸ್‌ ಬ್ರೇಕಪ್‌' ಚಿತ್ರದಲ್ಲಿ ನಾನು ನಟಿಸಲಿದ್ದೇನೆ ಎಂಬ ಸುದ್ದಿ ಎಲ್ಲೆಡೆ ಕೇಳಿಬಂದಿದೆ. ಆದರೆ ನಾನು ಇದುವರೆಗೆ ಯಾವ ಚಿತ್ರಕ್ಕೂ ಸಹಿ ಮಾಡಿಲ್ಲ. ನಾನು ಕಥೆಯನ್ನು ಕೇಳಿದ್ದೇನೆ ನಿಜ. ಆದರೆ, ಇನ್ನೂ ಆ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಅದು ಹೇಗೆ ಈ ಸುದ್ದಿ ಹರಡಿತೋ ಗೊತ್ತಿಲ್ಲ ಎಂದಿದ್ದಾರೆ ಅವರು. 'ಕಿಸ್‌ ಮತ್ತು ಭರಾಟೆ ಚಿತ್ರಗಳಲ್ಲಿ ನಾನು ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದೆ.
 
ಈಗ ಮತ್ತೆ ಅದೇ ರೀತಿಯ ಪಾತ್ರಗಳಿಗೆ ಆಫರ್‌ ಹೆಚ್ಚಾಗಿ ಬರುತ್ತಿವೆ. 20ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ಹಾಗಾಗಿ ಸ್ವಲ್ಪ ನಿಧಾನವಾಗಿ ಯೋಚಿಸಿ ಮುಂದಿನ ಚಿತ್ರವನ್ನು ಆಯ್ಕೆ ಮಾಡಬೇಕೆಂದಿದ್ದೇನೆ' ಎಂದಿದ್ದಾರೆ.
 
ಇನ್ನೊಂದು ತಿಂಗಳಲ್ಲಿ ಹೊಸ ಚಿತ್ರದ ಬಗ್ಗೆ ಹೇಳಲಿದ್ದಾರಂತೆ ಶ್ರೀಲೀಲಾ. 'ನನ್ನ ಎರಡೂ ಸಿನಿಮಾ ಬ್ಯಾಕ್‌ ಟು ಬ್ಯಾಕ್‌ ಒಂದೇ ವರ್ಷದಲ್ಲಿ ರಿಲೀಸ್‌ ಆಗಿದೆ. ಹಾಗಾಗಿ ಆತುರಪಡುತ್ತಿಲ್ಲ. ಮುಂದಿನ ವರ್ಷ ನನ್ನ ಪರೀಕ್ಷೆ ಮುಗಿಸಿಕೊಂಡು ಸ್ವಲ್ಪ ಬ್ರೇಕ್‌ ತಗೋಬೇಕು ಅಂತಿದ್ದೇನೆ. ನಂತರ ಸಿನಿಮಾದಲ್ಲಿ ನಟಿಸುವೆ. ಇನ್ನೊಂದು ತಿಂಗಳಲ್ಲಿ ನನ್ನ ಹೊಸ ಚಿತ್ರ ಯಾವುದು ಅಂತ ಗೊತ್ತಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.
 
 

Find out more: