ಬೆಂಗಳೂರು: ಸೆನ್ಸೇಷನ್ ಹೈಪ್ ಕ್ರಿಯೇಟ್ ಮಾಡಿದ್ದ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ನಟನೆಯ ದಬಾಂಗ್ 3 ಬಿಡುಗಡೆಯಾಗಿ ಕೋಟಿ ಕೋಟಿ ರೂಪಾಯಿಗಳು ಬಾಚಿಕೊಂಡುದೆ. ಹೌದು, ಆದರೆ ಸಲ್ಮಾನ್ ಖಾನ್ ನಿಂದ ಇದೀಗ ಕಿಚ್ಚ ಸುದೀಪ್ ಕಣ್ಣೀರಿಟ್ಟಿದ್ದಾರೆ. ಹೌದು, ಯಾಕೆ? ಎಂಬ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
 
ಸಲ್ಮಾನ್‌ ಖಾನ್‌-'ಕಿಚ್ಚ' ಸುದೀಪ್ ಒಟ್ಟಿಗೆ ನಟಿಸಿರುವ 'ದಬಾಂಗ್ 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಾಸು ಮಾಡುತ್ತಿದೆ. ಬಿಡುಗಡೆಯಾದ ನಾಲ್ಕೇ ದಿನಕ್ಕೆ 90 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಈ ಸಿನಿಮಾ ಬಾಚಿಕೊಂಡಿದೆ. ಈ ವೇಳೆ ಸಲ್ಮಾನ್‌ ಖಾನ್‌ ಸುದೀಪ್‌ಗೆ ನೀಡಿರುವ ಗಿಫ್ಟ್‌ವೊಂದು ಭಾರೀ ಸದ್ದು ಮಾಡಿದೆ! ಹೌದು, ಸಲ್ಮಾನ್‌ ತಮ್ಮ ಬಳಿಯಿದ್ದ ನೆಚ್ಚಿನ ಜಾಕೆಟ್‌ವೊಂದನ್ನು ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಸಾಮಾನ್ಯವಾದ ಜಾಕೆಟ್‌ ಅಲ್ಲವೇ ಅಲ್ಲ!
 
ಯಾಕೆಂದರೆ, ಈ ಜಾಕೆಟ್‌ ಮೇಲೆ ತಮ್ಮ ನೆಚ್ಚಿನ ನಾಯಿ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ ಸಲ್ಮಾನ್‌. ಹೀಗೆ ಎಮೋಷನಲ್ ಆಗಿ ಕನೆಕ್ಟ್ ಆಗಿರುವ ಜಾಕೆಟ್ ಅನ್ನು ಸುದೀಪ್‌ಗೆ ನೀಡಿದ್ದಾರೆ. ಹೌದು ಇದಕ್ಕಾಗಿಯೇ ಸುದೀಪ್ ಭಾವುಕರಾಗಿದ್ದಾರೆ. ಈ ಜಾಕೆಟ್ ನೀಡುವಾಗ ಸುದೀಪ್‌ಗೆ ಒಂದು ಮಾತು ಹೇಳಿದ್ದಾರಂತೆ ಸಲ್ಮಾನ್‌ ಖಾನ್. 'ನಾನೆಂದಿಗೂ ಈ ಜಾಕೆಟ್‌ ಅನ್ನು ಬೇರೆಯಾರಿಗೂ ಬಿಟ್ಟುಕೊಡುವುದಿಲ್ಲ ಎಂದುಕೊಂಡಿದ್ದೆ' ಎಂದು ಸಲ್ಲು ಹೇಳಿದ್ಧಾರಂತೆ. ಆ ಜಾಕೆಟ್‌ ನೋಡಿದಾಗ ಅವರಿಗೂ ಸಹ ಹಾಗೇ ಅನಿಸಿದೆ. ಪ್ರೀತಿಯ ನಾಯಿ ಚಿತ್ರವಿರುವ ಈ ಜಾಕೆಟ್‌ನೊಂದಿಗೆ ಎಷ್ಟೊಂದು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು ಎಂಬುದನ್ನು ಸುದೀಪ್‌ ತಿಳಿದುಕೊಂಡರಂತೆ.
 
ದಬಾಂಗ್ 3 ಚಿತ್ರದಲ್ಲಿ ಬಾಲಿ ಸಿಂಗ್ ಎಂಬ ಖಡಕ್ ವಿಲನ್ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದು, ಬಹಳ ದಿನಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಹಿಂದಿಗೆ ಮರಳಿದ್ದಾರೆ. 'ದಬಾಂಗ್ 3' ಚಿತ್ರದಲ್ಲಿ ಚುಲ್‌ ಬುಲ್‌ ಪಾಂಡೆ ಪಾತ್ರದ ಪ್ರಿಕ್ವೆಲ್ ಆಗಿ ಈ ಸಿನಿಮಾ ಮಾಡಲಾಗಿದೆ. ಸೋನಾಕ್ಷಿ ಸಿನ್ಹಾ ಮತ್ತು ಸಾಯಿ ಮಂಜ್ರೇಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ 

Find out more: