ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ಜನವರಿ 5 ಭಾನುವಾರದಂದು ತನ್ನ ಹುಟ್ಟು ಹಬ್ಬವನ್ನು ಆ್ಯಸಿಡ್ ಸಂತ್ರಸ್ತರ ಜೊತೆ ಆಚರಿಸಲು ನಿರ್ಧರಿಸಿದ್ದಾರೆ. ಹೌದು, ಅರೇ ಖ್ಯಾತ ಬಾಲಿವುಡ್ ನಟ ನಟಿಯರು ಪಬ್ ಗಳಲ್ಲಿ ಪಾರ್ಟಿ ಮಾಡುತ್ತಾ ಬರ್ತಡೇ ಗಳನ್ನು ಸೆಲಬರೇಟ್ ಮಾಡೋದು ನೋಡಿದ್ದೇವೆ. ಆದರೆ ಇಷ್ಟರ ಮಟ್ಟಿಗೆ ಆಸಿಡ್ ಸಂತ್ರಸ್ತರ ಜೊತೆ ಸೆಲಬರೇಟ್ ಮಾಡ್ತೀರಾ ಎಂದು ಆಶ್ಚರ್ಯ ವಾದರೂ ಸಹ ನಂಬಲೇಬೇಕಾದ ವಿಷಯವಿದು.
ಹೌದು, ದೀಪಿಕಾ ಪಡುಕೋಣೆ ತಮ್ಮ ಹುಟ್ಟು ಹಬ್ಬದಂದು ಲಕ್ನೋನ ಶಿರೋಜ್ ಕೆಫೆಯಲ್ಲಿ ಕಾಲ ಕಳೆಯಲಿದ್ದಾರೆ. ಶಿರೋಜ್ ಕೆಫೆಯನ್ನು ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ನಡೆಸುತ್ತಿದ್ದಾರೆ. ಕೆಫೆಯಲ್ಲಿ ಸಮಯ ಕಳೆದ ಬಳಿಕ ದೀಪಿಕಾ ಇನ್ನು ಕೆಲವು ಮಂದಿಯನ್ನು ಭೇಟಿ ಆಗಲಿದ್ದಾರೆ. ಭೇಟಿಯಾಗಿ ಅಲ್ಲಿಯ ಅವರ ಕುಶಲೋಪರಿ ವಿಚಾರಿಸಿಕೊಂಡು ಬರ್ತಡೇ ಯನ್ನು ಸೆಲಬರೇಟ್ ಮಾಡಲಿದ್ದಾರೆ. ತಮ್ಮ ಮುಂಬರುವ ‘ಚಾಪಕ್’ ಚಿತ್ರದಲ್ಲಿ ದೀಪಿಕಾ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ನೈಜ ಕತೆಯಾಗಿದ್ದು, ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್‌ವಾಲ್ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಲಕ್ಷ್ಮಿ ಅಗರ್‌ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ. ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿ ನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ.
ದೀಪಿಕಾ ಮುಖ್ಯ ಭೂಮಿಕೆಯ ಚಾಲಕ ಚಿತ್ರವನ್ನು ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದು, ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಿಸಿದೆ. ಈ ಚಿತ್ರ ಜನವರಿ 10ರಂದು ಬಿಡುಗಡೆ ಆಗುತ್ತಿದ್ದು, ಸದ್ಯ ದೀಪಿಕಾ ಚಿತ್ರದ ಪ್ರಮೋಶನ್‍ನಲ್ಲಿ
ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಭಾರೀ ಹಿಟ್ ಆಗಿ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.