ಬೆಂಗಳೂರು: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದರ್ಬಾರ್’ ಇಂದಿನಿಂದ ತೆರೆಕಾಣಲು ಸಿದ್ಧವಾಗಿದೆ. ಹೌದು, ತಮಿಳು ಹಿಂದಿಯಲ್ಲಿ ಚಿತ್ರ ತೆರೆ ಕಾಣುತ್ತಿದೆ. ಅಭಿಮಾನಿಗಳ ಬಹು ನಿರೀಕ್ಷಿತ ಚಿತ್ರ ದರ್ಬಾರ್ ಆಗಿದ್ದು ರಾಷ್ಟ್ರಾದ್ಯಂತ ದರ್ಬಾರ್ ಪ್ರಾರಂಭಿಸುವ ತವಕದಲ್ಲಿದೆ. ಆದರೆ ಈ ಸಿನಿಮಾ ಕನ್ನಡದಲ್ಲೇ ರಿಲೀಸ್ ಆಗಬೇಕು, ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.
 
ರಜಿನಿಕಾಂತ್ ಅವರ ದರ್ಬಾರ್ ಚಿತ್ರದ ಟೀಸರ್ ಪೋಸ್ಟರ್ ಹಾಡುಗಳೇ ಈಗಾಗಲೇ ಭಾರೀ ಹಿಟ್ ಆಗಿದ್ದು, ಚಿತ್ರದ ಕಥೆಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ದರ್ಬಾರ್ ಸಿನಿಮಾ ಗುರವಾರ ದೇಶ ವಿದೇಶಗಳಲ್ಲಿ ಬೆಳ್ಳಿ ತೆರೆಯ ಮೇಲೆ ರಾರಾಜೀಸಲಿದೆ. ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷಿ ಸಿನಿಮಾ ‘ದರ್ಬಾರ್’ ನಲ್ಲಿ ಸೂಪರ್ ಸ್ಟಾರ್ ಗೆ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಗುರುವಾರ ನರ್ತಕಿ ಚಿತ್ರಮಂದಿರದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ದರ್ಬಾರ್ ಸಿನಿಮಾವನ್ನ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಅದು ಪ್ರತಿಭಟನೆಯ ಬಿಸಿ ಕಾವು ಹೆಚ್ಚಿದ್ದು, ಚಿತ್ರ ಬಿಡುಗಡೆಯಾಗುತ್ತಾ ಇಲ್ಲವಾ ಎನ್ನುವ ಅನುಮಾನಗಳನ್ನು ಹುಟ್ಟಿಸಿದೆ. ಈ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದು, ಕನ್ನಡ ಭಾಷೆಯಲ್ಲೇ ಸಿನಿಮಾ ರೀಲಿಸ್ ಮಾಡಿ ಅದನ್ನ ಬಿಟ್ಟು ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧರಾದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. 
 
ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿರುವುದರಿಂದ ಕನ್ನಡದಲ್ಲೇ ರಿಲೀಸ್ ಮಾಡಿ, ತೆಲುಗಿನಲ್ಲಿ ಸಿನಿಮಾವನ್ನ ಬಿಡುಗಡೆ ಮಾಡೊದಕ್ಕೆ ಬಿಡೋದಿಲ್ಲ ಎಂದು ಕರುನಾಡ ಸಂಘಟನೆಗಳ ಒಕ್ಕೂಟ ಎಚ್ಚರಿಕೆಯನ್ನ ನೀಡಿದೆ. ಜೊತೆಗೆ ಬೇರೆ ಭಾಷೆಯಲ್ಲಿ ಚಿತ್ರ ಪ್ರದರ್ಶನ ಮಾಡಿದರೆ ಗುರುವಾರ ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡೋದಾಗಿ ಹೇಳಿದೆ. ಆದರೆ ಚಿತ್ರ ಬಿಡುಗಡೆ ಆಗುತ್ತದೆ ಎಂಬುದು ಚಿತ್ರಮಂದಿರದ್ದಾದರೆ,  ಇನ್ನು ಚಿತ್ರ ಕನ್ನಡದಲ್ಲೇ ಬರಲಿ ಇಲ್ಲವೇ ಬೇಡ ಎಂಬುದು ಕನ್ನಡ ಸಂಘಟನೆಗಳ ಮಾತಾಗಿದ್ದು ಏನಾಗುತ್ತದೆ ಎಂಬುದು ಕಾದುನೋಡಬೇಕಾಗಿದೆ.

Find out more: