ಬೆಂಗಳೂರು: ರಾಜ್ಯಾದ್ಯಂತ ಜನವರಿ 31ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ ಜಂಟಲ್ ಮ್ಯಾನ್ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾಗೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಿಂದ ರಿಮೇಕ್ ಆಫರ್ ಗಳು ಬರುವುದಕ್ಕೆ ಶುರು ಮಾಡಿವೆ. ರಿಲೀಸ್ ಗೂ ಮುನ್ನವೇ ‘ಜಂಟಲ್ ಮ್ಯಾನ್’ ಕ್ರಿಯೇಟ್ ಮಾಡಿಕೊಂಡಿರುವ ಡಿಮ್ಯಾಂಡ್ ನಿಂದ ಚಿತ್ರತಂಡ ಸಖತ್ ಖುಷಿಯಲ್ಲಿದೆ. ಅದಕ್ಕೆ ಇನ್ನು ಹಲವಾರು ಕಾರಣ ಗಳಿದ್ದು, ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಸ್ಟೋರಿ. 
 
ಈಗಾಗಲೇ ಜೆಂಟಲ್ ಮ್ಯಾನ್ ಟೀಸರ್ ಕಳೆದ ವಾರ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಸಿನಿಮಾದ ವಿಶಿಷ್ಟ ಕಥಾಹಂದರವನ್ನು ಗಮನಿಸಿದ ಬೇರೆ ಭಾಷೆಯವರು ‘ಜಂಟಲ್ ಮ್ಯಾನ್’ ಸಿನಿಮಾ ನಿರ್ಮಾಪಕ ಗುರುದೇಶ ಪಾಂಡೆ ಅವರನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ‘ಜಂಟಲ್ ಮ್ಯಾನ್’ ಬೇರೆ ಭಾಷೆಗಳಲ್ಲೂ ಬರುವ ನಿರೀಕ್ಷೆ ಇದೆ. ತೆಲುಗಿನ ಸಾಯ್ ಕುಮಾರ್ ಅವರು ಗುರುದೇಶ ಪಾಂಡೆ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದು, ತೆಲುಗಿನಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ. ಇನ್ನು ತಮಿಳು ನಟ ಸಿಂಬು ಅವರ ಮ್ಯಾನೇಜರ್ ಕೂಡ ರಿಮೇಕ್ ಹಕ್ಕು ಬಗ್ಗೆ ವಿಚಾರಿಸಿದ್ದಾರೆ. ಮಲಯಾಳಂನ ತಿರಸೂರು ಸುನೀಲ್ ಅವರು ಕೂಡ ಚಿತ್ರದ ಬಗ್ಗೆ ವಿಚಾರಿಸಿದ್ದಾರೆ. ಟ್ರೈಲರ್ ಔಟ್ ಆದ ಮೂರೇ ದಿನದಲ್ಲಿ ಈ ಬೆಳವಣಿಗೆ ನಡೆದಿದೆ. ಹೌದು, ಇದರಿಂದಲೇ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. 
 
ಚಿತ್ರದ ಕಥೆ ಎಲ್ಲರಿಗೂ ಇಷ್ಟವಾಗಿದ್ದು, ಹಕ್ಕುಗಳ ಬಗ್ಗೆ ಮಾತುಕಥೆ ನಡೆಸಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಕೂತು ಮಾತನಾಡಿ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಚಿತ್ರ ನಿರ್ಮಾಪಕ ಗುರುದೇಶಪಾಂಡೆ ಹೇಳಿದ್ದಾರೆ. ರಿಲೀಸ್ ಗೆ ರೆಡಿಯಾಗಿರುವ ‘ಜಂಟಲ್ ಮ್ಯಾನ್’ ಚಿತ್ರವನ್ನು ಜಿ. ಸಿನಿಮಾಸ್ ಬ್ಯಾನರ್ ನಲ್ಲಿ ಗುರುದೇಶ ಪಾಂಡೆ ನಿರ್ಮಾಣ ಮಾಡಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ತಬಲ ನಾಣಿ, ಅರುಣಾ ಬಾಲರಾಜ್, ಸಾಧು ಕೋಕಿಲಾ ಸೇರಿದಂತೆ ಬಹುತೇಕರು ನಟಿಸಿದ್ದಾರೆ.

Find out more: