ಕೊಡಗು: ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ಮಾಡಿ, ಶಾಕ್ ನೀಡಿದ್ದರು. ಇದೀಗ ಅವರಿಗೆ ಸೇರಿದ್ದು ಎನ್ನಲಾಗಿರುವ ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ವಿವರ ಪಡೆದಿದ್ದಾರೆ. ಆದರೆ ಐಟಿ ದಾಳಿ ಹಿಂದಿರುವ ಅಸಲೀ ಸತ್ಯವೇನು  ಗೊತ್ತಾ? ಆ ಪ್ರಶ್ನೆ ಗೆ ಉತ್ತರ ಇಲ್ಲಿದೆ ನೋಡಿ. 
 
ನಟಿ ರಶ್ಮಿಕಾ ಮಂದಣ್ಣ ತಂದೆ ಮದನ್ ಮಂದಣ್ಣರ ಹೆಸರಲ್ಲಿ ಕೊಡಗಿನ ವೀರಾಜ ಪೇಟೆಯ ಕುಕ್ಲೂರು ಗ್ರಾಮದಲ್ಲಿರುವ ಎರಡು ಅಂತಸ್ತಿನ ಕೋಟಿ ಮೌಲ್ಯದ ಐಷರಾಮಿ ಬಂಗಲೆ, 2 ಐಷರಾಮಿ ಕಾರುಗಳು ಹಾಗೂ ವೀರಾಜಪೇಟೆ ಸಮೀಪದ ಮೈತಾಡಿ ಗ್ರಾಮದಲ್ಲಿ 24 ಎಕೆರೆ ಕಾಫಿ ತೋಟ ಇತ್ತೀಚೆಗೆ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಇದೆ ಎನ್ನಲಾಗಿದೆ. ಹೌದು, ಇಷ್ಟೇ ಅಲ್ಲ, ಇನ್ನು ಬೃಹತ್ ಮೊತ್ತದ ಹಣ ಬೇರೆ ಕಡೆ ಇದೆ ಎಂಬುದು ಸುದ್ದಿಯಾಗಿತ್ತು.
 
ಇನ್ನೂ ವೀರಾಜಪೇಟೆ ವಿಜಯನಗರದಲ್ಲಿದ್ದ ಮನೆಯನ್ನು ಒಂದು ವರ್ಷದ ಹಿಂದಷ್ಟೇ 1.25 ಕೋಟಿಗೆ ಮಾರಿದ್ದಾರೆ. ವೀರಾಜಪೇಟೆಯಲ್ಲಿರುವ ಐಷರಾಮಿ ಕಲ್ಯಾಣ ಮಂಟಪ, ಸೆರಿನಿಟ್ ಹಾಲ್​​ನಲ್ಲಿ ಮದುವೆ ದಿನವೊಂದಕ್ಕೆ 1.50 ಲಕ್ಷ. ಬಾಡಿಗೆ ಇದ್ದು ಇವೆಲ್ಲವುಗಳ ಆದಾಯದ ಮೂಲಗಳನ್ನು ಆದಾಯ ತೆರೆಗೆ ಇಲಾಖೆಯ ಅಧಿಕಾರಿಗಳು ಶೋಧಿಸುತ್ತಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಕುಟುಂಬ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಸ್ಕೂಲ್ ಹಾಗೂ ಪೆಟ್ರೋಲ್  ಬಂಕ್ ಖರೀದಿಸಲು ಮುಂದಾಗಿದ್ದೆ ಐಟಿ ದಾಳಿಗೆ ಕಾಣರ ಎನ್ನಲಾಗುತ್ತೀದೆ.
ಹೌದು, ಇದೇ ಐಟಿ ದಾಳಿಗೆ ಅಸಲೀ ಕಾರಣವೆಂಬುದು ತಿಳಿದುಬಂದಿದೆ. 
 
ಈಗಾಗಲೇ ಸ್ಯಾಂಡಲ್​​ವುಡ್​​ನ ನಟಿ ರಶ್ಮಿಕಾ ಅವರ  ಮನೆಯಲ್ಲಿ  ಎರಡು ತಂಡಗಳ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಸುಮಾರು 5 ಎಕರೆ ಜಾಗದಲ್ಲಿ ರೆಸಿಡೆನ್ಸಿಯಲ್ ಸ್ಕೂಲ್ ಹಾಗೂ ಪೆಟ್ರೋಲ್ ಬಂಕ್ ಖರೀದಿಸಲು ರಶ್ಮಿಕಾ ಕುಟುಂಬ ಮುಂದಾಗಿತ್ತು ಎನ್ನುವ ಬಗ್ಗೆ ದಾಖಲೆಗಳು ಐಟಿ ಅಧಿಕಾರಿಗಳ ತಂಡಕ್ಕೆ ಲಭ್ಯವಾಗಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ  ವಿಚಾರಣೆಗೆ ಹಾಜರಾಜುವಂತೆ ಐಟಿ ಅಧಿಕಾರಿಗಳಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ಅದು ಎಲ್ಲಿ?.ಯಾವಾಗ? ಎನ್ನುವ ಇನ್ನು ಸಿಗಬೇಕಿದೆ.
 
 

Find out more: