ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಫೆ.14 ಪ್ರೇಮಿಗಳ ದಿನದಂದೇ ಲಿಪ್ ಲಾಕ್ ಮಾಡಿದ್ದಾರೆ. ಅದು ಯಾರ ಜೊತೆ ಗೊತ್ತಾ!? ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಸ್ಟೋರಿ.
ದಿ ವಿಲನ್ ಗುಂಗಿನಿಂದ ಹೊರ ಬಂದಿರೋ ಜೋಗಿ ಪ್ರೇಮ್, ಮತ್ತೆ ಲವ್ ಸ್ಟೋರಿ ಮೊರೆ ಹೋಗಿದ್ದಾರೆ. ಬಾವಮೈದುನ ರಾಣಾನ ಹೀರೋ ಮಾಡಿ ಏಕ್ ಲವ್ ಯಾ ಅನ್ನೋ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ವ್ಯಾಲಂಟೇನ್ಸ್ ಡೇ ಸ್ಪೆಷಲ್ಲಾಗಿ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ರಚ್ಚು ಬೋಲ್ಡ್ ಅವತಾರ ನೋಡಿದವರು ದಂಗಾಗಿದ್ದಾರೆ.
ಹೌದು, ಪ್ರೇಮ್ ಬಹಳ ವರ್ಷಗಳ ನಂತರ ಲವ್ ಸ್ಟೋರಿ ಹೇಳೊಕ್ಕೆ ಬರ್ತಿದ್ದು, ಟೀಸರ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಇವತ್ತಿನ ಜಮಾನಕ್ಕೆ ಪ್ರೇಮ್ ಅಪ್ ಡೇಟ್ ಆಗಿರೋದು ಗೊತ್ತಾಗ್ತಿದ್ದು, ಬಹಳ ವಿಭಿನ್ನ ಕಥೆಯನ್ನ ಹೇಳೋ ಪ್ರಯತ್ನ ಮಾಡ್ತಿದ್ದಾರೆ ಅನ್ನಿಸ್ತಿದೆ. ಮೊದಲ ಬಾರಿಗೆ ರಾಣಾ ಹೀರೋ ಆಗಿ ಮಿಂಚಿದ್ದು, ರೀಷ್ಮ ಮತ್ತು ರಚಿತಾ ರಾಮ್ ನಾಯಕಿಯರಾಗಿ ಸ್ಕ್ರೀನ್ ಶೇರ್ ಮಾಡ್ಕೊಂಡಿದ್ದಾರೆ.
ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ರು, ಇದು ರಾಣಾ ಆರಂಗೇಟ್ರಂ ಸಿನಿಮಾ ಆಗಿದ್ರು, ಟೀಸರ್ ನಲ್ಲಿ ಎಲ್ಲರ ಹುಬ್ಬೇರಿಸಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್.. ಏಕ್ ಲವ್ ಯಾ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ಕೊಂಚ ಬೋಲ್ಡ್ ಆಗಿಯೇ ದರ್ಶನ ಕೊಟ್ಟಿದ್ದಾರೆ. ರಾಣಾ ಜೊತೆ ರಚ್ಚು ಸಿಗರೇಟ್ ಹಚ್ಚಿಕೊಳ್ಳೋದ್ರಿಂದ ಶುರುವಾಗೂ ಟೀಸರ್, ಇಬ್ಬರು ತುಟಿಗೆ ತುಟಿ ಒತ್ತುವ ಮೂಲಕ ಕೊನೆಯಾಗುತ್ತದೆ. ಟೀಸರ್ ಗೂ ಮೊದ್ಲೆ ರಚಿತಾ ರಾಮ್ ಸಿಗರೇಟ್ ಸೇದೋ ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿತ್ತು. ಇದೀಗ ಟೀಸರ್ನಲ್ಲೂ ಅದನ್ನ ಹೈಲೆಟ್ ಮಾಡಲಾಗಿದೆ.
ಉಪ್ಪಿ ಹೀರೋ ಆಗಿ ನಟಿಸಿದ್ದ ಐ ಲವ್ ಯೂ ಚಿತ್ರದ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ರಚಿತಾ ಮುಂದೆ ಹೀಗೆ ನಟಿಸಲ್ಲ ಅಂದಿದ್ರು. ಆದರೆ, ಏಕ್ ಲವ್ ಯಾ ಸಿನಿಮಾದಲ್ಲಿ ಮತ್ತೆ ಅದೇರೀತಿ ಕಾಣಿಸಿಕೊಂಡಿರೋದು ನೋಡ್ತಿದ್ರೆ, ಚಿತ್ರದಲ್ಲಿ ಅವರ ಪಾತ್ರ ಹೇಗಿರುತ್ತೇ! ಅನ್ನೋ ಕುತೂಹಲ ಕೆರಳಿಸುತ್ತಿದೆ