ಬೆಂಗಳೂರು: ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರಿಲೀಸ್ ಆಯಿತು. ಅದರಲ್ಲಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಅಚ್ಚರಿ ಎಂದರೆ ಇದು ರಿಯಲ್ ಕತೆಯಂತೆ! ಹೌದು, ಶಾಕ್ ಆದರೂ ನಂಬಲೇಬೇಕಾದ ವಿಷಯವಿದು.
ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ಏಕ್ ಲವ್ ಯಾ' ಸಿನಿಮಾದಲ್ಲಿ ಹೊಸ ನಟ ರಾಣಾ ಮತ್ತು ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯ ಮೂಲಕ ಒಂದು ನೈಜ ಕತೆಯನ್ನು ಬೆಳ್ಳಿ ಪರದೆಗೆ ತರಲಾಗುತ್ತಿದೆ. ಈ ಬಗ್ಗೆ ಸ್ವತಃ ಪ್ರೇಮ್ ಏನ್ ಹೇಳಿದ್ದಾರೆ ಗೊತ್ತಾ. ಮುಂದೆ ಓದಿ....
'ಏಕ್ ಲವ್ ಯಾ' ಟೀಸರ್‌ನಲ್ಲಿ ಸಿನಿಪ್ರಿಯರಿಗೆ ಸಾಕಷ್ಟು ಅಂಶಗಳು ನೋಡಲು ಸಿಕ್ಕಿವೆ. ಹಿಂದೆಂದಿಗಿಂತಲೂ ಹೆಚ್ಚು ಬೋಲ್ಡ್ ಆಗಿ ರಚಿತಾ ಕ್ಯಾಮರಾ ಎದುರಿಸಿದ್ದಾರೆ. 'ಡಿಂಪಲ್ ಕ್ವೀನ್' ಸಿಗರೇಟು ಸೇದಿದ್ದಾರೆ, ಲಿಪ್ ಲಾಕ್ ಕೂಡ ಮಾಡಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಈಗ ಇದು ನೈಜ ಘಟನೆ ಆಧಾರಿತ ಸಿನಿಮಾ ಎಂಬ ವಿಷಯ ಕೂಡ ಬಹಿರಂಗ ಆಗಿದೆ. ನಿಜ ಜೀವನದ ಇಬ್ಬರು ಪ್ರೇಮಿಗಳ ಕತೆಯನ್ನು ಇಟ್ಟುಕೊಂಡು ಪ್ರೇಮ್ ಸಿನಿಮಾ ಮಾಡುತ್ತಿದ್ದಾರೆ. ಆ ಎರಡು ರಿಯಲ್ ಲೈಫ್ ಪಾತ್ರಗಳಿಗೆ ರಚಿತಾ ರಾಮ್ ಮತ್ತು ರಾಣಾ ಜೀವ ತುಂಬುತ್ತಿದ್ದಾರೆ.
ನೈಜ ಘಟನೆ ಆಧಾರಿತ ಸಿನಿಮಾ ಎಂದಾಗ ಆ ಘಟನೆ ನಡೆದಿದ್ದು ಎಲ್ಲಿ? ಯಾವಾಗ? ಯಾರ ಜೀವನದಲ್ಲಿ ಎಂಬ ಪ್ರಶ್ನೆಗಳು ಸಹಜವಾಗಿಯೂ ಮೂಡುತ್ತವೆ. ಆದರೆ ಆ ಯಾವ ಪ್ರಶ್ನೆಗಳಿಗೂ ಪ್ರೇಮ್ ಸದ್ಯಕ್ಕೆ ಉತ್ತರ ನೀಡಿಲ್ಲ. ಆ ಮೂಲಕ ಕುತೂಹಲವನ್ನು ಕಾಯ್ದಿರಿಸಿದ್ದಾರೆ. ಅಚ್ಚರಿ ಎಂದರೆ ಆ ರಿಯಲ್ ವ್ಯಕ್ತಿಗಳಿಗೆ ಈಗ ಮದುವೆ ಆಗಿದೆಯಂತೆ. ದುಬೈನಲ್ಲಿ ಸೆಟಲ್ ಕೂಡ ಆಗಿದ್ದಾರೆ ಎಂದು ಪ್ರೇಮ್ ಹೇಳಿದ್ದಾರೆ. ಇನ್ನುಳಿದ ವಿವರಗಳನ್ನು ಅವರು ಮುಂದಿನ ದಿನಗಳಲ್ಲಿ ಬಿಟ್ಟುಕೊಡಬಹುದು. ಇಲ್ಲವಾದರೆ ಪ್ರೇಕ್ಷಕರು ಬೆಳ್ಳಿಪರದೆ ಮೇಲೆಯೇ ನೋಡಿ ತಿಳಿದುಕೊಳ್ಳಬೇಕು.