ಬೆಂಗಳೂರು: ಇತ್ತೀಚೆಗಷ್ಟೇ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್, ಅನುಳನ್ನು ನೋಡಲು ಪಿಜ್ಜಾ ಬಾಯ್‌ನಂತೆ ವೇಷ ಧರಿಸಿ ಕಾಫಿ ಡೇಗೆ ಬರುತ್ತಾನೆ. ಹೀಗೆ ಬಂದರೆ ದುಷ್ಟ ಜಲಂಧರ್ ಗೆ ತಿಳಿಯೋದಿಲ್ಲ ಎಂಬುದು ಅವನ ಪ್ಲ್ಯಾನ್. ಈ ಎಪಿಸೋಡ್ ತುಂಬ ವಿಶೇಷವಾಗಿ ಮೂಡಿಬಂದಿತ್ತು. ಶ್ರೀಮಂತ ಉದ್ಯಮಿ ಆರ್ಯವರ್ಧನ್, ಪಿಜ್ಜಾ ಬಾಯ್ ನಂತೆ ವೇಷ ಧರಿಸಿದ್ದು ಪ್ರೇಕ್ಷಕರಿಗೆ ಸ್ವಲ್ಪ ಬದಲಾವಣೆ ನೀಡಿತ್ತು. ಈಗ ಇದೇ ವಿಚಾರವಾಗಿ ಆರ್ಯವರ್ಧನ್ ಪಾತ್ರ ಮಾಡಿರುವ ನಟ ಅನಿರುದ್ಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಮುಖ್ಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕಾರಣವೇನು ಗೊತ್ತಾ!?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿದೆ ಸಾಮಾಜಿಕ ಕಳಕಳಿಯ ಅಂಶಗಳು. ಏನದು ಗೊತ್ತಾ!?
ಪ್ರಸ್ತುತ ನಾವೆಲ್ಲ ಆನ್ ಲೈನ್ ಯುಗದಲ್ಲಿದ್ದೇವೆ. ಮೊಬೈಲ್ ಒಂದಿದ್ದರೆ ಇಡೀ ವಿಶ್ವದಲ್ಲಿ ಆಗುತ್ತಿರುವ ವಿಚಾರಗಳನ್ನೆಲ್ಲ ತಿಳಿದುಕೊಳ್ಳಬಹುದು. ಈಗ ಒಂದು ಅಂಗಡಿಗೆ ಹೋಗಿಯೇ ವಸ್ತುಗಳನ್ನು ಖರೀದಿ ಮಾಡಬೇಕು ಎಂದೇನಿಲ್ಲ, ಹೋಟೆಲ್ ಗೆ ಹೋಗಿ ಊಟ-ತಿಂಡಿ ಮಾಡಬೇಕು ಎಂದೇನಿಲ್ಲ. ಆನ್‌ಲೈನ್‌ನಲ್ಲಿ ಬಟ್ಟೆ, ಊಟ-ತಿಂಡಿ, ಇನ್ನಿತರೆ ಸಾಮಗ್ರಿಗಳನ್ನು ಬುಕ್ ಮಾಡಿದರೆ ಅವರು ನಮ್ಮ ಮನೆ ಬಾಗಿಲಿಗೆ ಬಂದು ಸೇರುತ್ತವೆ. ಅದರಂತೆ ಈಗಾಗಲೇ ನಾವು ಊಟ-ತಿಂಡಿ ಆರ್ಡರ್ ಮಾಡಿದರೆ ಡೆಲಿವರಿ ಬಾಯ್ ನಾವಿರುವ ಜಾಗಕ್ಕೆ ಬಂದು ಬಿಸಿ ಬಿಸಿ ಆಹಾರವನ್ನು ತಲುಪಿಸುತ್ತಾರೆ. ಡೆಲಿವರಿ ಬಾಯ್ ಸ್ವಲ್ಪ ಲೇಟ್ ಆಗಿ ಆಹಾರ ತಂದರೆ ಕೆಲವರು ಕೋಪ ಮಾಡಿಕೊಂಡು ಬಯ್ಯುವುದುಂಟು, ಅಥವಾ ಅವರ ಕೆಲಸವನ್ನು ಕೀಳಾಗಿ ಕಾಣುವುದಿದೆ. ಆದರೆ ಅವರ ಶ್ರಮಕ್ಕೆ ತಕ್ಕ ಸಂಬಳ ಸಿಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅವರ ಕೆಲಸ ಅದ್ಬುತ ಎಂದಿದ್ದಾರೆ.
"ಹಸಿದವರಿಗೆ ಊಟ ತಲುಪಿಸೋದು ಒಂದು ರೀತಿಯ ಪುಣ್ಯದ ಕೆಲಸ. ಕಾಲೇಜು ವಿದ್ಯಾರ್ಥಿಗಳು ಕೂಡ ರಜೆ ದಿನಗಳಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾರೆ ಅಂತ ಕೇಳಿದ್ದೇನೆ. ಮನೆಯವರ ಕಷ್ಟಗಳಿಗೆ ನೆರವಾಗುವ ಸಲುವಾಗಿಯೋ ಅಥವಾ ಹೊರೆಯಾಗದಿರಲು ಒಟ್ಟಿನಲ್ಲಿ ನೀವು ಮಾಡುವ ಕೆಲಸದಿಂದ ಹಸಿದವರ ಹೊಟ್ಟೆ ತುಂಬುತ್ತದೆ ಎಂದಿದ್ದಾರೆ. ಧಾರವಾಹಿಯಲ್ಲಿ ಇನ್ನು ಹತ್ತು ಹಲವಾರು ಸಾಮಾಜಿಕ ಅಂಶಗಳಿವೆ.