ಬೆಂಗಳೂರು: ನಮ್ಮ ಹುಡುಗರಿಗೆ ಶಕ್ತಿಯಿದೆ, ಸ್ವಲ್ಪ ಹುರಿದುಂಬಿಸಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ನಾವು ಯಾರಿಗಿಂತ ಏನೂ ಕಡಿಮೆಯಿಲ್ಲ. ಇನ್ನು ಮುಂದೆ ಇಂಡಿಯಾವನ್ನು ಕನ್ನಡ ಆಳಲಿದೆ  ಎಂದು ಸಹ ತಿಳಿಸಿದರು. 
 
ನಗರದಲ್ಲಿ ನಡೆದ ಚಲನ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ವೇದಿಕೆ ಮೇಲೆಯಿಂದ ಯಡಿಯೂರಪ್ಪ ಅವರಿಗೆ ನಮಗೆ ಇಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ. ನಮ್ಮ ಹುಡುಗರಿಗೆ ಶಕ್ತಿಯಿದೆ. ಸ್ವಲ್ಪ ಹುರಿದುಂಬಿಸಬೇಕು. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದ ತಿಳಿಸಿದರು. ಜೊತೆಗೆ ಸಿನಿಮಾ ಚಿಕ್ಕ ವಯಸ್ಸಿನಲ್ಲೇ ನನ್ನನ್ನು ಆವರಿಸಿತು. ಸಿನಿಮಾ ಸಮಾಜದಲ್ಲಿ ಸ್ಥಾನ ಕೊಡ್ತು, ಅನ್ನ ಕೊಡ್ತು ಎಲ್ಲವನ್ನು ಕೊಡ್ತು. ಸಿನಿಮಾ ಜೀವನಕ್ಕೆ ಸ್ಫೂರ್ತಿ, ಸಿನಿಮಾ ಬದುಕಲು ನನಗೆ ರೀಸನ್. ಅಂಥ ಸಿನಿಮಾವನ್ನು ಆಚರಣೆ ಮಾಡಲು ನಾವು ಸೇರಿದ್ದೇವೆ.ಬಹಳ ಅದ್ಧೂರಿಯಾಗಿ ಆಚರಣೆ ಮಾಡೋಣ. ಇದು ಮೊದಲಿಗೆ ಪಲ್ಲವಿ ಥೀಯೇಟರ್‍ ನಲ್ಲಿ ನಡೆಯುತ್ತಿತ್ತು.ಆ ಸಮಯದಲ್ಲಿ ನಾನು ಬಂದು ಸಿನಿಮಾ ನೋಡುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. 
 
 
ಈ ವೇಳೆ ವೇದಿಕೆಯ ಮೇಲೆ ಇದ್ದ ಸಿಎಂ ಯಡಿಯೂರಪ್ಪಗೆ ಕರ್ನಾಟಕದಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ, ನಮ್ಮ ಹುಡುಗರಿಗೆ ಶಕ್ತಿಯಿದೆ. ಮಾಡಬೇಕು ಎಂಬ ಛಲ ಇದೆ. ಅದಕ್ಕೆ ನೀವು ಸಹಕಾರ ನೀಡಬೇಕು. ಕಾಲಕಾಲದಿಂದ ಈ ಸ್ಟುಡಿಯೋ ವಿಚಾರ ಮುಂದೆ ಹೋಗುತ್ತಲೇ ಇದೆ.ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಹಾಗಾಗಿ ನಮ್ಮ ಹುಡುಗರಿಗೆ ಶಕ್ತಿ ಕೊಡಿ ಇಲ್ಲಿನ ಹುಡುಗರ ಜೊತೆ ಈ ಉದ್ಯಮವು ಬೆಳೆಯುತ್ತೆ ಎಂದು ಮನವಿ ಮಾಡಿದ್ದು ತುಂಬಾ ವಿಶೇಷವಾಗಿತ್ತು. 
 
70ರ ದಶಕದಿಂದಲೂ ಚೆನ್ನೈನಲ್ಲೇ ಸಿನಿಮಾರಂಗದ ಎಲ್ಲಾ ಕೆಲಸ ನಡೆಯುತ್ತಿತ್ತು. ಹಾಗಾಗಿ ಅವರಿಗೆ ಕಲಿಯಲು ಅವಕಾಶ ಇತ್ತು. ಆದರೆ ನಾವು ಏಕಲವ್ಯನ ತರ ನಾವೇ ಎಲ್ಲೋ ನೋಡಿ ಕಲಿತು ನಂತರ ಸಿನಿಮಾ ಮಾಡಿ ಬೇರೆಯವರಿಗೆ ಸ್ಪರ್ಧೆ ನೀಡುತ್ತಿದ್ದೇವೆ. ಆದ್ದರಿಂದ ನಮ್ಮ ಹುಡುಗರಿಗೆ ಒಳ್ಳೆಯ ಸಿನಿಮಾ ಸಂಸ್ಥೆಗಳು ಹಾಗೂಶಿಕ್ಷಣ ಕೊಡಬೇಕೆಂದು ತಿಳಿಸಿದರು.

Find out more: