ಸೌತ್ ಸಿನಿ ಇಂಡಸ್ಟ್ರಿಯಲ್ಲಿ ತನ್ನದೇ ಆದ ಖ್ಯಾತಿ ಪಡೆದಿರುವ ಬ್ಯೂಟಿ ಕ್ವೀನ್ ಖ್ಯಾತ ನಟಿ ಕಾಜಲ್ ಅಗರವಾಲ್ ಇದೀಗ ಅತಿದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ. ಅದು ಯಾವ ಪ್ರಶಸ್ತಿ ಗೌರವ, ಏನಿದು ಸ್ಟೋರಿ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ. 
 
ಕಾಜಲ್ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್‌ ಅಗರ್ವಾಲ್‌ ಅವರ ಮೇಣದ ಪ್ರತಿಮೆ ಸಿಂಗಾಪುರದಲ್ಲಿರುವ ಪ್ರತಿಷ್ಠಿತ ಮೇಡಂ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಅನಾವರಣ ಆಗಿದೆ. ಮ್ಯೂಸಿಯಂನ ತಂಡ ಮೊದಲೇ ಕಾಜಲ್‌ರನ್ನು ಭೇಟಿಯಾಗಿ ಅವರ ಎತ್ತರ, ತೂಕ, ಸ್ಕಿನ್‌ ಟೋನ್‌, ಐ ಕಲರ್‌, ಕೂದಲಿನ ಸಾಂದ್ರತೆ ಇತ್ಯಾದಿಗಳ ವಿವರಗಳನ್ನು ಪಡೆದುಕೊಂಡು ಹೋಗಿತ್ತು. 
 
ಈ ಗೌರವದ ಕುರಿತು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದ ಕಾಜಲ್‌, 2020ರ ಫೆಬ್ರವರಿ 5ರಂದು ನಾನು ಸಿಂಗಾಪುರದಲ್ಲಿ ಇರಲಿದ್ದೇನೆ. ಅಲ್ಲಿನ ಮೇಡಂ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ನಾನು ನನ್ನ ಮೇಣದ ಪ್ರತಿಮೆ ಅನಾವರಣಗೊಳಿಸಲಿದ್ದೇನೆ ಎಂದಿದ್ದರು.
 
ಸಣ್ಣವಳಿರುವಾಗ ನಾನು ಮೇಡಮ್‌ ಟುಸ್ಸಾಡ್ಸ್‌ಗೆ ಭೇಟಿ ನೀಡಿದ್ದೆ. ನಟರ ಅಳೆತ್ತರದ ಪ್ರತಿಮೆಗಳು ಮೇಣದಲ್ಲಿ ರೂಪುಗೊಂಡಿರುವುದನ್ನು ನೋಡಿ ಬೆರಗಾಗಿದ್ದೆ. ಈಗ ನನ್ನದೇ ಮೇಣದ ಪ್ರತಿಮೆ ಇಲ್ಲಿ ಅನಾವರಣಗೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದರು.  ಈ ಗೌರವಕ್ಕೆ ಪಾತ್ರವಾಗುತ್ತಿರುವ ದಕ್ಷಿಣದ ಮೊದಲ ನಾಯಕಿ ಕಾಜಲ್ ಎನ್ನಬಹುದು. ಇದುವರೆಗೂ ದಕ್ಷಿಣದ ಹೀರೋಯಿನ್‌ಗಳಲ್ಲಿ ಯಾರಿಗೂ ಈ ಗೌರವ ಸಿಕ್ಕಿರಲಿಲ್ಲ.
 
ಸಿಂಗಪುರದ ಮೇಡಂ ಟುಸ್ಸಾಡ್ಸ್‌ನಲ್ಲಿ ಮೋಹಕ ತಾರೆ ದಿವಂಗತ ಶ್ರೀದೇವಿ, ಕರಣ ಜೋಹರ್, ಅನುಷ್ಕಾ ಶರ್ಮಾ ಮತ್ತು ಮಹೇಶ್ ಬಾಬು ಮೇಣದ ಪ್ರತಿಮೆಗಳಿವೆ. ಲಂಡನ್‌ನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾರೈ ಬಚ್ಚನ್, ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಮೇಣದ ಪ್ರತಿಮೆಗಳಿವೆ. ಇದೀಗ ಈ ಸಾಲಿನಲ್ಲಿ ಟಾಲಿವುಡ್ ನ ಕಾಜಲ್ ಪ್ರತಿಮೆ ಸೇರ್ಪಡೆಯಾಗಿರುವುದು ತೆಲುಗು ಸಿನಿಪ್ರೇಕ್ಷಕರಿಗೆ ಅಷ್ಟೇ ಅಲ್ಲದೇ ಇಡೀ ದಕ್ಷಿಣ ಸಿನಿಮಾ ಮಂದಿ ಖುಷಿ ಪಡುವಂತೆ ಆಗಿದೆ.

Find out more: