ಕೊರೋನಾ ವೈರಸ್ ಹರಡದಂತೆ ವಿದೇಶದಿಂದ ಭಾರತಕ್ಕೆ ಬಂದವರನ್ನು ಕೊರೋನಾ ಸೋಂಕು ಇದೆಯಾ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.  ಆದರೆ ಬಾಲಿವುಡ್‌ನ ಪ್ರಖ್ಯಾತ ಗಾಯಕಿಯೊಬ್ಬರು ತಮ್ಮ ಸೋಂಕನ್ನು ಮುಚ್ಚಿಟ್ಟು ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವರನ್ನು ಭೇಟಿ ಮಾಡಿ ಸೋಂಕು ದೃಡ ಪಟ್ಟ ಬಳಿಕ ವೈದ್ಯಕೀಯ ಚಿಕಿತ್ಸೆಯ್ನ ಪಡೆದುಕೊಳ್ಳುತ್ತಿದ್ದಾರೆ ಅಷ್ಟಕ್ಕೂ ಆ ಖ್ಯಾತ ಗಾಯಕಿ ಯಾರು ಗೊತ್ತಾ?

 

ವಿದೇಶದಿಂದ ಬಾರತಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವರನ್ನು ಭೇಟಿ ಮಾಡಿದ್ದ ಬಾಲಿವುಡ್ ನ ಖ್ಯಾತ ಗಾಯಕಿ ಕನ್ನಿಕಾ ಕಪೂರ್‌ಗೆ ಕೊರೋನಾ ಸೋಂಕು ದೃಡಪಟ್ಟಿದೆ ಈ ಕುರಿತು ಕನ್ನಿಕಾ ಕಪೂರ್ ಕೂಡ ಮಾರಕ ಕರೊನಾ ಸೋಂಕು ತಗುಲಿರುವುದಾಗಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಘೋಷಣೆ ಮಾಡಿಕೊಂಡಿದ್ದರು ನಂತರ  ಪೋಸ್ಟ್ ಅನ್ನೇ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

 

ಸೆಲೆಬ್ರಿಟಿಗಳಲ್ಲೇ ಕನ್ನಿಕಾ ಅವರದ್ದು ಮೊದಲ ಪ್ರಕರಣವಾಗಿದೆ. ಸೋಂಕು ತಗುಲಿದೆ ಎಂದು ತಿಳಿದುಬಂದಾಗಿನಿಂದ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕಾ ಪ್ರಹಾರಗಳು ಕೇಳಿಬರುತ್ತಿವೆ. ಲಂಡನ್ನಿಂದ ಮರಳಿದ ಕನ್ನಿಕಾ ಸಾಕಷ್ಟು ಮುನ್ನೆಚ್ಚಾರಿಕಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.

 

ನಾನು ಮತ್ತು ನನ್ನ ಕುಟುಂಬ ಸಂಪೂರ್ಣವಾಗಿ ಕ್ವಾರಂಟೈನ್ನಲ್ಲಿ ಇದ್ದೇವೆ. ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೇವೆ. ನನ್ನೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಕನ್ನಿಕಾ ಬರೆದುಕೊಂಡಿದ್ದರು.

 

ನಿನ್ನೆಯಷ್ಟೇ ಮೂರನೇ ಬಾರಿಯು ಕನ್ನಿಕಾ ಅವರಲ್ಲಿ ಕೋವಿಡ್ 19 ಇರುವುದು ಧೃಡಪಟ್ಟಿದೆ. ಅಲ್ಲದೆ, ಕರೊನಾ ಸೋಂಕಿತ ಪ್ರಿನ್ಸ್ ಚಾರ್ಲ್ಸ್ ಅವರೊಂದಿಗಿನ ಕನ್ನಿಕಾ ಅವರ ಹಳೆಯ ಫೋಟೋ ವೈರಲ್ ಆಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

 

ಕನ್ನಿಕಾ ಎರಡು ವಾರಗಳ ಹಿಂದಷ್ಟೇ ಯುಕೆ ಇಂದ ಭಾರತಕ್ಕೆ ವಾಪಾಸ್ಸಾದರು. ಮಾರ್ಚ್ 9ರಂದು ಲಂಡನ್ನಿಂದ ಮುಂಬೈಗೆ ಮರಳಿದ ಕನ್ನಿಕಾ ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಲಖನೌಗೆ ತೆರಳಿದರು. ಈ ಕಾರ್ಯಕ್ರಮದಲ್ಲಿ ಅನೇಕ ರಾಜಕಾರಣಿಗಳು ಸಹ ಭಾಗಿಯಾಗಿದ್ದರು. ಸೋಂಕಿನ ಬಗ್ಗೆ ಮುಚ್ಚಿಟ್ಟ ಆರೋಪದ ಮೇಲೂ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ.

Find out more: