ಕೊರೋನಾ ವೈರಸ ಇಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಅದೆಷ್ಟೋ ಕಾಮಗಾರಿಗಳು ಸ್ಥಗಿತಗೊಂಡಿದೆ ಇದರ ಜೊತೆಗೆ ಸಿನಿಮಾರಂಗದಲ್ಲೂ ಕೂಡ ಯಾವ ಕೆಲಸಗಳು ನಡೆಯದೆ ಪರದೆಯನ್ನು ಎಳೆದುಕೊಂಡಿದೆ. ಇದರಿಂದಾಗಿ ಯಾವೊಂದು ಚಿತ್ರೀಕರಣಗಳು ಸಹ ನಡೆಯುತ್ತಿಲ್ಲ. ಜೊತೆಗೆ ಬಿಡುಗಡೆಗೆ ಸಿದ್ದವಾದ ಯಾವ ಚಿತ್ರವೂ ಕೂಡ ಬಿಡುಗಡೆಯ ಭಾಗ್ಯವನ್ನು ಕಾಣಲಿಲ್ಲ ಇದರಿಂದಾಗಿ ಅದೆಷ್ಟೋ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡಲು ತುದಿಗಾಲಲ್ಲಿ ಕಾಯುತ್ತಿದೆ. ಆದರೆ ತಯಾರಿಸಿದ ಸಿನಿಮಾವನ್ನು ಎಷ್ಟು ದಿನಗಳ ಕಾಲ ಹಾಗೆಯೇ ಉಳಿಸಿಕೊಳ್ಳಲು ಸಾಧ್ಯ ಎಂಬ ಪ್ರೆಶ್ನೆಗೆ ಓಟಿಟಿ ವೇದಿಕೆ ಉತ್ತರವನ್ನು ನೀಡುತ್ತದೆ.

ಈ ಲಾಕ್ ಡೌನ್ ಸಮಯದಲ್ಲಿ ಓಟಿಟಿ ಪ್ಲಾಟ್ ಫಾರ್ಮ್ ಮುಂಚೂಣೆಗೆ ಬರುತ್ತಿದೆ. ಈ ಓಟಿಟಿ ಫ್ಲಾಟ್ ಫಾರ್ಮ ನಿಂದಲೇ ಸೂಪರ್ ಹಿಟ್ ಆದ ಚಿತ್ರಗಳು ಸಾಕಷ್ಟಿದೆ. ಅದರಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರವೊಂದನ್ನು ಪಾಕಿಸ್ತಾನಿಯರು ಕೂಡ ಮೆಚ್ಚಿದ್ದಾರೆ ಅಷ್ಟಕ್ಕೂ ಆ ಚಿತ್ರ ಯಾವುದು ಗೊತ್ತಾ..?

 

ಕೊರೋನಾ ಲಾಕ್ಡೌನ್ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರು ಮನರಂಜನಾ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಟಿ.ವಿ ಧಾರವಾಹಿ, ಸಿನಿಮಾಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಓಟಿಟಿ ಫ್ಲಾಟ್ ಫಾರ್ಮ್ಗಳು ಕೂಡ ಜನರ ನೆಚ್ಚಿನ ತಾಣವಾಗಿದ್ದು, ಸಿನಿಮಾಗಳನ್ನು ನೋಡುತ್ತಾ ದಿನ ಕಳೆಯುತ್ತಿದ್ದಾರೆ.

 

ಥಿಯೇಟರ್ನಲ್ಲಿ ಹೆಚ್ಚು ಸದ್ದು ಮಾಡದ ಸಾಕಷ್ಟು ಸಿನಿಮಾಗಳು ಓಟಿಟಿ ಪ್ಲಾಟ್ ಫಾರ್ಮ್ನಲ್ಲಿ ಜನರ ಮನಗೆದ್ದಿವೆ. ದೇಶದ ನಾನಾ ಭಾಗದ ಜನರು ಆನ್ಲೈನ್ ಮೂಲಕ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೆಶನದ ’ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಹೆಚ್ಚು ಜನಪ್ರಿಯ ಕಂಡಿದೆ. ಅನೇಕ ಜನರು ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನಿಯರು ಕೂಡ  ’ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾ ಇನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಹಿಂದಿ ಭಾಷೆಯ ಜೊತೆಗೆ ಇತರ ಭಾಷೆಗಳಿಗೆ ಡಬ್ ಮಾಡಿ ಮಾಡಲಿ ನಿರ್ದೇಶಕರು ಯೋಜನರ ಹಾಕಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ಕಾಣಿಸಿಕೊಂಡರೆ, ಮಾನ್ವಿತಾ ಹರೀಶ್ ನಾಯಕಿಯಾಗಿ ಮಿಂಚಿದ್ದಾರೆ. ಇವರ ಜೊತೆಗೆ ಹಿರಿಯ ನಟ ಅನಂತ್ ನಾಗ್ ಸೇರಿ ಅನೇಕ ತಾರಾ ಬಳಗವನ್ನು ಈ ಸಿನಿಮಾ ಹೊಂದಿದೆ. ಈ ಹಿಂದೆ ಥಿಯೇಟರ್ನಲ್ಲಿ ಹೆಚ್ಚು ಓಡದ ದಿಯಾ, ಲವ್ ಮಾಕ್ಟೇಲ್ ಸಿನಿಮಾ ಕೂಡ ಓಟಿಟಿ ಫ್ಲಾಟ್ ಫಾರ್ಮ್ ಮೂಲಕ ಜನರ ಮನಗೆದ್ದಿತ್ತು.

 

 

Find out more: