ವರ ನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಯುವ ರಾಜ್ ಕುಮಾರ್ ಇತ್ತೀಚೆಗೆ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಅಣ್ಣಾವ್ರ ಜನ್ಮದಿನವಾದ ಏ. 24ರಂದು ಅವರ ಅಭಿಮಾನಿಗಳಿಗೆ ಖುಷಿ ನೀಡುವ ಸಲುವಾಗಿ ಯುವ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರದ ಮೊದಲ ಲುಕ್ ಪೋಸ್ಟರ್ಅನ್ನು ಬಿಡುಗಡೆ ಮಾಡಲಾಗಿದೆ.
ಕೈಯಲ್ಲಿ ಉದ್ದನೆಯ ಭರ್ಜಿ ಹಿಡಿದು ಖಡಕ್ ಲುಕ್ನಲ್ಲಿ ಯುವ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಇದು ಆಕ್ಷನ್ ಭರಿತ ಸಿನಿಮಾ ಎಂಬ ಸುಳಿವು ನೀಡಿದೆ. ಉದ್ದನೆಯ ಗಡ್ಡ ಮತ್ತು ಕೂದಲು ಬಿಟ್ಟುಕೊಂಡಿರುವ ಯುವ ಅವರ ಪೋಸ್ಟರ್ ಗಮನ ಸೆಳೆಯುವಂತಿದೆ. ಸದ್ಯಕ್ಕೆ ಈ ಚಿತ್ರಕ್ಕೆ 'ಯುವ 01' ಎಂಬ ಶೀರ್ಷಿಕೆ ಇರಿಸಲಾಗಿದೆ.
'ಎಲ್ಲರಿಗೂ ನಮಸ್ಕಾರ. ನನ್ನ ಚಿಕ್ಕ ಮಗನಾದ ಯುವ ರಾಜ್ ಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ನಿಮ್ಮ ಮುಂದೆ. ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ. ಧನ್ಯವಾದಗಳು' ಎಂದು ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಕಿರಿಯ ಮಗನಿಗೆ ಎಲ್ಲರೂ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನ ಚಿತ್ರಕ್ಕೆ ಪ್ರಶಾಂತ್ ನೀಲ್ ಜತೆ ಕೆಜಿಎಫ್ ಚಿತ್ರದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್, ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಪೋಸ್ಟರ್ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರದ ಟೈಟಲ್ ಫೈನಲ್ ಆಗದ ಕಾರಣ YR 01 ಅನ್ನೋದು ವರ್ಕಿಂಗ್ ಟೈಟಲ್ ಆಗಿ ಬಳಸಿಕೊಳ್ಳಲಾಗಿದೆ. ಪ್ರಶಾಂತ್ ನೀಲ್ ಗರಡಿಯಲ್ಲಿ ಪಳಗಿದ ಪ್ರತಿಭೆ ಪುನೀತ್ ಈ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣದ ಬಗ್ಗೆ ಇನ್ನೂ ಪ್ಲ್ಯಾನ್ ಆಗಿಲ್ಲವಾದರೂ ಲಾಕ್ಡೌನ್ ಮುಂಚೇಯೇ ಚಿತ್ರದ ಫೋಟೋ ಶೂಟ್ ಮಾಡಲಾಗಿತ್ತು. ಆ ಫೋಟೋಗಳಲ್ಲಿ ಬಳಸಲಾಗಿದ್ದ ಲುಕ್ ಅನ್ನು ಈಗ ರಿವೀಲ್ ಮಾಡಿರುವುದು.ಸಕತ್ ವೈರಸ್ ಆಗಿದೆ.
ಯುವರಾಜ್ ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಹಾಗೂ ಫೈಟಿಂಗ್ನಲ್ಲಿ ಪಂಟರಾಗಿದ್ದಾರೆ. ಇನ್ನು 2020 ವಿನಯ್ ವಿಶೇಷವಾಗಿ ಬರ ಮಾಡಿಕೊಂಡಿದ್ದಾರೆ. ದುಬೈನಲ್ಲಿ ಫ್ಲೈ ಬೋರ್ಡಿಂಗ್ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಿದ್ದಾರೆ. ಈ ವಿಡಿಯೋವನ್ನು ಟ್ಟಿಟರ್ನಲ್ಲಿ ಶೇರ್ ಮಾಡಿಕೊಂಡ ಯುವ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಮೇ 26,2019ರಲ್ಲಿ ಗೆಳತಿ ಶ್ರೇದೇವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಯುವರಾಜ್. ಯುವ ರಾಜ್ಕುಮಾರ್ ಅವರ ತಮ್ಮ ವಿನಯ್ ರಾಜ್ಕುಮಾರ್ ಬಾಕ್ಸಿಂಗ್ ಕಲಿಯುವ ಮೂಲಕ 'ಟೆನ್' ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಕರಮ್ ಚಾವ್ಲಾ ನಿರ್ದೇಶಕದಲ್ಲಿ ಮೂಡುತ್ತಿರುವ ಈ ಚಿತ್ರಕ್ಕೆ ಆಶಿಕಾ ರಂಗನಾಥ್ ಅಕ್ಕ ನಾಯಕಿ.