ಇತ್ತೀಚಿನ ದಿನಗಳಲ್ಲಿ ಕೊರೋನಾ ದಿಂದಾಗಿ ಎಲ್ಲಾ ಚಿತ್ರರಂಗದ ಚಿತ್ರೀಕರಣ ಕಾರ್ಯಗ ಅರ್ಧಕ್ಕೆ ನಿಂತಿದೆ ಆದರೆ ಇಂತ ದಿನಗಳಲ್ಲೂ ಕೂಡ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿ ಜನರನ್ನು ಗೆಲ್ಲುತ್ತಿದೆ, ಆದರೆ ಈ ಸಿನಿಮಾಗಳೆಲ್ಲವೂ ಬಿಡುಗಡೆಯಾಗುತ್ತಿರುವುದು ಚಿತ್ರಮಂದಿರಗಳಲ್ಲಿ ಅಲ್ಲ ಬದಲಿಗೆ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ, ಇಂತಹ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಗೆ ಸಿದ್ದವಾಗರುವ ಬಾಲಿವುಡ್ ಸಿನಿಮಾ ಶಂಕುತಲಾ ದೇವಿಯವರ ಜೀವನ ಕುರಿತಾದ ಚಿತ್ರ.

 

ಹೌದು ಶಕುಂತಲಾ ದೇವಿ. ಕಂಪ್ಯೂಟರ್​​ಗೆ ಸವಾಲ್​ ಹಾಕಿ ಗಿನ್ನಿಸ್​ ದಾಖಲೆ​​ ಬರೆದ ಕನ್ನಡತಿ. ಮಾನವ ಕಂಪ್ಯೂಟರ್​ ಅಂತ್ಲೇ ಖ್ಯಾತಿ ಗಳಿಸಿರುವ ಶಕುಂತಲಾ ದೇವಿ ಅವರ ಲೈಫ್​ ಸ್ಟೋರಿಯನ್ನ ಆಧರಿಸಿ, ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ವಿದ್ಯಾಬಾಲನ್​​ ಶಕುಂತಲಾ ದೇವಿ ಪಾತ್ರದಲ್ಲಿ ಎಲ್ಲರ ಹುಬ್ಬೇರಿಸಿದ್ದಾರೆ. ಅನು ಮೆನನ್​ ಆಯಕ್ಷನ್​ ಕಟ್​ ಹೇಳಿರುವ ಈ ಬಯೋಪಿಕ್​ ಸಿನಿಮಾ ಜುಲೈ 31ಕ್ಕೆ ಓಟಿಟಿ ಫ್ಲಾಟ್​ಫಾರ್ಮ್​​​ನಲ್ಲಿ ಪ್ರೀಮಿಯರ್​ ಆಗಲಿದೆ.

 

ಗಣಿತದಲ್ಲಿ ಸಮಸ್ಯೆಗಳಿರುವಂತೆ ಶಕುಂತಲಾ ದೇವಿಯವರು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿದ್ದರು. ಅದನ್ನೆಲ್ಲಾ ಈ ಸಿನಿಮಾದಲ್ಲಿ ಎಳೆಎಳೆಯಾಗಿ ಕಟ್ಟಿಕೊಡಲಾಗ್ತಿದೆ. ಕಂಪ್ಯೂಟರ್​ಗೆ ಸಮನಾಗಿ ಕೆಲವೊಮ್ಮೆ ಅದಕ್ಕಿಂತ ವೇಗವಾಗಿ ಲೆಕ್ಕಗಳನ್ನ ಬಿಡಿಸಿ, ಹೇಳುತ್ತಿದ್ದ ಜಾಣೆ ಶಕುಂತಲಾ ದೇವಿ. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಶಕುಂತಲಾ ದೇವಿಯವರು ಸಾಂಪ್ರದಾಯಿಕ ಶಿಕ್ಷಣ ಪಡೆಯಲಿಲ್ಲ. ಆದ್ರೆ ಬಾಲ್ಯದಿಂದಲೇ ಗಣಿತದಲ್ಲಿ ಪರಿಣಿತೆಯಾಗಿದ್ರು. 60,70, 80ರ ದಶಕದಲ್ಲಿ ದೇಶ ವಿದೇಶದಲ್ಲಿ ತಮ್ಮ ಕ್ಯಾಲ್ಯುಕ್ಲೇಷನ್​​ ಮೈಂಡ್​​ನಿಂದ ಪ್ರಸಿದ್ಧರಾಗ್ತಾರೆ.

 

ಶಕುಂತಲಾ ದೇವಿಯವರ ಬಾಲ್ಯ, ಅವರು ಗಣಿತಜ್ಞೆಯಾಗಿ ಬೆಳೆದ ಪರಿ, ಈ ಹಾದಿಯಲ್ಲಿ ಎದುರಿಸಿದ ಸಮಸ್ಯೆಗಳು, ಗಿನ್ನಿಸ್​ ಬುಕ್​ನಲ್ಲಿ ದಾಖಲೆ ಬರೆಯುವ ವೇಳೆಗೆ ಮಗಳಿಂದ ದೂರವಾಗಬೇಕಾದ ಪರಿಸ್ಥಿತಿ, ಹೀಗೆ ಬಹಳ ಸೊಗಸಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಶಕುಂತಲಾ ದೇವಿ ಅವರ 20 ವಯಸ್ಸಿನಿಂದ ಕೊನೆಯವರೆಗಿನ ಪಾತ್ರವನ್ನ ವಿದ್ಯಾಬಾಲನ್​ ನಿಭಾಯಿಸಿದ್ದಾರೆ. 'ಗಣಿತದ ಜೊತೆ ಕುಸ್ತಿ ಅಲ್ಲ, ದೋಸ್ತಿ ಮಾಡ್ಕೊಳ್ಳಿ', 'ನಾನು ಕರೆಕ್ಟ್​ ಆಗಿ ಹೇಳ್ದೆ, ಕಂಪ್ಯೂಟರ್ರೇ ತಪ್ಪು ಹೇಳಿದ್ದು', 'ನಾನು ಯಾವತ್ತೂ ಸೋಲೋದಿಲ್ಲ' ಅನ್ನೋ ಡೈಲಾಗ್ಸ್​ ಟ್ರೈಲರ್​​ನ ಹೈಲೆಟ್.

 

ಶಕುಂತಲಾ ದೇವಿ ತಂದೆ ಪಾತ್ರದಲ್ಲಿ ಕನ್ನಡ ನಟ ಪ್ರಕಾಶ್​ ಬೆಳವಾಡಿ ಮಿಂಚಿದ್ರೆ, ಪತಿಯಾಗಿ ಜಿಸ್ಸು ಸೇನ್​ಗುಪ್ತಾ, ಮಗಳಾಗಿ ಸಾನ್ಯಾ ಮಲ್ಹೋತ್ರಾ ಬಣ್ಣ ಹಚ್ಚಿದ್ದಾರೆ.

 

ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಈಗಾಗಾಲೇ ಶಕುಂತಲಾ ದೇವಿ ಸಿನಿಮಾ ತೆರೆಗೆ ಬರಬೇಕಿತ್ತು.. ಕೊರೊನಾ ಹಾವಳಿಯಿಂದ ಚಿತ್ರವನ್ನ ಆನ್​ಲೈನ್​​ನಲ್ಲಿ ರಿಲೀಸ್ ಮಾಡಲು ಪ್ಲಾನ್​ ಮಾಡಲಾಗ್ತಿದೆ. ಅದೆಲ್ಲ ಏನೇ ಇದ್ರು, ಕನ್ನಡದ ಸಾಧಕಿಯ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಬರ್ತಿರೋದು ವಿಶೇಷ.

 

Find out more: