ಸ್ಯಾಂಡಲ್ ವುಡ್ ನಲ್ಲಿ ನಾಲ್ಕೆöದು ಬಿಗ್ ಕಾಮಿಡಿ ಆಕ್ಟರ್‌ಗಳು ನಟಿಸಿರುವ ಕಾಮಿಡಿ ಕಮ್ ಹಾರರ್ ಥ್ರಿಲರ್ ಹಾಗಿರುವ ಈ ಚಿತ್ರಕ್ಕೆ ಮನರಂಜನೆಯೇ ಜೀವಾಳವಾಗಿದೆ. ಈ ಹಾರರ್ ಕಾಮಿಡಿ ಸಿನಿಮಾದಲ್ಲಿ ಲಾಜಿಕ್ ಸೈಡಿಗಿಟ್ಟು ತೆರೆಮೇಲೆ ಮ್ಯಾಜಿಕ್ ಮಾಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಕುಡುಕನಾಗ ಸಾಕಷ್ಟು ಪಾತ್ರಗಳಲ್ಲಿ ನಟಿಸಿ ಯಶಸ್ಸು ಗಳಿಸಿರುವ ಸಾದು ಕೋಕಿಲ ಇದರಲ್ಲೂ ಫುಲ್ ಟೈಮ್ ಕುಡುಕನಾಗಿರುತ್ತಾನೆ. ರಾಘವನಿಗೆ (ಸಾಧುಕೋಕಿಲ) ತನ್ನ ಮಗನ ಹಾರ್ಟ್ ಆಪರೇಷನ್ ಮಾಡಿಸಿಬೇಕಿದೆ. ಅದಕ್ಕಾಗಿ ಆತನಿಗೆ ದುಡ್ಡು ಬೇಕಿದೆ. ನಟನಾಗುವ ಹುಚ್ಚಿನಿಂದ ತನ್ನ ಅಂಗಡಿ ಮಾಡಿ೧೦ ಲಕ್ಷ ರೂ. ಕಳೆದುಕೊಂಡಿದ್ದಾನೆ ರಾಜ (ಕುರಿ ಪ್ರತಾಪ್). ಆತನಿಗೆ ಹಣ ಮರಳಿಬೇಕಿದೆ. ಸೆಕ್ಯುರಿಟಿ ಗಾರ್ಡ್ ನಿರ್ಲಕ್ಷ್ಯದಿಂದ ಎಟಿಎಂನಿAದ ೫ ಲಕ್ಷ ರೂ. ಕಳ್ಳತನವಾಗಿದೆ. ಅದನ್ನು ಮರಳಿ ನೀಡಬೇಕಾದ ಅನಿವಾರ್ಯತೆ ಸೆಕ್ಯುರಿಟಿ ಗಾರ್ಡ್ ರಾಮನದ್ದು (ರವಿಶಂಕರ್ ಗೌಡ). ಇವರೆಲ್ಲರ ಹಣದ ಅವಶ್ಯಕತೆ ನೀಗಿಸುವ ಕೆಲಸ ರಘುಪತಿಯದ್ದು. ದೆವ್ವದ ಇದೆ ಎಂಬ ವದಂತಿ ಹಬ್ಬಿರುವ ಮನೆಯಲ್ಲಿ ವಾಸ ಮಾಡಿ, ಅಲ್ಲಿ ದೆವ್ವ ಇಲ್ಲ ಎಂದು ಸಾಬೀತು ಪಡಿಸಿದರೆ, ತಲಾ ಹತ್ತು ಲಕ್ಷ ರೂ. ನಾಲ್ವರಿಗೂ ಸಿಗುತ್ತದೆ.
ಆ ನಾಲ್ವರು ಆ ಮನೆಗೆ ಎಂಟ್ರಿಯಾದ ಕೂಡಲೇ ಕಥೆಗೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಹಾರರ್ ಕಥೆಯಾಗಿದ್ದರಿಂದ ಭಯ ಇರಬೇಕಾದ ಜಾಗದಲ್ಲಿ ನಗುವಿನ ಸುನಾಮಿಯೇ ಸೃಷ್ಟಿಯಾಗುತ್ತದೆ. ಅಲ್ಲಿಂದ ಏನಾಗುತ್ತದೆ ಎಂಬುದು ಸಿನಿಮಾದಲ್ಲೇ ನೋಡಿ ಎಂಜಾಯ್ ಮಾಡಬೇಕು.
'ರಾಕ್ ಸ್ಟಾರ್' ರಾಜನಾಗಿ ಕುರಿ ಪ್ರತಾಪ್ ಸಿಕ್ಕಾಪಟ್ಟ ನಗಿಸುತ್ತಾರೆ. ಕನ್ನಡ ಸಿನಿಮಾ ನಟರ ಮಿಮಿಕ್ರಿ ಮಾಡುವ ಅವರ ದೃಶ್ಯಗಳು ರಂಜಿಸುತ್ತವೆ. ಉಳಿದ ಕಲಾವಿದರಿಗಿಂತ ಕೊಂಚ ಜಾಸ್ತಿಯೇ ಮಿಂಚಿದ್ದಾರೆ ಕುರಿ. ಕುಡುಕನಾಗಿ ಸಾಧು ಕೋಕಿಲ ಎಂದಿನ ಜೋಷ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ರಘುಪತಿ ಪಾತ್ರದಲ್ಲಿ ಚಿಕ್ಕಣ್ಣ. ಇರುಳುಗುರುಡನಾಗಿ, ಕಿವಿ ಕೇಳದ ವ್ಯಕ್ತಿಯಾಗಿ ರವಿಶಂಕರ್ ಗೌಡ ಉತ್ತಮವಾಗಿ ನಟಿಸಿದ್ದಾರೆ. ಶ್ರುತಿ ಹರಿಹರನ್, ಶಿವರಾಮ್, ಗಿರಿ, ಸುಮಿತ್ರಾ, ರಾಜೇಶ್ ನಟರಂಗ, ಅಶ್ವತ್ಥ್ ನೀನಾಸಂ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ಧಾರೆ.ವೀಕೆAಟ್‌ಗೆ ಚಿತ್ರಪೂರ್ತಿ ಮನರಂಜನೆ ನೀಡಲಿದೆ.