ದಕ್ಷಿಣ ಭಾರತದಲ್ಲಿ ಬಿಜೆಪಿ ಈ ಬಾರಿ ಕಡಿಮೆ ಕರ್ನಾಟಕದ ಮೇಲೆ ಭಾರಿ ನೀರಿಕ್ಷೆ ಇಟ್ಟಿಕೊಂಡಿತ್ತು. ಈ ನಿರೀಕ್ಷೆ ಇದೀಗ ಬಹುತೇಕ ಪೂರ್ಣಗೊಂಡಿದೆ. ಅಷ್ಟೇ ಅಲ್ಲ ನಿರೀಕ್ಷೆಗೂ ಮೀರಿ ಬಿಜೆಪಿ ಕರ್ನಾಟಕದಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ.
ರಾಜ್ಯದಲ್ಲಿ 25 ಸ್ಥಾನಗಳು ಬಿಜೆಪಿ ಪಾಲಾದರೆ, ಕೇವಲ ಒಂದು ಸ್ಥಾನ ಜೆಡಿಸ್, ಮತ್ತೊಂದು ಸ್ಥಾನ ಕಾಂಗ್ರೆಸ್ ಮಗದೊಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿವೆ. ಈ ಬಾರಿ ಕಾಂಗ್ರೆಸ ನೆಲಕಚ್ಚಿದ್ದು ಸುಳ್ಳಲ್ಲ. ಇದರಿಂದ ಕಾಂಗ್ರೆಸ್ ನ ಪ್ರಮುಖರಿಗೆ ಮುಖಭಂಗವಾದಂತಾಗಿದೆ.
ಕಾಂಗ್ರೆಸ್ ನ ಘಟಾನುಘಟಿಗಳಾದ ಮಲ್ಲಿಕಾರ್ಜುನ್ ಖರ್ಗೆ, ಬಿ.ಕೆ ಹರಿಪ್ರಸಾದ್, ರಿಜ್ವಾನ್ ಹಾಗೂ ಜೆಡಿಸ್ ನ ದೇವೇಗೌಡ ಅವರು ಸೋಲನ್ನಪಿದ್ದಾರೆ. ಈ ಸೋಲು ರಾಜ್ಯದ ಮೈತ್ರಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ ಎಂದರೆ ಯಾವುದೇ ತಪ್ಪಿಲ್ಲ
ಇನ್ನು ಬಿಜೆಪಿಯು ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಭರ್ಜರಿ ಜಯ ದಾಖಲಿಸಿರುವುದು ಕೇಂದ್ರ ಬಿಜೆಪಿ ನಾಯಕರಿಗೆ ಮತ್ತಷ್ಟು ಸಂತಸವನ್ನಂಟು ಮಾಡಿದೆ. ಅನಂತ್ ಕುಮಾರ ನಾಯಕ್, ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ಗೆಲವು ಮತ್ತಷ್ಟು ಗಮನಾರ್ಹ.