ಹೌದು. ರಾಜ್ಯದಲ್ಲಿ ಬಿಜೆಪಿ ೨೫ ಲೋಕಸಭಾ ಸ್ಥಾನಗಳನ್ನು ಗೆದ್ದಿದೆ. ಇದರ ಜೊತೆಗೆ, ಎರಡು ವಿಧಾನಸಭಾ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಮತ್ತೊಂದು ಕ್ಷೇತ್ರವನ್ನು ಕಳೆದುಕೊಂಡಿದೆ.
ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಇತರರನ್ನು ಸೆಳೆಯುವ ತಂತ್ರವನ್ನು ಅದು ಮುಂದುವರೆಸುವ ಸಾಧ್ಯತೆ ಇದೆ. ಈ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ತಾವು ಸಿಎಂ ಆಗವೇಕು ಅನ್ನೋ ಕನಸನ್ನು ಕಟ್ಟಿದ್ದಾರೆ. ಇದು ನಿಜವಾಗಿಯುವ ಲಕ್ಷಣಗಳು ಕಂಡು ಬರುತ್ತಿವೆ.
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದೀಗ ರಾಜ್ಯದಲ್ಲಿ ನೆಲಕಚ್ಚಿವೆ. ಅಲ್ಪದೇ ಒಳಬೇಗುದಿಯಿಂದ ಅದ್ಯಾವಾಗ ಮೈತ್ರಿ ಸರಕಾರ ಉರುಳುತ್ತದೆಯೋ ತಿಳಿಯದಾಗಿದೆ. ಪ್ರತಿದಿನವೂ ಆತಂಕದಲ್ಲಿಯೇ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.