ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲದಂತೆ ಆಗಿದೆ. ಹೀಗಾಗಿ ಮಹಿಳಾ ಸುರಕ್ಷತೆಗಾಗಿ ಹೊಸ ಯೋಜನೆ ಇದೀಗ ಅನಾವರಣಗೊಂಡಿದೆ. ನಿರ್ಭಯಾ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಪಿಂಕ್ ಸಾರಥಿ ಜೀಪುಗಳನ್ನು ಖರೀದಿಸಲಾಗಿದೆ.
ಹೌದು ಮಹಿಳಾ ಸುರಕ್ಷತೆ ದೃಷ್ಟಿಯಿಂದ ಖರೀದಿಸಿದ ಈ ಪಿಂಕ್ ಸಾರಥಿ ಜೀಪ್ ಗಳನ್ನು ಮುಖ್ಯಮಂತ್ರಿ ಹೆ.ಡಿ.ಕುಮಾರಸ್ವಾಮಿ ಇಂದು ವಿಧಾನ ಸೌದದ ಮುಂಭಾಗದಲ್ಲಿ ಲೋಕಾರ್ಪಣೆ ಮಾಡಿದರು.
ಇಂದು ವಿಧಾನಸೌಧದ ಎದುರು ಸಿಎಂ ಕುಮಾರಸ್ವಾಮಿ ಹಾಗೂ ಇತರರು ವಿವಿಧ ಹೊಸ ಯೋಜನೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್ ಹಾಗೂ ಪ್ರಮುಖರು ಹಾಜರಿದ್ದರು.