ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಯಾರು ಈ ಸ್ಥಾನವನ್ನು ಅಲಂಕರಿಸಲಿದ್ದಾರೆ ಅನ್ನೋ ಪ್ರಶ್ನೆ ರಾಜ್ಯದ ಜನರಲ್ಲಿ ಮೂಡಿದೆ. ಇದಕ್ಕೆ ಅನೇಕರ ಹೆಸರುಗಳು ಕೇಳಿ ಬರುತ್ತಿದ್ದರೂ ಕೂಡ, ಮತ್ತೆ ಎಚ್. ವಿಶ್ವನಾಥ್ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷ ಆಗುತ್ತಾರೆ ಎನ್ನಲಾಗಿದೆ.
ಹೌದು, ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈ.ಎಸ್.ವಿ ದತ್ತಾ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ಅವರೇ ಮುಂದುವರೆಯಲಿದ್ದಾರೆ ಎಂದು ಹೇಳಿದರು.
(ಎಚ್.ವಿಶ್ವನಾಥ್)
ಇಡೀ ರಾಜ್ಯದಲ್ಲಿ ಓಡಾಡಿ, ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಬೇಕಿದೆ. ನಮ್ಮಂಥ ಸಾವಿರಾರು ಕಾರ್ಯಕರ್ತರಿಗೆ ಎಚ್.ವಿಶ್ವನಾಥ್ ಅವರು ಮಾರ್ಗದರ್ಶನ ಮಾಡಬೇಕು. ಹೀಗಾಗಿ ದೇವೇಗೌಡರು ಅವರ ಮನವೊಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
(ದೇವೇಗೌಡರು)
ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ವಿಶ್ವನಾಥ್ ಅವರೇ ಮುಂದುವರೆಯವ ಸಾಧ್ಯತೆ ಇದೆ. ಹೀಗಾಗಿ ಮತ್ತೊಬ್ಬರ ನೇಮಕದ ಬಗ್ಗೆ ಚರ್ಚೆ ಅನಗತ್ಯ ಎಂದರು.